ಸಂದರ್ಶಕರೆ ಆರೋಪಿಗಳು-The interviewees are the accused

 SUDDILIVE || SHIVAMOGGA

ಸಂದರ್ಶಕರೆ ಆರೋಪಿಗಳು-The interviewees are the accused   

Accused, interviewees

ಜೈಲಿನಲ್ಲಿ ಕೈದಿಗಳಿಗೆ ಗಾಂಜಾ ನೀಡಲು ಎಲ್ಲಾ ಯತ್ನಗಳು ಮುಂದುವರೆದಿದ್ದು ಮತ್ತೆ ಅಲ್ಲಿನ ಸಿಬ್ಬಂದಿಗಳು ತಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಡಿಸೆಂಬರ್ 9, 2025 ರಂದು ಸಂಜೆ ಸುಮಾರು 4:50ಕ್ಕೆ ಅಶ್ಪಾಕ್ ತಂದೆ ಅಬ್ದುಲ್ ಎಂಬ ಜೈಲಿನ ಬಂದಿಯನ್ನು ಸಂದರ್ಶಿಸಲು ಶಕೀಬ್  ಎಂಬ ವ್ಯಕ್ತಿ ಮಾರುತಿ ಸುಜುಕಿ ಕಾರಿನಲ್ಲಿ ಜೈಲಿಗೆ ಬಂದಿದ್ದ. ಈ ವೇಳೆ ಕರ್ತವ್ಯ ನಿರತರಾದ ಅಧಿಕಾರಿಗಳು ಸಂದರ್ಶಕ ಶಕೀಬ್ ಮತ್ತು ಬಂದಿಗೆ ನೀಡಲು ತಂದಿದ್ದ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ತಪಾಸಣೆಗೊಳಪಡಿಸಿದರು. ಈ ಸಂದರ್ಭದಲ್ಲಿ, ಆತ ತಂದಿದ್ದ ನಾಲ್ಕು ಜೀನ್ಸ್ ಪ್ಯಾಂಟ್‌ಗಳ ಸೊಂಟದ ಪಟ್ಟಿಯ ಒಳಗಡೆ ಹಾಗೂ ಜಿಪ್ ಪಟ್ಟಿಯಲ್ಲಿ ನಿಷೇಧಿತ ವಸ್ತುವಾದ ಗಾಂಜಾ ಇರುವುದು ಪತ್ತೆಯಾಗಿದೆ. ಗಾಂಜಾ ಪತ್ತೆಯಾದ ನಂತರ ಶಕೀಬ್‌ನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ, ಆತನ ಬಳಿ 9,910 ನಗದು ಹಣವೂ ಪತ್ತೆಯಾಗಿದೆ. ಸಂದರ್ಶಕನಾದ ಶಕೀಬ್, ಜೈಲಿನೊಳಗೆ ಗಾಂಜಾ ಹಾಗೂ ಹಣವನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

ಈಗ ಮತ್ತೊಂದು ಪ್ರಯತ್ನ ನಡೆಸಿರುವ ಮಗದೊಂದು ತಂಡ ಜೈಲಿನ ವಿಚಾರಣಬಂದಿಗೆ ಬಟ್ಟೆ ನೀಡಲು ಬಂದ ನೆಪದಲ್ಲಿ ಗಾಂಜಾ ಸಾಗಿಸುವ ಪ್ರಯತ್ನ ನಡೆಸಿದೆ. ಮೂವರಾದ ಸೂಳೆಬೈಲಿನ‌ಮೊಹಮದ್ ಅಕ್ಬರ್, ಅಜ್ಗರ್ ಅಲಿ, ಸಯ್ಯದ್ ವಾಸಿಮ್ ವಿರುದ್ಧ ದೂರು ದಾಖಲಿಸಲಾಗಿದೆ.

ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಬಂದಿಯಾದ ಸೈಯ್ಯದ್ ವಸೀಮ್ ಬಿನ್ ಸಯ್ಯದ್ ನೂರುಲ್ಲಾರನ್ನ ಭೇಟಿ ಮಾಡಲು ಡಿ.3 ರಂದು ಮೊಹಮದ್ ಅಕ್ಬರ್, ಅಜ್ಗರ್ ಅಲಿ ಕೆಎ 14 ಇಟಿ 4164 ಕ್ರಮ ಸಂಖ್ಯೆಯ ದ್ವಿಚಕ್ರವಾಹನದಲ್ಲಿ ಬಂದಿದ್ದು ಕಾರಾಗೃಹದ ಆಕ್ಸಸ್ ಕಂಟ್ರೋಲ್ ನ ಸಿಬ್ಬಂದಿಗಳು ಇವರನ್ನ ತಡೆದು ತಪಾಸಣೆ ನಡೆಸಿದ್ದಾರೆ. 

ಸಯ್ಯದ್ ವಸೀಮ್ ಇವರು 1 ಜೀನ್ಸ್ ಪ್ಯಾಂಟ್ ಮತ್ತೊಂದು ಕಾಟನ್ ಪ್ಯಾಂಟ್ ಧರಿಸಲು ತಂದಿದ್ದಾರೆ. ಈ ಎರಡೂ ಪ್ಯಾಂಟಿನ ಸೊಂಟದ ಪಟ್ಟಿಯಲ್ಲಿ ನಿಷೇಧಿತ ವಸ್ತು ಗಾಂಜಾ ವಸ್ತು ಪತ್ತೆಯಾಗಿದೆ. ಸಂದರ್ಶಕರಾಗಿ ಬಂದವರ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬಾಳೆ ಹಣ್ಣಿನ ಗೊನೆ, ಕೈದಿಗಳಿಗೆ ತರುವ ಬಟ್ಟೆಯಲ್ಲಿ, ಅಧಿಕಾರಿಗಳ ಒಳುಡುಪಿನಲ್ಲಿ ಹೀಗೆ ನಾನಾರೀತಿಯಲ್ಲಿ ಕೈದಿಗಳಿಗೆ ಗಾಂಜಾ ನೀಡಲು ಸಂದರ್ಶಕರಿಂದಲೇ ಯತ್ನ ನಡೆಯುತ್ತಿದೆ. ಈ ಮೊದಲು ಹಳೆ ಜೈಲಿನಲ್ಲಿ ಸಂದರ್ಶಕರು ಹೊರಗಿನಿಂದಲೇ ಒಖಗಿನ ಕೈದಿಗಳಿಗೆ ಗಾಂಜಾ ಬಿಸಾಕಿರುವ ಉದಾಹರಣೆಗಳಿವೆ. ಇದನ್ನ ತಡೆಯುವುದು ಸಹ ಸಿಬ್ಬಂದಿಗಳಿಗೆ ಹಾಗೂ ಜೈಲರಿಗೆ ಸವಾಲು ಸಹ ಆಗಿದೆ.

The interviewees are the accused 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close