ರಸ್ತೆ ಅಪಘಾತವೆಂದು ಬಿಂಬಿಸಿ ಕೊಲೆ ನಡೆಸಿದ ಆರೋಪಿಗೆ ಜೀವಾವಧಿ ಶಿಕ್ಷೆ- Life sentence for murder accused who faked a road accident

SUDDILIVE || SHIVAMOGGA

ರಸ್ತೆ ಅಪಘಾತವೆಂದು ಬಿಂಬಿಸಿ ಕೊಲೆ ನಡೆಸಿದ ಆರೋಪಿಗೆ ಜೀವಾವಧಿ ಶಿಕ್ಷೆ-  Life sentence for murder accused who faked a road accident   

Life, sentences



ರಸ್ತೆ ಅಪಘಾತದಲ್ಲಿ ವ್ಯಕ್ತಿಯ ಸಾವು ನ್ಯಾಯಾಲಯದಲ್ಲಿ ಕೊಕೆ ಎಂದು ಸಾಬೀತಾಗಿದ್ದು ಕೊಲೆ ಮಾಡಿದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 35 ಸಾವಿರ ರೂ. ಹಣ ದಂಡ ವಿಧಿಸಿ ತೀರ್ಪು ನೀಡಿದೆ. 

ಶಿಕಾರಿಪುರ ತಾಲ್ಲೂಕಿನ ಚಿಕ್ಕಮಾಗಡಿ ಗ್ರಾಮದ ವಾಸಿ ಶಂಕರ್ ನಾಯ್ಕ್ (38 ವರ್ಷ) ರವರ ಹೆಂಡತಿಯೊಂದಿಗೆ ಚಿಕ್ಕಮಾಗಡಿಯ ನಿವಾಸಿ ಮಂಜುನಾಯ್ಕ್ ಬಿನ್ ಕೂಬ್ಯಾ ನಾಯ್ಕ್, (28) ಸಲುಗೆಯನ್ನಿಟ್ಟುಕೊಂಡಿದ್ದು, ಅದನ್ನು  ಮುಂದುವರೆಸಲು ಶಂಕರ್ನಾಯ್ಕ ನು ಅಡ್ಡಿಯಾಗಿದ್ದು, ಈತನನ್ನು ಕೊಲ್ಲುವ ಉದ್ದೇಶದಿಂದ, ದಿನಾಂಕ:27-08-2023 ರಂದು ರಾತ್ರಿ ಸುಮಾರು 10:15 ಗಂಟೆ ಸಮಯದಲ್ಲಿ ಶಂಕರ್ ನಾಯ್ಕ್ ಮತ್ತು ಚಂದ್ರಾ ನಾಯ್ಕ್ ರವರು ಬೈಕಿನಲ್ಲಿ ಬರುತ್ತಿರುವಾಗ ಆರೋಪಿತನು ತನ್ನ ಕಾರಿನಿಂದ ಬೈಕಿಗೆ ಡಿಕ್ಕಿಹೊಡೆಸಿ, ಕಾರನ್ನು ಚಂದ್ರಾ ನಾಯ್ಕನ ಮೈಮೇಲೆ ಹಾಗೂ ಶಂಕರ ನಾಯ್ಕನ  ಕಾಲಿನ ಮೇಲೆ ಹತ್ತಿಸಿದ್ದನು.  

ಇದರಿಂದ ಚಂದ್ರಾ ನಾಯ್ಕ್ ಮೃತಪಟ್ಟಿದ್ದು, ಶಂಕರ್ ನಾಯ್ಕ್ ಈತನಿಗೆ ತೀವ್ರ ಸ್ವರೂಪದ ಗಾಯವಾಗಿದ್ದು,  ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಶಿರಾಲಕೊಪ್ಪ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿತ್ತು. 

 ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಡಿವೈಎಸ್ಪಿ ಶಿವಾನಂದ ಮದರಕಂಡಿ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. 

 ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಮಮತಾ ಬಿ.ಎಸ್ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಅಭಯ್ ಧನಪಾಲ್ ಚೌಗಲ ರವರು ದಿನಾಂಕ:25-02-2026 ರಂದು ಆರೋಪಿತನಿಗೆ ಕಲಂ 302,307 ಐಪಿಸಿ ಕಾಯಿದೆಗಳಿಗೆ ಜೀವಾವಧಿ ಶಿಕ್ಷೆ & 35,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತದೆ.

Life sentence for murder accused who faked a road accident  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close