ಸಿದ್ದರಾಮಯ್ಯನವರ ರುಂಡ ಚೆಂಡಾಡುವೆ. ಸದನದಲ್ಲಿ ಪ್ರಸ್ಟ್ಯೂಟು ಎನ್ನುವವರಿಗೆ, ಕೈಗೆ ಖಡ್ಗಕೊಡಿ ಎನ್ನವರ ಬಾಯಿಗೆ ದ್ವೇಷ ಭಾಷಣ ಮಸೂದೆ ಬಾಯಿಗೆ ಬೀಗಹಾಕಿದೆ-ಆಯನೂರು-Those have been silenced by the hate speech bill - Ayanur

 SUDDILIVE || SHIVAMOGGA

ಸಿದ್ದರಾಮಯ್ಯನವರ ರುಂಡ ಚೆಂಡಾಡುವೆ. ಸದನದಲ್ಲಿ ಪ್ರಸ್ಟ್ಯೂಟು ಎನ್ನುವವರಿಗೆ, ಕೈಗೆ ಖಡ್ಗಕೊಡಿ ಎನ್ನವರ ಬಾಯಿಗೆ ದ್ವೇಷ ಭಾಷಣ ಮಸೂದೆ ಬಾಯಿಗೆ ಬೀಗಹಾಕಿದೆ-ಆಯನೂರು-Siddaramaiah's runda chendaduve. Those who call  a prostitute in the House, those who say, "Put a sword in your hand," have been silenced by the hate speech bill - Ayanur

Hate, speach


ರಾಜ್ಯ ಸರ್ಕಾರ ಸಾಮಾಜಿಕ ಸ್ವಾಸ್ಥ್ಯವನ್ನ ಗಮನದಲ್ಲಿಟ್ಟುಕೊಂಡು ದ್ವೇಷ ಭಾಷಣದ ವಿರುದ್ಧ ಮಸೂದೆ ಪಾಸ್ ಮಾಡಿದೆ. ರಾಜ್ಯ ಇದನ್ನ ಮೌನವಾಗಿ ಎಲ್ಲರೂ ಸ್ವಾಗತಿಸಿದರೆ, ಬಿಜೆಪಿ ಮಾತ್ರ ವಿರೋಧಿಸುತ್ತಿರುವುದನ್ನ  ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಟುವಾಗಿ ಟೀಕಿಸಿದರು. 

ಸುಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೊರತು ಪಡಿಸಿ ಈ ಮಸೂದೆಯನ್ನ ಯಾರೂ  ವಿರೋಧಿಸಿಲ್ಲ. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟಿಸಿದೆ. ದ್ವೇಷ ಭಾಷಣ ಮಾಡುವುದು ನಮ್ಮ ಹಕ್ಕು ಎಂದು ಆ ಪಕ್ಷ ತೀರ್ಮಾನಿಸಿದಂತೆ ಕಾಣುತ್ತಿದೆ,  ಇದನ್ನ ನಾನು ಖಂಡಿಸುವುದಾಗಿ ತಿಳಿಸಿದರು. 

ಮಾತನಾಡುವುದು ಹಕ್ಕಾದರೆ ಮಾತನಾಡದಿರುವುದು ಹಕ್ಕೇ. ದ್ವೇಷ ಭಾಷಣದ ವಿರುದ್ಧ ಬಿಜೆಪಿಯ ಕೆಲ ನಾಯಕರಿಗೆ ಇದು ಸರಿಯಿಲ್ಲ. ಸಿದ್ದರಾಮಯ್ಯನವರ ರುಂಡ ಚೆಂಡಾಡುವೆ. ಸದನದಲ್ಲಿ ಪ್ರಸ್ಟ್ಯೂಟು ಎನ್ನುವವರಿಗೆ, ಕೈಗೆ ಖಡ್ಗಕೊಡಿ ಎನ್ನುವವರಿಗೆ ಬಾಯಿಗೆ ಬೀಗ ಬಿದ್ದಿದೆ. ಹಾಗಾಗಿ ಪತ್ರಿಕಾಗೋಷ್ಠಿಗಳು ಕಡಿಮೆಯಾಗಿವೆ. ತಮಗೆ ಭಾಷಣ ಹೇಳಿಕೊಡುವಂತೆ ಕನ್ನಡ ಶಿಕ್ಷಕರನ್ನ‌ ಬಿಜೆಪಿ  ಹುಡುಕುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. 

ಈ ಮಸೂದೆ ತಂದಿರುವುದು ನಾಗರೀಕ ಸಮಾಜದಲ್ಲಿ ತಂದಿರುವುದು ಅವಮಾನ. ಇದನ್ನ ತರಲು ಅನಿವಾರ್ಯ ವಾತಾವರಣ ನಿರ್ಮಾಣವಾಗಿರುವುದರಿಂದ ತರಲಾಗಿದೆ. ಉತ್ತಮ ಸಮಾಜಕ್ಕೆ ಈ ಮಸೂದೆ ಅನಿವಾರ್ಯವಾಗಿದೆ. ರಕ್ತದ ಅಙಿಷೇಕ ಮಾಡಿ ಕಾರ್ಯಕ್ರಮ ಮಾಡುವುದಾಗಿ ಶಾಸಕರೊಬ್ಬರು ಹೇಳುತ್ತಿದ್ದರು. ಇದು ಅನಾಗರೀಕತೆಗೆ ಎಳೆದೊಯ್ಯುವ ಮಾತಾಗಿದೆ ಎಂದರು. 

ಜಾತಿನಿಂದನೆ, ಧರ್ಮ ನಿಂದನೆ, ಹುಟ್ಟಿನ ಕಾರಣಕ್ಕೆ ಆಗುವ ಅಪಮಾನವನ್ನ ಬಿಜೆಪಿ ಬೆಂಬಲಿಸುತ್ತದಾ? ವಿಪಕ್ಷ ಸ್ಥಾನದಲ್ಲಿರುವ ಅವರು ತಡೆಯಬೇಕು. ಪಕಿಸ್ತಾನ್ ಜಿಂದಾಬಾದ್ ಎನ್ನಬಹುದೇ ಎಂದು ಬಿಜೆಪಿ ಪ್ರಶ್ನಿಸುತ್ನಿಸುತ್ತದೆ. ಎಲ್ಲವುದನ್ನ ಹೋಲಿಸಿ ಮಾತನಾಡುವ ಚಾಳಿಯನ್ನ ಬಿಜೆಪಿ ನಿಲ್ಲಿಸಬೇಕು. ಈಶ್ವರಪ್ಪ, ಶಾಸಕರಾದ ಚೆನ್ನಿ ಮತ್ತು ಆರಗರವರಿಗೆ ಈ ಮಸೂದೆ ಬೆಂಕಿ ಹಚ್ಚಿರಬಹುದು ಎಂದರು.

ಪೊಲೀಸ್ ಇಲಾಖೆಯ ಅಧಿಕಾರಿ ಗಳು ಮತ್ತು ಸಿವ್ವಂದಿಗಳಿಗೆ ವಾರ್ಷಿಕ ಸಂಬಳವನ್ನ 13 ತಿಂಗಳು ನೀಡಲು ತೀರ್ಮಾನಿಸಿದೆ. ರಜಾದಿನಗಳಲ್ಲೂ ಕೆಲಸಮಾಡುವುದರಿಂದ ಪೊಲೀಸರಿಗೆ ಒಂದು ತಿಂಗಳಿಗೆ ಸಂಬಳ ನೀಡಲು ತೀರ್ಮಾನಿಸಿದೆ. ಈ ಹಿಂದೆ ಕಾನ್ ಸ್ಟೇಬಲ್ ಮತ್ತು ಹೆಡ್ ಕಾನ್ ಸ್ಟೇಬಲ್ ಗೆ ಮಾತ್ರವಿತ್ತು. ಈಗ ಎಲ್ಲರಿಗೂ ಹಂಚಲಾಗಿದೆ. ಬಿಜೆಪಿ ಸರ್ಕಾರ ವಿದ್ದಾಗ ನಾನು ಆಗ್ರಹಿಸಿದ್ದೆ ಕ್ರಮ ಕೈಗೊಂಡಿರಲಿಲ್ಲ ಗೃಹಸಚಿವರು ತಂದಿದ್ದಾರೆ ಅವರನ್ನ ಸ್ವಾಗತಿಸುವೆ.

ಔರಾದ್ಗರ ವರದಿಯಲ್ಲೇ ತಾರತಮ್ಯ ಉಂಟಾಗಿದೆ. ಗಲಬೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಭತ್ಯ ನೀಡಲಾಹುತ್ತದೆ. ಇಲ್ಲಿ ತಾರತಮ್ಯವಿದೆ. ಕಾನ್ ಸ್ಟೇಬಲ್ ಗೆ 3 ಸಾವಿರ ಹೆಡ್ ಕಾನ್ಸ್ಟೇಬಲ್ ಗೆ 2000 ರೂ. ಪಿಎಸ್ಐಗೆ 1500ರೂ. ಮಾತ್ರವಿದೆ. ಹಾರ್ಟ್ ಶಿಪ್ ಅಲೋಯೆನ್ಸ್ ನಲ್ಲಿ ತಾತಮ್ಯ ಮಾಡದೆ ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದು ಒತ್ತಾಯಿಸಿದರು. 

ಸೇವಾ ಹಿರಿತನದ ಉಲ್ಲಂಘನೆಯಾಗಿದೆ.ಇತರೆ ಇಲಾಖೆಯ ಉಲ್ಲಂಘನೆಯಾಗಿಲ್ಲ. 10 ವರ್ಷ ಹಿಂದಿನ ಸಿಬ್ಬಂದಿಯ ವೇತನ ಮತ್ತು ಇಂದು ಇಲಾಖೆಗೆ ಸೇರುವ ವೇತನ ಒಂದೇ ಆಗಿದೆ. ಇದು ಸರಿಯಾಗಬೇಕು. ಶಾಸಕರಿಗೆ ಎರಡನೇ ಬಾರಿಗೆ ಆಯ್ಕೆಯಾದರೆ 20 ಬಾರಿ ಹೆಚ್ಚಳವಾಗಲಿದೆ. ಪೊಲೀಸ್ ಇಲಾಖರಯ ಸಿಬ್ವಂದಿಗಳಿಗೆ ಇಲ್ಲ.ಹುತಾತ್ಮ ದಿನಾಚರಣೆಯನ್ನ ಜಿಲ್ಲಾ ಮಟ್ಟದಲ್ಲಿ ನಡೆಯುತ್ತದೆ. ಸರ್ಕಾರ 10 ಸಾವಿರ ರೂ. ನೀಡುತ್ತದೆ. ಓಬಿ ರಾಯನ ಕಾಲದ ನಿಯಮಗಫಿವೆ ಇಲಾಖೆಯ ದುಖ ದುಮ್ಮಾನಗಳಿಗೆ ಸ್ಪಂಧಿಸಬೇಕು. ಕಾರ್ಮಿಕ ಇಲಾಖೆಯ ನಿಯಮಾವಳಿಗೆ ಒಳಗಾದರೆ ಹೆಚ್ಚು ವೇತನ ಸಿಗುತ್ತಿತ್ತು. ಪೊಲೀಸರು  ಶೋಷಣೆಗೆ ಒಳಗಾಗುತ್ತಿದೆ. 14 ಗಂಟೆ ಅವರು ಕೆಲಸ ಮಾಡುತ್ತಾರೆ. ಗೃಹಸಚಿವರು ಇದನ್ನ ಸರಿಪಡಿಸುವ ವಿಶ್ವಾಸವಿದೆ.

ಈ ಹಿಂದೆ ಇದ್ದ ಗೃಹಸಚಿವರ ಗಮನಕ್ಕೆ ಸಚಿವ ಸಂಪುಟದಲ್ಲಿ ತಂದಿದ್ದೆ ನಮ್ಮ ಜಿಲ್ಲೆಯವರಾದ ಗೃಹಸಚಿವರು ಏನನ್ನೂ ಮಾಡಲಿಲ್ಲ. ಪೊಲೀಸರ ಮೇಲೆ ಪ್ರೀತಿಯೂ ಇದೆ ಕೋಪವೂವಿದೆ. ನೌಕರರಾಗಿರುವುದರಿಂದ ಅವರಿಗೆ ಆಗುವ ವ್ಯತ್ಯಾಸ ಸರಿಪಡಿಸಬೇಕಿದೆ ಎಂದರು. 

ನಾರ್ಕೋಟಿಸ್ ಸಂಸ್ಥೆ ಇದ್ದರೂ ಎಸ್ಪಿ ಅವರು ಗಾಂಜಾ ಹಿಡಿಯುತ್ತೇವೆಎಂದಿದ್ದಾರೆ ನಾರ್ಕೊಟಿಸ್ ಇಲಾಖೆ ಇರುವುದೇಕೆ? ಪೊಲೀಸರಸಹಕಾರವಿಲ್ಲದೆ ಗಾಂಜಾ ವ್ಯವಹಾರ ನಡೆಯಲ್ಲ. ಎಸ್ಪಿಯವರು ಯಾರನ್ನೂ ಹಿಡಿಯೋದು ಬೇಡ ಪೊಲೀಸ್ ಇಲಾಖೆಯ ಪಿಸಿಗಳನ್ನ  ಹಿಡಿದ್ರೆ ಗಾಂಜಾವನ್ನ ಇಲಾಖೆ ಹೊಸಕಿ ಹಾಕಬಹುದು ಎಂದು ಸಲಹೆ ನೀಡಿದರು. 

ಬಳ್ಳಾರಿ ಘಟನೆಯಲ್ಲಿ ಎಸ್ಪಿ ಸ್ಪಾಟ್ ಗೆ ಹೋಗಲಿಲ್ಲ ಘಟನೆ ನಡೆದು 4 ಗಂಟೆಗಳವರೆಗೆ ಸ್ಥಳಕ್ಕೆ ಹೋಗಲಿಲ್ಲ. ಮೇಲಧಿಕಾರಿಗೆ ವರದಿ ನೀಡಬೇಕಿತ್ತು. ಮಾಡಲಿಲ್ಲ. ಇದು ತಪ್ಪಾದಂತೆ ಕಾಣುತ್ತದೆ. ಘಟನೆ ಬಗ್ಗೆ ಸರ್ಕಾರಕ್ಕೆ ಇರುವ ಮಾಹಿತಿ ನನಗೆ ಇಲ್ಲ. ಹಾಗಾಗಿ ಆಡಳಿತಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಸರ್ಕಾರ ತೆಗೆದುಕೊಂಡಿದೆ ಎಂದರು. 

Those have been silenced by the hate speech bill - Ayanur   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close