SUDDILIVE || SHIVAMOGGA
ಶಿವಮೊಗ್ಗ-ಕೀಯಾ ಶೋರೂಂ ಬಳಿ ಸರಣಿ ರಸ್ತೆ ಅಪಘಾತ- Shivamogga-Serial road accident near Kia showroom
ಶಿವಮೊಗ್ಗದ ಬೈಪಾಸ್ ರಸ್ತೆಯ ಕಿಯಾ ಶೋ ರೂಂ ಮುಂಭಾಗದಲ್ಲಿ ಸರಣಿ ಅಪಘಾತ ನಡೆದಿದೆ. ಹಿಂದಿನಿಂದ ಬಂದ ಕಾರೊಂದು ಮುಂದಿನ ಆಟೋಕ್ಕೆ ಗುದ್ದಿದ್ದು, ಆಟೋ ಮುಂದೆ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ತಲೆಗೆ ಮುಖಕ್ಕೆ ಗಾಯಗಳಾದರೆ, ಆಟೋ ಚಾಲಕನ ಕಾಲು ಮುರಿದಿದೆ.
ಈ ಘಟನೆ ನಿನ್ನೆ ಸಂಜೆ 4-30 ಕ್ಕೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ಆಟೋ ಸಂಪುರ್ಣ ಜಖಂ ಆಗಿದೆ. ಅಪಘಾತದಲ್ಲಿ ಆಟೋ ಚಾಲಕನ ಕಾಲು ಮುರಿದಿದೆ.
ಮೆಗ್ಗಾನ್ ಆಸ್ಪತ್ರೆಯ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಲಕ್ಷ್ಮೀಬಾಯಿ ಪತಿ ಕುಮಾರ ನಾಯ್ಕ ಜೊತೆ ಮಲವಗೊಪ್ಪದ ಇಂದಿರಾ ಕಾಲೋನಿಗೆ ಹೋಗಲುಬೈಪಾಸ್ ಮೂಲಕ ಹೋಗುವಾಗ ಕೀಯಾ ಶೋರೂಂ ಎದುರು ಈ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿದ್ದ ಲಕ್ಮೀ ಬಾಯಿ ಮತ್ತು ಕಾರು ಚಾಲಕ ಶಂಕರ್ ಅವರನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಎ 14 ಎ 9198 ಕ್ರಮ ಸಂಖ್ಯೆಯ ಕಾರು ಮುಂದೆ ಸಾಗುತ್ತಿದ್ದ ಕೆಎ 14 ಸಿ 4382 ಕ್ರಮ ಸಂಖ್ಯೆಯ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ಮುಂದೆ ಸಾಗುತ್ತಿದ್ದ ಕೆ 14 ಇಯು 6592 ಕ್ರಮ ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
Shivamogga-Serial road accident near Kia showroom

