SUDDILIVE || BHADRAVATHI
ಅಡಿಕೆ ಗೊನೆ ಇಳಿಸುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು-Man dies after being electrocuted while unloading a sack of areca nuts
ಅಡಿಕೆ ಕೀಳುವ ಗಾಳ ವಿದ್ಯುತ್ ತಂತಿಗೆ ಸಿಲುಕಿಕೊಂಡ ಪರಿಣಾಮ ಅಡಿಕೆ ಮರ ಹತ್ತಿದ್ದ ವ್ಯಕ್ತಿ ಕೆಳಗೆ ಬಿದ್ದು ಮೃತಪ್ಟಿರುವ ಘಟನೆ ನಿನ್ನೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ ಕೂಡ್ಲಿಗೆರೆಯಲ್ಲಿ ಮಹೇಶ್ವರಪ್ಪ ಎಂಬುವರ ತೋಟಕ್ಕೆ ಅಡಿಕೆ ಕೀಳಲು ತೆರಳಿದ್ದ ಅತ್ತಿಗುಂದದ ನಿವಾಸಿ ರೇಣುಕಪ್ಪ (35) ಅಡಿಕೆ ಮರ ಹತ್ತಿ ಅಡಿಕೆ ಕೀಳುತ್ತಿದ್ದರು. ಅಡಕೆ ಇಳಿಸಲು ಕೊನೆಯ ಮರ ಉಳಿದುಕೊಂಡಿದ್ದು, ಗೊನೆಗೆ ಹಾಕಿದ್ದ ಗಾಳ ತೋಟದಲ್ಲಿ ಹಾದು ಹೋದ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ರೇಣುಕಪ್ಪ ವಿದ್ಯುತ್ ಶಾಕ್ ನಿಂದ ಕೆಳಗೆ ಬಿದ್ದದ್ದರು.
ಅವರನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದರು. ಪ್ರಕರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಿನ್ನೆ ರಾತ್ರಿ ಅಸ್ವಾಭಾವಿಕ ಸಾವೆಂದು ದೂರು ದಾಖಲಾಗಿದೆ.
ಇಂದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ರೇಣುಕಪ್ಪನವರ ಕುಟುಂಬಕ್ಕೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ.
Man dies after being electrocuted while unloading a sack of areca nuts
