ಈಗ ನಾವು ಸಾಂಕೇತಿಕ ಪ್ರತಿಭಟಿಸುತ್ತೇವೆ, ಕೇಳಲಿಲ್ಲ ಎಂದರೆ ಹೆಂಡತಿ ಮತ್ತು ಮಕ್ಕಳನ್ನ ಬೀದಿಗೆ ಕರೆತಂದು ಪ್ರತಿಭಟಿಸುತ್ತೇವೆ-Now we are protesting culturally

 SUDDILIVE || SHIVAMOGGA

ಈಗ ನಾವು ಸಾಂಕೇತಿಕ ಪ್ರತಿಭಟಿಸುತ್ತೇವೆ, ಕೇಳಲಿಲ್ಲ ಎಂದರೆ ಹೆಂಡತಿ ಮತ್ತು ಮಕ್ಕಳನ್ನ ಬೀದಿಗೆ ಕರೆತಂದು ಪ್ರತಿಭಟಿಸುತ್ತೇವೆ-Now we are protesting cultural by, if we don't listen, we will bring our wives and children to the streets and protest.

Protest, contract


2022 ರಿಂದ ಇಲ್ಲಿವರೆಗೆ ಅಂದರೆ ನಾಲ್ಕುವರ್ಷಗಳ ಅವಧಿಯಲ್ಲಿ ವಿವಿಧ ಇಲಾಖೆಯಲ್ಲಿ ಗುತ್ತಿಗೆದಾರರಿಗೆ 37 ಸಾವಿರ ಕೋಟಿ ರೂ.ಗಳನ್ನ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮಾ.5 ರಂದು ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಲಾಗುತ್ತಿದೆ  ಎಂದುಶಿವಮೊಗ್ಗ ಜಿಲ್ಲಾ ಪಿಡಬ್ಲೂಡಿ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಆರ್ ಮಂಜುನಾಥ ತಿಳಿಸಿದರು. 

ಅವರು ಸುದ್ದಿಗೋಷ್ಠಿಯಲ್ಲಿ ಜಲಸಂಪನ್ಮೂಲ 13 ಸಾವಿರ ಕೋಟಿ, ಕಾರ್ಮಿಕಲಾಖೆ ಎರಡು ಕೋಟಿ, ಪಾಲಿಕೆಗಳಲ್ಲಿ 11 ಕೋಟಿ ಹಣವಿದೆ. ಇದನ್ನ‌ಕೇಳಿದರೆ ಹಳೆ ಸರ್ಕಾರದಬಿಲ್‌ ಎಂದು ಸಿಎಂ ಸಿದ್ದರಾಮಯ್ಯ ತಿಳಿಸುತ್ತಾರೆ. ಸರ್ಕಾರ ಹೊಸದಾಗಿ ರಚಿಸಿ 6 ತಿಂಗಳು ಹೇಳಿದರೆ ಒಕೆ. ಆದರೆ ಎರಡು ವರೆ ವರ್ಷ ಕಳೆದ ಮೇಲೂ ಇದನ್ನ ಹೇಳಿದರೆ ನಮ್ಮ ಪಾಡೇನಾಗಬೇಕು ಎಂದು ಪ್ರಶ್ನಿಸಿದರು. 

ನಾವುಗಳು ಸರ್ಕಾರದ ಕಾಮಗಾರಿಗಳನ್ನ ರಾಜ್ಯ ಪಾಲರ ಪರವಾಗಿ ಟೆಂಡರ್ ಪಡೆದು ಮಾಡಿರುತ್ತೇವೆ. ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ ಎಂದು ಕೇಳುತ್ತಿದ್ದೇವೆ, ಬ್ಯಾಂಕ್ ಗಳಲ್ಲಿ ನಾವು ಆಸ್ತಿಗಳನ್ನ‌ ಅಡವಿಟ್ಟು ಸಾಲ ತಂದು ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಕೆಂಪಯ್ಯನವರ ಮುಖ ತೋರಿಸಿ ಅಧಿಕಾರಕ್ಕೆ ಬಂದರೂ ಗುತ್ತಿಗೆ ದಾರರಿಗೆ ಹಣ ಉಳಿಸಿಕೊಂಡಿರುವುದು ಎಷ್ಟು ಸರಿ ಎಂದು ದೂರಿದರು.

ಒಂದು ಕೋಟಿಯವರೆಗೆ ಪ್ಯಾಕೇಜ್ ಮಾಡುವ ಆದೇಶವಿರುವ ಕಡೆ  100 ಕೋಟಿಗೆ ಏರಿಸಿಕೊಂಡು ಪ್ಯಾಕೇಜ್ ನೀಡಲಾಗುಯ್ತಿದೆ. ಐದಾರು ಜಿಲ್ಲೆಗಳನ್ನ ಸೇರಿಸಿಕೊಂಡು  ಬೇರೆ ರಾಜ್ಯದ ಕಂಟ್ರ್ಯಾಕ್ಟರ್ ಗಳು ನಮ್ಮ ರಾಜ್ಯಕ್ಕೆ ಕರೆತಂದು ಅವರ ಮೂಲಕ ಕೆಲಸ ಮಾಡಿದ್ದಾರೆ.  ಶಿವಮೊಗ್ಗಕ್ಕೆ ಬಂದ ಹೊರ ರಾಜ್ಯದ ಕಂಟ್ರ್ಯಾಕ್ಟರ್ ಗಳು ಕೆಲಸ ಮಾಡಿರುವ ಉದಾಹರಣೆವಿದೆ. ನಿರ್ಮಿತಿ ಕೇಂದ್ರ ಮತ್ತು ಲ್ಯಾಂಡ್ ಆರ್ಮಿ ಇಲಾಖೆಗೆ ಹೆಚ್ಚಿನ ಕೆಲಸ ಕೊಡಲಾಗುತ್ತಿದೆ. ಅವರಿಗೆ ಕಡಿಮೆ ಮಾಡಿ ನಮಗೆ ಕೊಡಿ ಎಂದರೆ ಕಡಿಮೆ ಮಾಡುತ್ತಿಲ್ಲ ಎಂದು ದೂರಿದರು. 

ಮಾ.5 ರಂದು ಕೆಲಸ ಸ್ಥಗಿತ ಗೊಳಿಸಿ ಮುಷ್ಕರಕ್ಕೆ ಭಾಗಿಯಾಗಲಿದ್ದೇವೆ. ಇದಕ್ಕೆ ಸರ್ಕಾರ ತಲೆಬಾಗದಿದ್ದರೆ ಮುಂದಿನ ದಿನಗಳಲ್ಲಿ ಹೆಂಡ್ತಿ ಮಕ್ಕಳನ್ನೂ ಮುಷ್ಕರಕ್ಕೆ ಕರೆತರಲಾಗುತ್ತದೆ ಎಂದು ಎಚ್ಚರಿಸಿದರು. ಪರ್ಸೆಂಟೇಜ್ ಹೆಚ್ಚಾಗಿದೆ ಆದರೆ ಕೆಲ ಇಲಾಖೆಯಲ್ಲಿ ಪರ್ಸೇಟೇಂಜ್ ಕಡಿಮೆಯಾಗಿದೆ. ನಾವು ಪರ್ಸೆಂಟೇಜ್ ಇಷ್ಟೇ ಎಂದರೆ 1.5 ಲಕ್ಷ ಗುತ್ತಿಗೆದಾರರಿಗೆ ತೊಂದರೆಯಾಗಲಿದೆ. ಮೊದಲು ಸರ್ಕಾರ ಜಿಎಸ್ ಟಿ ಕಡಿಮೆ ಮಡಬೇಕು. ಪರ್ಸಂಟೇಜನ್ನ ಪ್ರತಿಭಟನೆಯ ದಿನ ಭಾಗಿಯಾಗಲಿರುವ 25 ಸಾವಿರ ಗುತ್ತಿಗೆದಾರರು ತಿಳಿಸಲಿದ್ದಾರೆ ಎಂದು ತಿಳಿಸಿದರು. 

Now we are protesting culturally

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close