ಎಂ.ಕೆ.ಫೈಝಿಗೆ ಜಾಮೀನು, ಶಿವಮೊಗ್ಗದಲ್ಲಿ SDPI ಸಂಭ್ರಮಾಚರಣೆ-Bail for MK Faizi, SDPI celebration in Shimoga

 SUDDILIVE || SHIVAMOGGA

ಎಂ.ಕೆ.ಫೈಝಿಗೆ ಜಾಮೀನು, ಶಿವಮೊಗ್ಗದಲ್ಲಿ SDPI ಸಂಭ್ರಮಾಚರಣೆ-Bail for MK Faizi, SDPI celebration in Shimoga

Faizi, bail


ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋಶಿಯಲ್ ಡೆಮಾಕ್ರೆಟಿಕ್‌ ಪಾರ್ಟಿ ಆಫ್ ಇಂಡಿಯಾ ಅಥವಾ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ ಕೆ ಫೈಝಿ ಅವರಿಗೆ ದೆಹಲಿ ಹೈಕೋರ್ಟು ಜಾಮೀನು ಮಂಜೂರು ಮಾಡಿದ್ದು, ಈ ಹಿನ್ನಲೆಯಲ್ಲಿ ಶಿವಮೊಗ್ಗದ SDPI ಕಚೇರಿ ಮುಂದೆ ಸಿಹಿ ಹಂಚಿ ಸಂಭ್ರಮಿಸಲಾಗಿದೆ.  

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ರಾಜಕೀಯ ಮುಖವಾಣಿಯಾಗಿ ಎಸ್ ಡಿ ಪಿ ಐಯನ್ನು ಈಡಿ ಉಲ್ಲೇಖಿಸಿದೆ. 2022 ರಲ್ಲಿ ಕೇಂದ್ರ ಸರಕಾರ ಪಿಎಫ್ಐಯನ್ನು ನಿಷೇಧಿಸಿತ್ತು. ಇವರ ಮೇಲೆ ಜಾರಿ ನಿರ್ದೇಶನಾಲಯ ಅಥವಾ ಇಡಿ ಪ್ರಕರಣ ದಾಖಲಿಸಿತ್ತು.

ಪಿಎಫ್‌ಐಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆಯ ತನಿಖೆಯ ಭಾಗವಾಗಿ ಎಮ್ ಕೆ ಫೈಝಿ ಅವರನ್ನು 2025 ಮಾರ್ಚ್ ನಲ್ಲಿ ಬಂಧಿಸಲಾಗಿತ್ತು. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.


ಎಂಕೆ ಫೈಝಿ ಅವರ ಪರವಾಗಿ ಹಿರಿಯ ವಕೀಲ ಸಿದ್ದಾರ್ಥ ಅಗರ್ವಾಲ್ ವಾದ ಮಂಡಿಸಿದರು. ಅವರೊಂದಿಗೆ ವಕೀಲರಾದ ರಜತ್ ಭಾರದ್ವಾಜ್, ದುಷ್ಯಂತ್ ಚೌದರಿ ಮೊಹಮ್ಮದ್ ಫಯಾಜ್ ವಿಶ್ವಜೀತ್ ಸಿಂಗ್ ಮತ್ತು ಸಿದ್ದಾರ್ಥ್ ಸಿಂಗ್ ನ್ಯಾಯಾಲಯದಲ್ಲಿ ಹಾಜರಿದ್ದರು. ನಿನ್ನೆ ರಾತ್ರಿ ಶಿವಮೊಗ್ಗದ ಬೈಪಾಸ್ ಬಳಿ SDPI ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. 

Bail for MK Faizi, SDPI celebration in Shimoga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close