ಇಂದಿರಾಗಾಂಧಿ ಕಿಟ್ ಬದಲು ಮಹಾತ್ಮಗಾಂಧಿ ಹೆಸರನ್ನ ಕಾಂಗ್ರೆಸ್ ಯಾಕೆ ಇಡಲಿಲ್ಲ-ಈರಣ್ಣ ಕಡ್ಡಾಡಿ-Why didn't Congress name the kit after Mahatma Gandhi instead of Indira Gandhi - Iranna Kaddady

SUDDILIVE || SHIVAMOGGA
ಇಂದಿರಾಗಾಂಧಿ ಕಿಟ್ ಬದಲು ಮಹಾತ್ಮಗಾಂಧಿ ಹೆಸರನ್ನ ಕಾಂಗ್ರೆಸ್ ಯಾಕೆ ಇಡಲಿಲ್ಲ-ಈರಣ್ಣ ಕಡ್ಡಾಡಿ-Why didn't Congress name the kit after Mahatma Gandhi instead of Indira Gandhi - Iranna Kaddady

ಆಹಾರ ನಿಗಮದ (ಎಫ್ ಸಿಐ) ಮೂಲಕ 50 ಲಕ್ಷ ಮೆಟ್ರಿಕ್ ಟನ್ ವರ್ಷಕ್ಕೆ ವಿತರಿಸುತ್ತೆವೆ. ಈಗ 38 ಮೆಟ್ರಿಕ್ ಟನ್ ಆಹಾರ ಧಾನಗಳನ್ನ ತಲುಪಿಸಲಾಗಿದೆ ಎಂದು ಎಂಪಿ ಈರಣ್ಣ ಕಡಾಡಿ ತಿಳಿಸಿದರು. 

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶಾಲಾಮಕ್ಕಳಿಗೆ 66 ಸಾವಿರ ಮೆಟ್ರಿಕ್ ಟನ್, ಹಾಸ್ಟೆಲ್ ಗಳಿಗೆ ಮೆಟ್ರಿಕ್ ಟನ್ ವಿತರಿಸಲಾಗಿದೆ. ವಿತರಣೆಯಲ್ಲಿ 1% ಸಾರಿಗೆಯಲ್ಲಿ ವೇಸ್ಟ್ ಆಗುತ್ತಿದೆ ಎಂಬ ಮಾತಿತ್ತು. ಈಗ ಅದನ್ನೂ ಸಹ ಸುಧಾರಿಸಲಾಗುವುದು. ಭಾರತೀಯ ಆಹಾರ ನಿಗಮ ಎಂಎಸ್ಪಿ ದರದಲ್ಲಿ ಮೊದಲು ಖರಿದಿಸಲಾಗುತ್ತಿದೆ. 2009 ರಲ್ಲಿ ರಾಜ್ಯ ಸರ್ಕಾರ ಖರೀದಿಸಲು ಮುಂದಾದ ನಂತರ ಎಫ್ ಸಿಐ ಹಿಂದೆ ಸರಿಯಿತು ಎಂದು ವಿವರಿಸಿದರು. 

ಕರ್ನಾಟಕದಲ್ಲಿ ರೈತರ ಉತ್ಪಾದನೆಯನ್ನ ಖರೀದಿಸಿ ಇಗಾಗಲೇ ನಿರ್ವಹಿಸಬಹುದಿತ್ತು. ಸರಿಯಾದ ಖರೀದಿಯಾಗದ ಕಾರಣ ಪಂಚಾಬ್ ನಿಂದ ಆಹಾರ ಧಾನ್ಯ ಖರೀದಿಸಲಾಗುತ್ತಿದೆ. 10 ಕೆಜಿ ಅನ್ನ ಭಾಗ್ಯ ಕೊಡುವುದಾಗಿ ಹೇಳಲಾಗಿತ್ತು. ಈಗ ಅಕ್ಕಿಯನ್ನ 5 ಕೆಜಿಗೆ ಇಳಿಸಿ ಉಳಿದಿದ್ದನ್ನ ದಿವಸಿ ಧಾನ್ಯ ನೀಡಲು ತೀರ್ಮಾನಿಸಿದೆ. ಅದನ್ನ ಇಂದಿರಾಕಿಟ್ ಎಂಬ ಹೆಸರಿನ ಅಡಿ ಕೊಡುವುದಾಗಿ ಘೋಷಣೆಯಾಗಿದೆ. ಕಿಟ್ ನಲ್ಲಿ 1 ಕಿಜಿ ತೂಗರಿ ಒಂದು ಲೀಟರ್ ಎಣ್ಣೆ ಸೇರಿ 6 ಉತ್ಪಾದನೆ ವಸ್ತುಗಳನ್ನ ನೀಡುವ ಮೂಲಕ 442 ರೂ. ಕಿಟ್ ಕೊಡಲಾಗುತ್ತಿದೆ. ಸರ್ಕಾರಕ್ಕೆ 156 ಕೋಟಿ ಲಾಭವಾಗಲಿದೆ ಎಂಬ ಕಾರಣದಿಂದ ರಾಜ್ಯ ಸರ್ಕಾರ ಈ ಯೋಜನೆ ಕೈಗೊಂಡಿದೆ. ಎಫ್ ಸಿಐ ಸಾಕಷ್ಟುಆಹಾರ ಪೂರೈಕೆ ಮಾಡಿದೆ ಎಂದರು.

ಕಾಂಗ್ರೆಸ್ ಇಂದಿರಾ ಕಿಟ್ ಹೆಸರು ಇಟ್ಟುಕೊಂಡು ದ್ವಂಧ್ವ ನೀತಿ ಮಾಡುತ್ತಿದೆ. ಇದೇ ಗುಲಾಮಗಿರಿ ಪದ್ಧತಿಯನ್ನ ಕಾಂಗ್ರೆಸ್ ಆರಂಭಿಸಿದೆ. ಇಲ್ಲೂ ಮಹಾತ್ಮಗಾಂಧಿ ಹೆಸರನ್ನ ಯಾಕೆ ಇಡಲಿಲ್ಲ. ಕೇಂದ್ರದ ವಿಬಿಜಿ ರಾಮ್ ಜಿ ಹೆಸರಿಗೆ ಪ್ರತಿಭಟನೆಗೆ ಮುಂದಾಗಿ ರುವ ಕಾಂಗ್ರೆಸ್ ಯಾಕೆ ಇಂದಿರಾ ಕಿಟ್ ಹೆಸರಿಡುವ ಬದಲು ಮಹಾತ್ಮ ಗಾಂಧಿ ಕಿಟ್ ಎಂಬ ಹೆಸರನ್ನ ಇಡಲಿಲ್ಲ ಎಂದು ಪ್ರಶ್ನಿಸಿದರು.

ಎಂಎಸ್ಪಿ ನಿರ್ಣಯವನ್ನು ಕೇಂದ್ರ ಮಾಡಲಿದೆ 27 ಬೆಳೆಗೆ  ಆಹಾರ ವಸ್ತುಗಳಿಗೆ ನಿರ್ವಹಿಸುತ್ತದೆ. ರಾಜ್ಯ ಸರ್ಕಾರ 81.31 ಕೋಟಿ 2021 ರಿಂದ ತೊಂದರೆ ಇಲ್ಲದಂತೆ ವಿತರಿಸಲಾಗುತ್ತಿದೆ. 4.42 ಕೋಟಿ ಆಹಾರ ಧಾನ್ಯ ನೀಡಲಾಗುತ್ತಿದ್ದರೂ 30 ತಿಂಗಳು ನೀಡಬೇಕಿತ್ತು ಅದನ್ನ 11 ತಿಂಗಳು ನೀಡಿ ಜನರನ್ನ ವಂಚಿಸಲಾಗುತ್ತಿದೆ ಎಂದರು. 

ನಕಲಿ ಗಾಂಧಿಯಿಂದ ಮತ ಪಡೆದು ಅಧಿಕಾರಕ್ಕೆ ಬರುತ್ತಿದ್ದ ಕಾಂಗ್ರೆಸ್ 83 ಯೋಜನೆಗೆ ಇಂದಿರಾಗಾಂಧಿ ಹೆಸರಿಡಾಗಿದೆ.63 ಯೋಜನೆಗೆ ರಾಜೀವ್ ಗಾಂಧಿ ಹೆಸರಿಟ್ಟಿದೆ. ಮಹಾತ್ಮಗಾಂಧಿ ಹೆಸರಿನಲ್ಲಿ ಬಹಳ ಕಡಿಮೆ ಯೋಜನೆಗೆ ಹೆಸರಿಟ್ಟಿದೆ. ಇದೇ ವಿಬಿಜಿ ರಾಮ್ ಜಿ ಹೆಸರು ಮೊದಲು ಆರಂಭದಲ್ಲಿ 1980 ರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗವೆಂದಿತ್ತು. 1989 ರಲ್ಲಿ ಜವಹಾರ್ ಉದ್ಯೋಗ ಯೋಜನೆ ಎಂದಾಯಿತು, 2004 ರಲ್ಲಿ ಕೂಲಿಗಾಗಿ ಕಾಳು ಎಂದು ಹೆಸರಿಡಲಾಯಿತು. 2009 ರ ನಂತರ ಉದ್ಯೋಗ ಖಾತ್ರಿಗೆ ಮಹಾತ್ಮಗಾಂಧಿ ಹೆಸರಿಡಲಾಯಿತು ಕಾಲಕಾಲಕ್ಕೆ ಇದರ ಹೆಸರು ಬದಲಿಸಲಾಗಿದೆ. 

ಹಾಗೆ ಈ ಯೋಜನೆಯಲ್ಲಿ ಭ್ರಷ್ಠಾಚರಗಳಿದ್ದವು. ವಿಬಿಜಿ ರಾಮ್ ಜಿ ಯೋಜನೆಯಲ್ಲಿ 15 ದಿನಗಳಲ್ಲಿ ಹಣ ತಲುಪುವಂತಾಗಿದೆ ಉದ್ಯೋಗ ನೀಡದಿದ್ದರೆ ಭತ್ಯೆ ನೀಡಬೇಕು ಎಂದಿದೆ. ಗ್ರಾಮಪಂಚಾಯಿತಿಗೆ ಕೆಲಸ ನಿಗದಿ ಮಾಡಲಿದೆ. ಜನರನ್ನ ಕಾಂಗ್ರೆಸ್ ರಾಮ್ ಎಂಬ ಹೆಸರಿಟ್ಟ ಕಾರಣ ದಿಕ್ಕು ತಪ್ಪಿಸಲು ಹೊರಟಿದೆ.  ಉದ್ಯೋಗ ಖಾತ್ರಿ ಈ ಹಿಂದೆ ರಾಜ್ಯಗಳಿಗೆ ಬಂಗಾರದ ಮೊಟ್ಟೆ ಯಿಡುವ ಯೋಜನೆಯಾಗಿತ್ತು. ಇಗ ಭ್ರಷ್ಠಾಚಾರ ತಪ್ಪಿಸಲಾಗುತ್ತಿದೆ. ರಾಮ್ ಎಂಬ ವಿಷಯ ಕಾಂಗ್ರೆಸ್ ಗೆ ನೋವಾಗಿದೆ. ನಕಲಿ ಗಾಂಧಿ ಹೆಸರಿಡಲು ಹೊರಟ ಕಾಂಗ್ರೆಸ್ ಅಸಲಿ ಗಾಂಧಿ ಹುಟುಕುವ ನಾಟಕವಾಡುತ್ತಿದೆ ಎಂದರು. 

ಭಾರತ ಅಕ್ಕಿ ನೀಡಲು ಟನ್ ಗಟ್ಟಲೆ ಕೊಡಲು ಈಗಲೂ ನಾವುಸಿದ್ದವಾಗಿದ್ದೇವೆ. ಆಹಾರ ನಿಗಮದಲ್ಲಿ ಜನರಿಗೆ 50 ಕೆಜಿಯಿಂದ ಟನ್ ಗಟ್ಟಲೆ ಜನಸಾಮಾನ್ಯರಿಗೆ ನೀಡಲು ತೀರ್ಮಾನಿಸಿದೆ.  ನ್ಯಾಷನಲ್ ಫುಡ್ ಸೆಕ್ಯೂರಿಟಿ ಅಡಿಯಲ್ಲಿ ರಾಜ್ಯ ಸರ್ಕಾರ ಕೇಂದ್ರದ ನೀತಿ ನಿಯಮಗಳನ್ನ ರಾಜಗಯಗಳು ಅಳವಡಿಸಿಕೊಳ್ಳಬೇಕಿದೆ. ಎಂಎಸ್ಪಿ ಖರೀದಿ ಕೇಂದ್ರ ಆರಂಭಿಸಬೇಕಿದೆ. ಇಡೀದೇಶಕ್ಕೆ 900 ಲಕ್ಷ ಟನ್ ಆಹಾರ ಧಾನ್ಯಗಳನ್ನ ಎಫ್ ಸಿಐ  ಇಟ್ಟುಕೊಂಡಿದ್ದೇವೆ. 300 ಲಕ್ಷ ಟನ್ ಬಲ್ಕ್ ಸ್ಟಾಕ್ ಇಟ್ಟುಕೊಂಡಿರುತ್ತೇವೆ. ಪೀಕ್ ನಲ್ಲಿ ಆಹಾರ ಧಾನ್ಯ ಬಾರದಿದ್ದರೂ ಈ 300 ಲಕ್ಷ ಟನ್ ಆಹಾರಧಾನ್ಯ ಬಳಕೆಯಾಗಲಿದೆ. ಪೌಲ್ಟ್ರಿ ಸೇರಿದಂತೆ ಐದು ವಿವಿಧ ಭಾಗಗಳಿಗೆ ಅಕ್ಕಿ ಸಾಗಿಸಲಾಗುತ್ತಿದೆ ಎಂದರು. 

2009 ಕ್ಕಿಂತ ಮೊದಲು ಎಫ್ ಸಿಐ ಆಹಾರ ಕೇಂದ್ರ ಖರೀದಿಸುತ್ತಿತ್ತು. ನಂತರ ರಾಜ್ಯ ಸರ್ಕಾರ ತಕರಾರು ತೆಗೆಯಿತು. ಹಾಗಾಹಿ ಎಫ್ ಸಿಐ ಹಿಂದೆ ಸರಿದು ಖರೀದಿ ಕೇಂದ್ರವನ್ನ ಸ್ಥಗಿತಗೊಳಿಸಿತು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close