SUDDILIVE || SHIVAMOGGA
ಮೃತ ಸಂಕೇತ್ ಭಾವಚಿತ್ರವಿಟ್ಟು ಎಬಿವಿಪಿ ಬೃಹತ್ ರಸ್ತೆ ತಡೆ-ABVP blocks huge road with portrait of deceased Sanketಫೆಬ್ರುವರಿ 24ರಂದು 16 ವರ್ಷದ ಸಂಕೇತ ಎಂಬ ಶಾಲಾ ವಿದ್ಯಾರ್ಥಿಯ ಹತ್ಯೆ ನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಘಟಕ ಇಂದು ನಗರದ ಎಂಆರ್‌ಎಸ್ ಸರ್ಕಲ್ ನಲ್ಲಿ ಸಂಕೇತನ ಭಾವಚಿತ್ರವಿಟ್ಟು ಬೃಹತ್ ಪ್ರತಿಭಟನೆ ನಡೆಸಿದೆ.
ಶಾಲಾ ವಿದ್ಯಾರ್ಥಿಗಳ ನಡುವೆ ಆದಂತ ಗಲಾಟೆಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆ ನಡೆದಿದೆ. ಆದರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ತಪ್ಪಿತಸ್ಥರು ಯಾವುದೇ ಜಾತಿ ಧರ್ಮ ನೋಡದೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಸಣ್ಣ ಪುಟ್ಟ ಮಕ್ಕಳಿಗೆ ಗಾಂಜಾ ಸಿಗುತ್ತದೆ ಎಂದರೆ ಸ್ಥಳೀಯ ಪೊಲೀಸರಿಗೆ ಗಾಂಜಾ ಪತ್ತೆಯಾಗಲ್ಲ ಎಂದರೆ ಆಶ್ಚರ್ಯವಾಗುತ್ತದೆ. ರಾಜ್ಯದ ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆ ಡ್ರಗ್ಸ್ ಜಾಲವನ್ನು ಭೇದಿಸುವಲ್ಲಿ ವಿಫಲವಾಗಿವೆ ಗ್ರಹ ಇಲಾಖೆ ಯಿಂದ ತಮ್ಮ ಪ್ರಥಮ ಆದ್ಯತೆವನ್ನಾಗಿ ಮಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದೆ.
ಸಂಕೇತ ಹತ್ಯದ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಭಯದ ವಾತಾವರಣದಲ್ಲಿದ್ದಾರೆ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣಕ್ಕೆ ಬೇಕಾದ ಪೂರಕ ವಾತಾವರಣ ಇಲ್ಲದಂತಾಗಿದೆ ಇಲಾಖೆಯು ವಿದ್ಯಾರ್ಥಿಗಳ ಸುರಕ್ಷತೆ ಹಾಗು ಡ್ರಿಕ್ಸ್ ಜಾಲ ಭೇದಿಸುವುದಕ್ಕೆ ಸೂಕ್ತ ಕಾರ್ಯಕ್ರಮವನ್ನು ನಡೆಸಿ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಬೇಕಿದೆ ಹಾಗೂ ಓದುವ ವಾತಾವರಣವನ್ನು ಸೃಷ್ಟಿಸಬೇಕಿದೆ ನಗರದಲ್ಲಿ ಡ್ರಗ್ಸ್ ಅಂತ್ಯದಂತೆ ನೋಡಿಕೊಳ್ಳಲು ಪೊಲೀಸರು ಕಟ್ಟೆಚರ ವಹಿಸಬೇಕಿದೆ ಎಂದು ಮನವಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಮೃತ ಸಂಕೇತ ಕುಟುಂಬಕ್ಕೆ ನ್ಯಾಯ ಒದಗಿಸಿ ಗಾಂಜಾಬಿಷನಿಗಳು ಸಮಾಜಕ್ಕೆ ಮಾರಕ, ನಿಷ್ಕ್ರಿಯ ಪೊಲೀಸ್ ಇಲಾಖೆ ಕುಸಿದಿರುವ ಕಾನೂನು ಸುಬೇವ್ಯವಸ್ಥೆ ಎಂದು ಮೊದಲಾದ ಫ್ಲಾಕಾರ್ಡ್ ಹಿಡಿದು ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರು ನಂತರ ಸ್ಥಳಕ್ಕೆ ಬಂದ ಅಡಿಷನಲ್ ಎಸ್ಪಿ ಅವರಿಗೆ ಮೃತ ಸಂಕೇತ ಅವರ ಸಹೋದರಿಯ ಮೂಲಕ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಅಡಿಷನಲ್ ಪೊಲೀಸ್ ಇಲಾಖೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ ಸೇತುಬಂಧು ಮೂಲಕ ಗಾಂಜಾ ಪ್ರಕರಣವನ್ನು ಭೇದಿಸುತ್ತಿದ್ದೇವೆ ಪೊಲೀಸ್ ವೆಬ್ಸೈಟ್ ಅನ್ನು ಸಹ ನಿರ್ವಹಿಸುತ್ತಿದ್ದು ಅಲ್ಲಿ ದೂರು ನೀಡಿದಲ್ಲಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಾನೂನು ಕ್ರಮ ಜರುಗಿಸುವುದನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು
ABVP blocks huge road with portrait of deceased Sanket


