SUDDILIVE || SHIVAMOGGA
ಮ್ಯನೇಜರ್ ಬಲಿ ಪಡೆದ ಹಂಪ್ಸ್ ವಿರುದ್ಧ ರೊಚ್ಚಿಗೆದ್ದ ಸ್ಥಳೀಯರು ಮಾಡಿದ್ದೇನು? What did the locals do when they were angry with the Humps who had killed the manager?
ಅವೈಜ್ಞಾನಿಕ ಹಂಪ್‌ಗೆ ಯುವಕ ಬಲಿಯಾದ ನಂತರ ಆಕ್ರೋಶಗೊಂಡ ಸ್ಥಳೀಯರು ಒಂದು ಡೇಂಜರ್ ಹಂಪೊಂದನ್ನ ಕಿತ್ತೊಗೆದಿದ್ದಾರೆ. ಸವಳಂಗ ರಸ್ತೆಯ
ಫ್ಲೈ ಓವರ್ ಇಳಿಯುತ್ತಿದ್ದಂತೆ ಎಲ್.ಬಿ.ಎಸ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಸವಳಂಗ ರಸ್ತೆಯ ಎರಡು ಬದಿಯಲ್ಲಿ ಹಂಪ್‌ಗಳನ್ನು ಹಾಕಲಾಗಿತ್ತು.
ಯುವಕನ ಸಾವಿನ ಬಳಿಕ ಹಂಪ್ ತೆರವು
ಈ ಹಂಪ್‌ಗಳು ಹಾಕಿದಾಗಿನಿಂದ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು. ನಿತ್ಯ ಹತ್ತಾರು ಅಪಘಾತಗಳು ಸಂಭವಿಸುತ್ತಿದ್ದವು. ಫೆ.12ರಂದು ಇದೇ ಹಂಪ್‌ನ ಕಾರಣಕ್ಕೆ ಸವಳಂಗ ರಸ್ತೆಯ ಮ್ಯಾನೇಜರ್ ಸಯ್ಯದ್ ಸುಹೇಲ್ ಉಲ್ಲಾ (32) ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಕೋಮಾಗೆ ತಲುಪಿದ್ದ ಇವರು ಫೆ.15ರಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇನ್ನು, ಯುವಕ ಮೃತಪಟ್ಟ ಬೆನ್ನಿಗೆ ಸವಳಂಗ ರಸ್ತೆಯಲ್ಲಿದ್ದ ಒಂದು ಬದಿಯ ಹಂಪ್ ತೆರವು ಮಾಡಲಾಗಿದೆ. ರಾತ್ರೋರಾತ್ರಿ ಜೆಸಿಬಿ ತರಿಸಿದ ಸ್ಥಳೀಯ ಯುವಕರು ಒಂದು ಬದಿಯಲ್ಲಿದ್ದ ಹಂಪ್ ಕಿತ್ತೊಗೆದಿದ್ದಾರೆ.
ರಸ್ತೆಯ ಒಂದು ಬದಿಯ ಹಂಪ್ ತೆರವು ಮಾಡುತ್ತಿದ್ದಾಗಲೆ ಮತ್ತೊಂದ ಬದಿಯಲ್ಲಿದ್ದ ಹಂಪ್ ಹಾರಿ ದ್ವಿಚಕ್ರ ವಾಹನ ಸವಾರರೊಬ್ಬರು ಬಿದ್ದಿದ್ದಾರೆ. ಹಿರಿಯ ನಾಗರಿಕರೊಬ್ಬರು ವಾಹನದಲ್ಲಿ ಇರಿಸಿಕೊಂಡಿದ್ದ ಊಟವೆಲ್ಲ ರಸ್ತೆಗೆ ಬಿದ್ದು ಹಾನಿಯಾಯಿತು. ಅವೈಜ್ಞಾನಿಕ ಹಂಪ್‌ಗಳಿಂದಾಗಿ ಶಿವಮೊಗ್ಗ ನಗರದ ಹಲವೆಡೆ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.
What did the locals do when they were angry with the Humps who had killed the manager?

