ಯಡಮನೆಯಲ್ಲಿ ಒಕ್ಕಲೆಬ್ಬಿಸುವ ಪ್ರಕರಣ ಬಿಜೆಪಿ, ರೈತ ಸಂಘ ಕೆಂಡಮಂಡಲ- BJP, Farmers' Association Kendamandala to raise a ruckus in Yadamane

 SUDDILIVE || SHIVAMOGGA

ಯಡಮನೆಯಲ್ಲಿ ಒಕ್ಕಲೆಬ್ಬಿಸುವ ಪ್ರಕರಣ ಬಿಜೆಪಿ, ರೈತ ಸಂಘ ಕೆಂಡಮಂಡಲ- BJP, Farmers' Association Kendamandala to raise a ruckus in Yadamane   

Kendamandala, bjp


ಸಾಗರ ತಾಲೂಕಿನ ಯಡಮನೆ ಊರಿನಲ್ಲಿ 16 ಕುಟುಂಬಗಳನ್ನ ಒಕ್ಕಲೇಳಿಸಲಾಗುತ್ತಿರುವ ವಿರುದ್ಧ ಇಂದು ಬಿಜೆಪಿ ಮತ್ತು ರಾಜ್ಯ ರೈತ ಸಂಘ ಆಕ್ಷೇಪ ವ್ಯಕ್ತಪಡಿಸಿ ವಿರೋಧ ವ್ಯಕ್ತಪಡಿಸಿದೆ.  

ಮೊದಲಿಗೆ ಸುದ್ದಿಗೋಷ್ಠಿ ನಡೆಸಿದ ರಾಜ್ಯ ರೈತ ಸಂಘದ ಅಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ಶರಾವತಿ ನದಿಗೆ ಡ್ಯಾಂ ಕಟ್ಟಿದ ಪರಿಣಾಮ ಮಲೆನಾಡಿನಲ್ಲಿ ಮಡೆನೂರು, ಸಾವೆಹಕ್ಲು, ವರಾಹಿ, ಅಣೆಕಟ್ಟಿನಿಂದ ಸಾವಿರಾರು ಕುಟುಂಬಗಳು ಮನೆ ಕಳೆದುಕೊಂಡವು 1945 ರಿಂದ ನಡೆದರೂ ಪುನರ್ ವಸತಿಯಾಗಿಲ್ಲ ಎಂದು ರಾಜ್ಯ ರೈತ ಸಂಘದ ಶಿವಾನಂದ ಕುಗ್ವೆ ಆರೋಪಿಸಿದರು.

ಕರೂರು ಬಾರಂಗಿ ಆವಿನಳ್ಳಿಯಲ್ಲಿ ಫಲವತ್ತಾದ ಭೂಮಿಯು ಸಾವಿರರಾರು ಹೆಕ್ಟರ್ ಮುಳುಗಡೆಯಾಗಿದೆ ಹೊಸನಗರ ಮುಳುಗಡೆಯಾಗಿದೆ. ಗಡಿಪ್ರದೇಶದ ಕಾಡುಗಳಲ್ಲಿ ಮಜಿರೆ ಹಳ್ಳಿಗಳಲ್ಲಿ ಜನ ವಸತಿಯಾಗಿದೆ. ಕೆಲಕುಟುಂಬಗಳು  ಗುಡ್ಡಗಾಡು ಪ್ರದೇಶದಲ್ಲಿ ಮೂರು ತಲೆಮಾರು ಕಳೆದಿವೆ. ಇವರಿಗೆ ಮೂಲ ಸೌಕರ್ಯಗಳಿಲ್ಲ. ಆದಿವಾಸಿಗಳು, ರೈತರ ಜೀವನ ಅಧೋಗತಿಯಾಗಿವೆ. ಯಡಮನೆ, ನೆಲ್ಲಾರೆಯಲ್ಲಿ 15 ಕುಟುಂಬಗಳನ್ನ ಒಕ್ಕಲೆಬ್ಬಿಸಲಾಗುತ್ತಿದೆ. 

1998 ರಲ್ಲಿ ವೈಲ್ಡ್ ಲೈಫ್ ಅರಣ್ಯ ಪ್ರಕರಣ ದಾಖಲಿಸಿವೆ. ರಕ್ಷಣೆಗಾಗಿ ಕೇಸ್ ಹಾಕಲಾಗಿದೆ. 2013 ರಲ್ಲಿ ಅರಣ್ಯ ನ್ಯಾಯಾಲಯದಲ್ಲಿ ಖುಲ್ಲ ಪಡಿಸಲು ಆದೇಶಿಸಿದೆ. ಜನರಿಗೆ ಈ‌ಆದೇಶ ಗೊತ್ತಿಲ್ಲ. ಫೆ.7 ಕ್ಕೆ ಅಖೈರು ನೋಟೀಸ್ ನೀಡಿ ಕಾಟಕೊಡುತ್ತಿದ್ದಾರೆ. ಇದು ಆಘಾತವಾಗಿದೆ. ಮೂರು ತಲೆಮಾರಿನಿಂದ ವಾಸಿಸುತ್ತಿದ್ದು ಇವರಿಗೆ ಬಿಟ್ಟುಹೋಗಲು ದಾರಿಯಿಲ್ಲದಂತಾಗಿದೆ. 

ಅರಣ್ಯ ಇಲಾಖೆ ಅತಿರೇಕದ ಕೆಲಸವಾಗಿದೆ. ಇವರಿಗೆ ನೀಟೀಸ್ ಓದಲು ಆಗುತ್ತಿಲ್ಲ. ಅರಣ್ಯ ಹಕ್ಕು 2007 ಕಾಯ್ದೆ ತಂದಿದೆ ಅದಕ್ಕೆ ಅಲ್ಲಿನ ಜನ ಅರ್ಜಿ ಹಾಕಿದ್ದಾರೆ. ಪಾರಂಪರಿಕ ವಾಗಿ ವಾಸವಾಗಿರುವರಿಗೆ ಹಕ್ಕುಪತ್ರ ನೀಡಬೇಕಿತ್ತು. ಅದನ್ನ ನೀಡಿಲ್ಲ. ಅಲ್ಲಿನ ಕೆಲವರಿಗೆ ಜನತಾ ಮನೆ ಕೊಡಲಾಗಿದೆ. ಆದರೆ ಕೆಲವರಿಗೆ ಕೊಟ್ಟಿಲ್ಲ. ಇದಕ್ಕೆ ಸಧ್ಯದಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ ಹಾಗೂ ಅಧಿಕಾರಿಗಳ ಕಿರುಕುಳದ ವಿರುದ್ಧ ಪ್ರತಿಭಟಿಸಲಾಗುತ್ತಿದೆ. ಪ್ರತಿಭಟನೆಯ ದಿನಾಂಕ ಇನ್ನೂ ತೀರ್ಮಾನಿಸಿಲ್ಲ. ಸಭೆ ನಡೆಯುತ್ತಿದೆ. ಯಡಮನೆಯಲ್ಲಿ ಮೂರು ಕುಟುಂಬ ಖಾಲಿಯಾಗಿವೆ ಎಂದರು.

ವಕೀಲ ಶ್ರೀಪಾಲ್ ಮಾತನಾಡಿ, ಮಡೆನೂರಿನಲ್ಲಿ ಡ್ಯಾಂ ಆದಾಗ ಒಕ್ಕಲೆಬ್ಬಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಆಶ್ರಮನೆ ನೀಡಿದೆ. ಅಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಲಾಗಿದೆ ನೀರು ಸರ್ಬರಾಜು ನೀಡಲಾಗಿದೆ. ಆದರೆ ಅರಣ್ಯ ಇಲಾಖೆ ನೋಟೀಸ್ ನೀಡಿದೆ. ನಾವು ಅರಣ್ಯ ಇಲಾಖೆ ಡಿಎಫ್ ಒ ಗೆ ಭೇಟಿಯಾದ ನಿಯೋಗಕ್ಕೆ ರಾಜಕಾರಣ ಮಾಡಬೇಡಿ ಎನ್ನುತ್ತಾರೆ. ಅಮಾಯಕರಿಗೆ ಪರ್ಯಾವ್ಯವಸ್ಥೆ ಕಲ್ಪಿಸಿ ಒಕ್ಕಲೆಬ್ಬಿಸಿ  ಎಂದು ಆಗ್ರಹಿಸಿದರು. 

ಹಾಲಪ್ಪ ಸುದ್ದಿಗೋಷ್ಠಿ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹರತಾಳು ಹಾಲಪ್ಪ ಮಾತನಾಡಿ, ಯಡಮನೆಯಲ್ಲಿ ಒಕ್ಕಲೆಬ್ಬಿಸುವಾಗ, ನಾನು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಫೆ.6 ರಂದು ಒಕ್ಲೆಬ್ಬಿಸಿದ್ದರು. ಮೊದಲು ಇವರು ಮುಳುಗಡೆ ಸಂತ್ರಸ್ತರು. ಅಕ್ರಮ ಸಾಗುವಳಿದಾರರಲ್ಲ. ಇವರನ್ನ ಒಕ್ಕಲೆಬ್ಬಿಸಲಾಗುತ್ತಿದೆ. ಕಿರುಕುಳ ನೀಡಲಾಗುತ್ತಿದ್ದಾರೆ. ಇವರು ಬಗುರ್ ಹುಕುಂದಾರರಲ್ಲ. ಸರ್ಕಾರ ಇವರನ್ನ ಗಡಿಭಾಗದಲ್ಲಿ ಬಿಟ್ಟುಬಂದಿದ್ದು, ಇವರಾಗಿಯೇ ಹೋದುದ್ದಲ್ಲ.  ಭಟ್ಕಳ, ಶಿಕಾರಿಪುರ, ಭದ್ರಾವತಿ ಶಿವಮೊಗ್ಗ, ಸಾಗರದಲ್ಲಿ ಈ ಮುಳುಗಡೆ ಸಂತ್ರಸ್ತರಾಗಿದ್ದಾರೆ. ಅಕ್ರಮ ಸಾಗುವಳಿದಾರರಲ್ಲ. ರೇಷನ್ ಆಧಾರ್ ಕಾರ್ಡ್ ಇದ್ದವರು. ಇವರು ಅಕ್ರಮ ಸಾಗುವಳಿದಾರರು ಹೇಗೆ ಆಗುತ್ತಾರೆ ಎಂದು ಕೋಪಗೊಂಡರು. 

Bjp, kendamandala

ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳೀಯ ಶಾಸಕರಿಗೆ ಮಾಹಿತಿಯಿಲ್ಲ. ಇವರು ಒಕ್ಕಲೆದ್ದರೆ ಅನುಕೂಲ ಆಗಲಿದೆ ಎಂದು ಜನರಿಗೆ ತಿಳಿಸುತ್ತಾರೆ. ಪರ್ಯಾಯಾವಾಗಿ ಭೂಮಿ ಕೊಡಲಾಗುವುದು ಎನ್ನುತ್ತಾರೆ.  ಭೂಮಿ ಎಲ್ಲಿದೆ. ನಾನು ಹುಟ್ಟಿದಾಗಿನಿಂದ ಮುಳುಗಡೆ ಸಂತ್ರಸ್ತರನ್ನ ನೋಡ್ತಾಯಿದ್ದೇವೆ. ಎಲ್ಲೂ ಪರ್ಯಾಯಭೂಮಿ ಇಲ್ಲದೆ ಇರುವುದರಿಂದ ಭೂಮಿಯಿಲ್ಲ. ಹಾಗಾಗಿ ಜಿಲ್ಲ ಉಸ್ತುವಾರಿ ಸಚಿವರು ಅಹಂಕಾರದ, ಠೇಂಕಾರದ ಮಾತುಗಳನ್ನ ಆಡದೆ ಸರ್ಕಾರದ ಆದೇಶ ಪಾಲಿಸಲಿ,  ಮೂರು ಎಕರೆ ಇದ್ದವರಿಗೆ ಒಕ್ಕಲೆಬ್ಬಿಸಬಾರದು ಎಂಬ ಆದೇಶವಿದೆ. ಆದರೂ ಇವರಿಗೆ ಬದಲಿ ಭೂಮಿ ಕೊಡುವುದಾಗಿ ಹೇಳುತ್ತಾರೆ. ಜಿಲ್ಲಾ ಉಸ್ತುವರಿಸಚಿವರಿಗೆ 2019 ರಲ್ಲಿ ಜಡೆ ಹೋಬಳಿಯ 17 ಕುಟುಂಬಕ್ಕೆ ಒಕ್ಕಲೆಬ್ಬಿಸಲಾಯಿತು. ಅವರಿಗೆ  ಪರ್ಯಾಭೂಮಿ ನೀಡಲಾಗಲಿಲ್ಲ. 

ಇದಕ್ಕಾಗಿ ಅವರೆ ಪಾದಯಾತ್ರೆ ಮೊದಲಾದವುದನ್ನ ಮಾಡಿದ್ದಾರೆ. ಹೈಕೋರ್ಟ್ ನಲ್ಲಿ ಪುನರ್ವಸತಿ ಆದೇಶ ಮಾಡಿದರೂ ಜಿಲ್ಲ ಉಸ್ತುವರಿ ಸಚಿವರಾಗಿದ್ದಾರೆ ಕೊಡಲಾಗಲಿಲ್ಲ.  ಅವರಿಗೆ ಮಾಹಿತಿಯಿಲ್ಲದಂತೆ ಮಾಡ್ತಾರೆ. ಯಡಮನೆ ಪ್ರಕರಣ1998 ರದ್ದು,  2013 ರಲ್ಲಿ ಒಕ್ಕಲೆಬ್ಬಿಸಲು ಆದೇಶವಾಗಿದೆ. ಇದುವರೆಗೂ ನಮಗೆ ಮಾಹಿತಿಯಿಲ್ಲ. ನಾನು ಶಾಸಕನಾಗಿ ಬಂದೆ. ಆದರೆ 13 ವರ್ಷದ ನಂತರ ಒಕ್ಕಲೆಬ್ಬಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಇದು ಒಕ್ಕಲೆಬ್ಬಿಸಲು ಹೋಗಿಲ್ಲ ಎಂದು ವಿತಂಡವಾದ ಮಾಡುತ್ತೆ. ಆದರೆ ಅಂಬ್ಯೂಲೆನ್ಸ್, ಪೊಲೀಸ್ ಜೀಪು ಯಾಕೆ ಹೋಗಿತ್ತು. ಇವರನ್ನ ಒಕ್ಜಲೆಬ್ಬಿಸಿದರೆ ನಾವು ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆ ನೀಡಿದರು. 

2007 ರಲ್ಲಿ ಅರ್ಜಿ ನ್ಯಾಯಾಲಯದಲ್ಲಿವೆ. ಅರ್ಜಿ ಪೆಂಡಿಂಗ್ ಇದೆ. ಸುಪ್ರೀಂ ಆದೇಶದಲ್ಲಿ ಒಕ್ಕಲೆಬ್ಬಿಸುವ ಆದೇಶ ಎಲ್ಲಿದೆ. ನಾವೆಲ್ಲ ಅಧಿಕಾರಕ್ಕೆ ಬಂದರೂ ಒಕ್ಕಲೆಬ್ಬಿಸಿಲ್ಲ. ಆಡಳಿತದ ಅನುಭವ ಇಲ್ಲದಂತ ಸಚಿವರು ಪರ್ಯಾಯ ವ್ಯವಸ್ಥೆ ಮಾಡಲು ಹೊರಟಿದ್ದಾರೆ.  ಭೂಮಿ ಎಲ್ಲಿದೆ. ಅಧಿಕಾರಿಗಳನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ಇದು ಕಾಂಗ್ರೆಸ್ ನ 1000 ಸಾವಿರ ದಿನಗಳ ಕೊಡುಗೆ ಎಂದು ವ್ಯಂಗ್ಯವಾಡಿದರು.

BJP, Farmers' Association Kendamandala to raise a ruckus in Yadamane  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close