ಆತ್ಮಹತ್ಯೆಗೆ ಪ್ರಯತ್ನಪಟ್ಟ ಗ್ರಾಮ ಆಡಳಿತಾಧಿಕಾರಿ ವಿರುದ್ಧವೇ ಎಫ್ಐಆರ್ ದಾಖಲು- An FIR has been registered against the village administrator

SUDDILIVE || SHIVAMOGGA

ಆತ್ಮಹತ್ಯೆ ಪ್ರಯತ್ನಪಟ್ಟ ಗ್ರಾಮ ಆಡಳಿತಾಧಿಕಾರಿ ವಿರುದ್ಧವೇ ಎಫ್ಐಆರ್ ದಾಖಲು-An FIR has been registered against the village administrator who tried to commit suicide

Fir, village


ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರಬರೆದು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಗ್ರಾಮ ಆಡಳಿತಾಧಿಕಾರಿ ಅಭಿಷೇಕ್ ಹಾಗೂ ಅವರಿಗೆ ಆತ್ಮಹತ್ತೆ ಪತ್ರ ಬರೆದುಕೊಟ್ಟವರ ವಿರುದ್ಧವೇ ತಹಶೀಲ್ದಾರ್ ಪರಸಪ್ಪ ಕುರಬರ್ ದೂರು ದಾಖಲಿಸಿದ್ದಾರೆ. 

ಆರ್.ಜಿ ಅಭಿಶೇಕ್  ಸೈದರಕಲ್ಲಹಳ್ಳಿ, -1 ನೇ ವೃತ್ತ ಪ್ರಭಾರರಾಗಿ ಗ್ರಾಮ ಆಡಳಿತ ಅಧಿಕಾರಿಗಳಾಗಿ  ಭದ್ರಾವತಿ ತಾಲ್ಲೂಕಿನ ಆಗರದಹಳ್ಳಿ ವೃತ್ತದಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಹಲವು ಮಹತ್ವ ಪೂರ್ಣ ಯೋಜನೆಗಳನ್ನು ಸರಿಯಾಗಿ ಸಮಯದಲ್ಲಿ ಫಲಾನುಭವಿಗಳಿಗೆ ದೊರಕಿಸುವ ಸಂಬಂಧ ಭದ್ರಾವತಿ ತಾಲ್ಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರ್ಕಾರ ಸೂಚನೆಯಂತೆ ಸಭೆಯಲ್ಲಿ ತಹಶೀಲ್ದಾರ್ ಸೂಚಿಸಿದ್ದಾರೆ. 

ಅದರಂತೆ  ಗ್ರಾಮ ಆಡಳಿತ ಅಧಿಕಾರಿಗಳಾದ ಅಭಿಶೇಕ್ ರವರಿಗೂ ಸಹ ಸೂಚಿಸಿರುವುದಾಗಿ ತಹಶೀಲ್ದಾರ್ ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.  ಇ-ಪೌತಿ ಖಾತವನ್ನ ವಾರಕ್ಕೆ 10 ಹಕ್ಕು ದಾಖಲೆ ಪ್ರಕರಣಗಳನ್ನು ವಿಲೇವಾರಿಗೊಳಿಸಲು ಮತ್ತು ಆಗರದಹಳ್ಳಿ ಗ್ರಾಮದ ಸ.ನಂ:56 ರಲ್ಲಿ, ದರಖಾಸ್ತು 01

ರಿಂದ 5 ನಮೂನೆಯನ್ನು ಹಾಗೂ ಗೈರು ವಿಲೆ ಕಡತದ ಚೆಕ್ ಲೀಸ್ಟ್ ತಯಾರಿಸಲು ಸೂಚಿಸಲಾಗಿದೆ. ಆದರೆ ಅಭಿಶೇಕ್ ಕೆಲಸದಲಿ, ನಿರ್ಲಕ್ಷತನ ತೋರುತ್ತಿದ್ದಾರೆ. ಈ ಬಗ್ಗೆ ಆನೇಕ ಬಾರಿ ಮೌಖಿಕವಾಗಿ ಸೂಚಿಸಿದ್ದರು. ಸಹ ಯಾವುದೇ ರೀತಿಯ ಪ್ರಗತಿಯನ್ನು ನೌಕರರು ಸಾಧಿಸಿರುವುದಿಲ್ಲ ಅಷ್ಟೆ ಅಲ್ಲದೇ ಸದರಿ ನೌಕರರು ದಿನಾಂಕ:03/01/2026 ರಂದು ಸಂಜೆ ಸುಮಾರು 06-37 ಗಂಟೆಗೆ ಕಚೇರಿಯ ಕಂದಾಯ ಇಲಾಖೆಯ ವಾಟ್ಸಪ್ ಗ್ರೂಪ್ ನಲ್ಲಿ ಮತ್ತು ಇತರೆ ಗ್ರೂಪ್ ಗಳಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಇದಕ್ಕೆ ತಹಶೀಲ್ದಾರ್ ಆದ ನನ್ನನ್ನ ಹೊಣೆಗಾರರನ್ನಾಗಿ ಮಾಡಿ ಸುಮಾರು ಒಂದು ಪುಟಗಳ ಪತ್ರವನ್ನು ತಯಾರಿಸಿದ ಅಭಿಶೇಕ ಬೆದರಿಕೆಯನ್ನು ನೀಡಿದ್ದಾರೆ.

ಈ ನೌಕರರು ಅನವಶ್ಯಕವಾಗಿ ಕರ್ತವ್ಯವನ್ನು ನಿರ್ವಹಿಸದೇ ಮತ್ತು ಯಾವುದೇ ರೀತಿಯ ಸಾಕ್ಷಿಗಳು ಇಲ್ಲದೇ ನನ್ನ ವಿರುದ್ಧ ಮಾಡಿರುವ ಆಪಾಧನೆ ಮಾಡುತ್ತಿರುವುದು ಅಷ್ಟೇ ಅಲ್ಲದೇ ಅನಾವಶ್ಯಕ ಗೊಂದಲಗಳಿಗೆ ಎಡೆ ಮಾಡಿರುವುದು ಮತ್ತು ಸರ್ಕಾರ ಕೆಲಸಕ್ಕೆ ಅಡ್ಡಿ ಪಡಿಸಿರುತ್ತಾರೆ, ಸದರಿ ಡೆತ್ ನೋಟ್ ನ್ನು ಬೇರೆಯವರಿಂದ ಟೈಪ್ ಮಾಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. 

ಯಾರು ಈ ಪತ್ರವನ್ನು ಟೈಪ್ ಮಾಡಿರುವುದು ಮತ್ತು ನೌಕರರು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದರ ಬಗ್ಗೆ ಕೂಲಂಕುಶವಾಗಿ ವಿಚಾರಣೆಯನ್ನು ನಡೆಸಿ ಬೆದರಿಕೆ ಹಾಕಿದ ಗ್ರಾಮ ಆಡಳಿತಾಧಿಕಾರಿ ಆರ್.ಜಿ ಅಭಿಶೇಕ್  ಹಾಗೂ ಪ್ರಚೋದನೆ ನೀಡಿರುವ ವ್ಯಕ್ತಿಯ ವಿರುದ್ಧ ಕಾನೂನು ಬಗ್ಗೆ ಸರ್ಕಾರಿ ಕರ್ತವ್ಯ ನಿವರ್‌ಹಣೆಯಿಂದ ತಪ್ಪಿಸಿಕೊಳ್ಳಲು ಅಥವಾ ಬಲವಂತ ಪಡಿಸಬಾರದೆಂದು ಉದ್ದೇಶದಿಂದ ಆತ್ಮಹತ್ಯೆಯ ಬೆದರಿಕೆ ಹಾಕಿರುವ ಬಗ್ಗೆ ಭಾರತೀಯಾ ನ್ಯಾಯ ಸಂಹಿತೆ ಸೆಕ್ಷನ್ 226 ರಡಿ ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸಿಕೊಂಡು ಸೂಕ್ತ ವಿಚಾರಣೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೆಕೆಂದು ತಹಶೀಲ್ದಾರ್ ಪರಸಪ್ಪ ಕುರಬರ್ ಎಫ್ಐಆರ್ ದಾಖಲಿಸಿದ್ದಾರೆ. 

An FIR has been registered against the village administrator

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close