ಸುರೇಶ್ ಸ್ವಾಮಿ ರಾವ್ ಸೇರಿದಂತೆ ಐವರ ವಿರುದ್ಧ ದೂರು ದಾಖಲು- Complaint filed against five people including Suresh Swami Rao

 SUDDILIVE || HOSANAGARA

ಸುರೇಶ್ ಸ್ವಾಮಿ ರಾವ್ ಸೇರಿದಂತೆ ಐವರ ವಿರುದ್ಧ ದೂರು ದಾಖಲು- Complaint filed against five people including Suresh Swami Rao   



ಹೊಸನಗರದ ಬಸ್ ನಿಲ್ದಾಣದ ಎದುರೇ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆಗೆ ಸಂಬಂಧಪಟ್ಟಂತೆ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಮಾಜಿಶಾಸಕರ ಪುತ್ರ ಸುರೇಶ್ ಸ್ವಾಮಿರಾವ್ ಹಾಗೂ ಸುರೇಂದ್ರ ಕೋಟ್ಯಾನ್ ಸೇರಿದಂತೆ ಐದು ಜನರ ವಿರುದ್ಧ ಎಫ್ಐಆರ್ ಆಗಿದೆ. 

ಅದರಂತೆ ಸುರೇಂದ್ರ ಕೋಟ್ಯಾನ್ ಸಹ ಮಾಧವ ಶೆಟ್ಟಿ ಎಂಬುವರು ಹಲ್ಲೆ ನಡೆಸಿರುವ ಬಗ್ಗೆ ಪ್ರತಿದೂರು ದಾಖಲಿಸಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ವೇಳೆ ಹೊಸನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿಗೆ ಗಲಾಟೆಯಾಗಿದೆ. 

ಜ.1 ರಂದು ಬೆಳಗಿನ ಜಾವ ಸುಮಾರು 2 ಗಂಟೆಗೆ  ಹೊಸನಗರ ಬಸ್ ನಿಲ್ದಾಣದ ಬಳಿಯಿರುವ ಈಡಿಗರ ಭವನದ ಎದುರು ಈಡಿಗ ಸಂಘದಲ್ಲಿ ಹಗರಣವಾಗಿದೆ ಎಂದು ಸುರೇಂದ್ರ ಕೋಟ್ಯಾನ್ ಮತ್ತು ಸುರೇಶ್ ಸ್ವಾಮಿರಾವ್ ಪ್ರತಿಭಟನೆಗೆ ಕುಳಿತಿದ್ದರು. ಅದೇ ವೇಳೆ ಹೊಸನಗರದ ಜಯನಗರದಿಂದ KA 51 ಎಂ ಎ 1607 ಕ್ರಮ ಸಂಖ್ಯೆಯ ಕಾರಿನಲ್ಲಿ ಮಾಧವ ಶೆಟ್ಟಿ ಎಂಬುವರು ಬೆಂಗಳೂರಿಗೆ ಹೊರಿದ್ದರು. 


ಹೊಸನಗರ ಬಸ್ ನಿಲ್ದಾಣದ ಮುಂದೆ ಮಧ್ಯರಾತ್ರಿಯಲ್ಲಿ ಜನಸೇರಿದ್ದಕ್ಕೆ ಮಾಧವ ಶೆಟ್ಟರು ಕಾರಿನ ಗ್ಲಾಸ್ ತೆಗೆದು ಕುತೂಹಲಕ್ಕೆ ಏನದು ಎಂದು ನೋಡಿದ್ದಾರೆ. ಅಷ್ಟೆ ನೀನು ಏನು ನೋಡೋದು ಎಂದು ಸುರೇಂದ್ರ ಕೋಟ್ಯಾನ್ ಶೆಟ್ಟರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. 

ಈಡಿಗರ ಸಭಾಭವನದ ಮುಂದೆ ಇನ್ನೋವಾ ಕಾರಿನಲ್ಲಿದ್ದ ಸುರೇಶ್ ಸ್ವಾಮಿ ರಾವ್ ಶೆಟ್ಟರಿಗೆ ಮುಷ್ಠಿಕಟ್ಟಿ ತಲೆಗೆ ಹೊಡೆದಿದ್ದಾರೆ. ಮಾಧವ ಶೆಟ್ಟರು ತನ್ನನ್ನ ಕೊಲೆ ಮಾಡುವ ಉದ್ದೇಶದಿಂದ ಕೋಟ್ಯಾನ್ ಸುರೇಶ್ ಸ್ವಾಮಿ ರಾವ್, ಗೋಪಾಲ, ಸಂತೋಷ, ಶಶಾಂಕ್ ವಿರುದ್ಧ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿರುವುದಾಗಿ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಅದರಂತೆ ಮಾಧವ ಶೆಟ್ಟಿಯ ಮೇಲೂ ಸುರೇಂದ್ರ ಕೋಟ್ಯಾನ್ ದೂರು ನೀಡಿದ್ದಾರೆ. ಸ್ವಾಮಿರಾವ್ ವಿರುದ್ಧ ಇದು ಎರಡನೇ ಪ್ರಕರಣವಾಗಿದೆ. ಈ ಹಿಂದೆ ರೈಲ್ವೆ ಗೇಟ್ ವಿಚಾರದಲ್ಲಿ ಗಲಾಟೆಯಾಗಿ ಅಂದರ್ ಆಗಿದ್ದರು.   ಮಾಹಿತಿ ಪ್ರಕಾರ ಈಡಿಗ ಸಂಘದಲ್ಲಿ ಭ್ರಷ್ಠಾಚಾರ ನಡೆದಿದೆ ಎಂಬ ಆರೋಪದ ಅಡಿ ಆಮರಣಾಂತರ ಪ್ರತಿಭಟನೆಗೆ ಸ್ವಾಮಿ ರಾವ್ ಮತ್ತುಅವರ ತಂಡ ಮುಂದಾಗಿತ್ತು. ಈ ಘಟನೆಯೂ ಸಹ ಬಳ್ಖಾರಿಯ ರೀತಿಯಲ್ಲಿ ನಡೆದಿದೆ ಎಂದು ಸ್ವಾಮಿರಾವ್ ಆಪ್ತವಲಯ ದೂರಿದೆ. 

Complaint filed against five people including Swami Rao

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close