ಹೊಳೆ ಬಸ್ ಸ್ಟಾಪ್ ನ ಹಳೆ ಸೇತುವೆಗೆ ಸಿಗುತ್ತಾ ಕಾಯಕಲ್ಪ? old bridge near the Hole bus stop

 SUDDILIVE || SHIVAMOGGA

ಹೊಳೆ ಬಸ್ ಸ್ಟಾಪ್ ನ ಹಳೆ ಸೇತುವೆಗೆ ಸಿಗುತ್ತಾ ಕಾಯಕಲ್ಪ?Is the old bridge near the Hole bus stop undergoing renovation?

Bridge, jarakihole

ಶಿವಮೊಗ್ಗ ಹೊಳೆ ಬಸ್ ನಿಲ್ದಾಣದ ಸೇತುವೆಗೆ 145 ವರ್ಷದ ಇತಿಹಾಸ ಹೊಂದಿದೆ. ಇಲ್ಲಿ ವಿಶ್ವೇಶ್ವರಯ್ಯನವರೆ ಕಟ್ಟುದ್ರಾ ಅಥವಾ ಸೇತುವೆನೇ ಸರ್ ಎಂ ವಿಶ್ವೇಶ್ವರಯ್ಯ ನವರಿಗಿಂತ ಮೊದಲ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ. 

ಎನಿವೇ!! ಇಲ್ಲಿ ವಿಷಯ ಇಷ್ಟೆ, ಸೇತುವೆ 145 ವರ್ಷದ ಹಳೆಯ ಸೇತುವೆಯಾಗಿದ್ದಕ್ಕೆ ವಯಸ್ಸಾಗಿದೆ. ಈ ಸೇತುವೆಯನ್ನ ಕೆಡವಿ ಹೊಸ ಸೇತುವೆ ನಿರ್ಮಾಣವಾಗಬೇಕಿದೆ. 2019 ರಲ್ಲಿ ತುಂಗ ನದಿಯಲ್ಲಿ ಹರಿದ 1 ಲಕ್ಷಕ್ಕೂ ಹೆಚ್ಚು ಟಿಎಂಸಿ ನೀರಿನ ವೇಗಕ್ಕೆ ಸೇತುವೆಯ ಅಪ್ರೋಚ್ ರಸ್ತೆ ಡ್ಯಾಮೇಜ್ ಆಗಿದೆ. ಈ ಸೇತುವೆ 16 ಕಾಲುಗಳಿವೆ 5 ಮತ್ತು 6 ನೇ ಕಾಲಿನ ಬಳಿ ಡ್ಯಾಮೇಜ್ ಆಗಿರುವುದರಿಂದ ವಾಹನಗಳ ಸಂಚಾರವನ್ನ ನಿಷೇಧಿಸಲಾಗಿತ್ತು. 

ಸ್ವಲ್ಪ ದಿನಗಳ ನಂತರ ಲಘು ಮತ್ತು ದ್ವಿಚಕ್ರವಾಹನಗಳಿಗೆ ಅವಕಾಶ ಮಾಡಿಕೊಟ್ಟು ಭಾರಿ ಮತ್ತು ಬಸ್ ಹಾಗೂ ಲಾರಿಗಳ ವಾಹನಗಳ ಸಂಚಾರವನ್ನ ಡೈವರ್ಟ್ ಮಾಡಲಾಗಿತ್ತು. ಈಗ ಶಿವಮೊಗ್ಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಬೆಕ್ಕಿನ ಕಲ್ಮಠದ ಎದುರಿನ ಸೇರುವ ಮಾರ್ಗ ಅತಿ ಹೆಚ್ಚು ಅಪಘಾತಗಳನ್ನ ಕಾಣಲು ಶುರು ಮಾಡಿದೆ. 

ಈ ಹಿನ್ನಲೆಯಲ್ಲಿ ಶಾಸಕ ಚೆನ್ನ ಬಸಪ್ಪ ಈ ಸೇತುವೆ ನಿರ್ಮಾಣಕ್ಕೆ ಪಿಡಬ್ಲೂಡಿ ಸಚಿವ ಸತೀಶ್ ಜಾರಕಿಹೊಳೆ ಅವರನ್ನ ಭೇಟಿ ಮಾಡಲು ಶುರು ಮಾಡಿದರು. 2023 ರಿಂದ ಶಾಸಕರು ಸಚಿವರ ಬೇಟಿ ಹಿನ್ನಲೆಯಲ್ಲಿ ಇಂದು ಶಿವಮೊಗ್ಗಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಚಿವರನ್ನ ಶಾಸಕ ಚೆನ್ನಬಸಪ್ಪ ಸೇತುವೆ ಪರಿಶೀಲನೆಯನ್ನ ಕರೆದುಕೊಂಡು ಬಂದಿದ್ದಾರೆ. 

ಸಚಿವರ ಭೇಟಿಯ ಬಗ್ಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  300 ಮೀಟರ್ ಉದ್ದದ ಸೇತುವೆಗೆ ಮತ್ತೊಮ್ಮೆ ಎಕ್ಸಪರ್ಟ್ ಕಮಿಟಿಯನ್ನ ಶಿವಮೊಗ್ಗಕ್ಕೆ ಕಳುಹಿಸುವುದಾಗಿ ಭರವಸೆ ನೀಡಿ 40 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ ಎಂಬ ಭರವಸೆಯನ್ನ ಶಾಸಕರು ಹೊರಹಾಕಿದ್ದಾರೆ.  

old bridge near the Hole bus stop

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close