SUDDILIVE || SHIVAMOGGA
ಟೋಲ್ ಗೇಟ್ ಬಳಿ ಎಸ್ಪಿಯವರಿಂದ ಅರಿವು ಕಾರ್ಯಕ್ರಮ-Awareness program by SP near toll gate
ಶಿವಮೊಗ್ಗ ಮತ್ತು ದಾವಣಗೆರೆಯ ಗಡಿ ಭಾಗದಲ್ಲಿರುವ ಟೋಲ್ ಗೇಟ್ ಬಳಿ ಶಿವಮೊಗ್ಗ ಎಸ್ಪಿಯಿಂದ ಅರಿವು ಕಾರ್ಯಕ್ರಮ ನಡೆದಿದೆ. ನೂತನ ವರ್ಷಕ್ಕೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ ಬಂದ ನಿಖಿಲ್ ಬಿ ವಿನೂತನವಾಗಿ ಕಾರ್ಯಚರಣೆಗೆ ಇಳಿದಿದ್ದರು.
ಆರಂಭದಲ್ಲಿ ಠಾಣೆಗಳಿಗೆ ಭೇಟಿ ಮಾಡಿ ಬಂದ ಎಸ್ಪಿಯವರು ಈಗ ಅರಿವು ಕಾರ್ಯಕ್ರಮಕ್ಕೂ ಧುಮಕಿದ್ದಾರೆ. ಒಬ್ಬೊಬ್ಬರ ಕಾರ್ಯವೈಖರಿ ಒಂದೊಂದು ರೀತಿಯಲ್ಲಿರುತ್ತದೆ. ಏನೇ ಮಾಡಿದ್ರೂ ಎಸ್ಪಿ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಕಾಪಾಡುತ್ತಾರೆ ಎಂಬುದರ ಮೇಲೆ ಅವರ ಚಾಣಕ್ಷತನ ಅವರ ಸಾಮರ್ಥ್ಯ ಅಡಗಿರುತ್ತದೆ. ಸಧ್ಯಕ್ಕೆ ಎಸ್ಪಿ ಅವರು ಅರಿವು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದು ಗಮನ ಸೆಳೆದಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಲೈನ್ ಡಿಸಿಪ್ಲೀನ್ ಹಾಗೂ ಸಂಚಾರ ನಿಯಮಗಳ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇಂದು ಶಿವಮೊಗ್ಗ ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯ, ಸುತ್ತುಕೋಟೆ Toll Gate ಗೆ ಎಸ್ಪಿ ನಿಖಿಲ್ ಭೇಟಿ ನೀಡಿದ್ದಾರೆ.
ಸಾರ್ವಜನಿಕ ವಾಹನಗಳ ಚಾಲಕರು ಹಾಗೂ ಸವಾರರು ಮತ್ತು ಪ್ರಯಾಣಿಕರುಗಳಿಗೆ ಲೈನ್ ಡಿಸಿಪ್ಲೀನ್ ಕುರಿತು ಮಾಹಿತಿ ಇರುವ ಕರಪತ್ರಗಳನ್ನು ಹಂಚಿಕೆ ಮಾಡಿ ಅರಿವು ಮೂಡಿಸಲಾಗಿದೆ. ಹಾಗೂ ಟೋಲ್ ಗೇಟ್ ನಲ್ಲಿ ಕೈಗೊಳ್ಳಲಾಗಿರುವ ಸುರಕ್ಷತಾ ಕ್ರಮಗಳು ಮತ್ತು ಸಿಸಿಟಿವಿ ವ್ಯವಸ್ಥೆಯನ್ನು ಪರಿಶೀಲಿಸಿ ಸೂಕ್ತ ಸಲಹೆ ಸೂಚನೆ ನೀಡಲಾಗಿರುತ್ತದೆ.
Awareness program by SP near toll gate

