ಬಲವಂತದ ವೇಶ್ಯವಾಟಿಕೆ ನಡೆಸುತ್ತಿದ್ದ ಮೂವರು ಮಹಿಳೆಯರಿಗೆ ಸಜೆ-Three women sentenced for forced prostitution

 SUDDILIVE || SHIVAMOGGA

ಬಲವಂತದ ವೇಶ್ಯವಾಟಿಕೆ ನಡೆಸುತ್ತಿದ್ದ ಮೂವರು ಮಹಿಳೆಯರಿಗೆ ಸಜೆ-Three women sentenced for forced prostitution

Women, prostitute

ಮನೆಗಳಲ್ಲೆ ಮಹಿಳೆಯರನ್ನ ಇಟ್ಟುಕೊಂಡು  ಬಲವಂತದ ವೇಶ್ಯವಾಟಿಕೆ ನಡೆಸುತ್ತಿದ್ದ ಮೂವರು ಆರೋಪಿತರಿಗೆ 10 ವರ್ಷ ಕಠಿಣ ಸಜೆ 1.61 ಲಕ್ಷ ತಲಾ ದಂಡ ವಿಧಿಸಿ ಭದ್ರಾವತಿ ನ್ಯಾಯಾಲಯ ತೀರ್ಪು ನೀಡಿದೆ. 

 ದಿನಾಂಕ 24-12-2021 ರಂದು ಭದ್ರಾವತಿಯ ಡಿವೈಎಸ್ಪಿ ಆಗಿದ್ದ ಜಿತೇಂದ್ರ ಕುಮಾರ್ ದಯಾಮ ರವರು ಉಜ್ಜನಿಪುರದ ಮಾರಿಯಮ್ಮ ದೇವಸ್ಥಾನದ ಹಿಂಭಾಗ, 03ನೇ ಕ್ರಾಸ್ ನಲಲ್ಲಿರುವ  ವಾಸದ ಮನೆಯಲ್ಲೇ ವೇಶ್ಯವಾಟಿಕೆ ನಡೆಸುತ್ತಿದ್ದ ಆರೋಪದ  ಮೇಲೆ ದಾಳಿ ನಡೆಸಿದ್ದರು. 

ಆರೋಪಿತರಾದ ಚಂದ್ರಕಲಾ ಮತ್ತು ಶಿಲ್ಪಾ ರವರುಗಳು ಹಣ ಸಂಪಾದನೆ ಮಾಡಲು ಕವಿತಾ ಮತ್ತು ಯೊಗೇಶ್ ರವರೊಂದಿಗೆ ಸೇರಿಕೊಂಡು, ಶಿಲ್ಪಾ ರವರ ಮನೆಗೆ ಹೆಣ್ಣು ಮಕ್ಕಳನ್ನು ಕರೆಯಿಸಿಕೊಂಡು ವೇಶ್ಯಾವಾಟಿಕೆ  ವ್ಯವಹಾರ ಮಾಡುವ ಸಲುವಾಗಿ, ನೊಂದ ಮಹಿಳೆಯರಿಗೆ ನಿಮಗೆ ನಾವು ಹಣವನ್ನು ನೀಡುತ್ತೇವೆ ಎಂದು ಹೇಳಿ, ಈ ವಿಚಾರ ಮನೆಯವರಿಗೆ ಹೇಳಿದರೆ ಟಾರ್ಚರ್ ಮಾಡುವುದಾಗಿ ಹೆದರಿಸಿ, ಮನೆಯ ಒಳಗೆ ಇರಿಸಿಕೊಂಡು, ನಾವು ಹೇಳಿದಂತೆ ಕೇಳಬೇಕು ಎಂದ ಹೇಳಿ ಹಿಂಸೆ ನೀಡಿ, ಕಾನೂನು ಬಾಹಿರವಾಗಿ ವೇಶ್ಯಾವಾಟಿಕೆ ನಡೆಸಿ, ಹಣ ಸಂಪಾದನೆ ಮಾಡುತ್ತಿದ್ದರು ಎಂಬ ದೂರಿನ ಅಡಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ  ಮಂಜುನಾಥ ಇ ಓ ಪಿಐ ಪೇಪರ್ ಟೌನ್ ಪೊಲೀಸ್ ಠಾಣೆ  ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.  ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. 

ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ನಿನ್ನೆ  ಆರೋಪಿತರಾದ  1) ಚಂದ್ರಕಲಾ @ ಶ್ವೇತಾ, 31 ವರ್ಷ ವಾಸ ಜೇಡಿಕಟ್ಟೆ, ಹೊಸುರು, ಭದ್ರಾವತಿ ಶಿವಮೊಗ್ಗ. 2) ಶಿಲ್ಪಾ ಎಸ್, 35 ವರ್ಷ , ವಾಸ ಮಾರಿಯಮ್ಮ ದೇವಸ್ಥಾನ ಹಿಂಭಾಗ ಉಜ್ಜನಿಪುರ, ಭದ್ರಾವತಿ   ಶಿವಮೊಗ್ಗ. ಮತ್ತು 3)  ಕವಿತಾ, 40 ವರ್ಷ, ವಾಸ ಹೊಸ ಸಿದ್ದಾಪುರ, ಭದ್ರಾವತಿ ಶಿವಮೊಗ್ಗ. ಇವರಿಗೆ ತಲಾ 10 ವರ್ಷ ಕಠಿಣ ಕಾರಾವಾಸ ಮತ್ತು 1,61,000/- ರೂ ದಂಡವನ್ನು  ವಿಧಿಸಿ ಆದೇಶಿಸಿದ್ದಾರೆ.

Three women sentenced for forced prostitution

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close