SUDDILIVE || SHIVAMOGGA
ನಂಬರ್ ಪ್ಲೇಟ್ ಇಲ್ಲದೆ ಅಡ್ಡದಿಡ್ಡಿ ಚಾಲನೆ, ತಕ್ಕಪಾಠ ಕಲಿಸಿದ ಸ್ಥಳೀಯರು-Locals teach a lesson for driving recklessly without a number plate
ನಂಬರ್ ಪ್ಲೇಟ್ ಗಳು ಇಲ್ಲದ ವಾಹನದಲ್ಲಿ ಬಂದು ಅಡ್ಡದಿಡ್ಡಿ ಓಡಾಡುತ್ತಿದ್ದ ಯುವಕರನ್ನ ಸ್ಥಳೀಯರೆ ಹಿಡಿದು 112 ಗೆ ಒಪ್ಪಿಸಿರುವ ಘಟನೆ ವರದಿಯಾಗಿದೆ.
ಸೂಳೆಬೈಲು ಮತ್ತು ಮತ್ತೂರು ರಸ್ತೆಯಲ್ಲಿ ನಂಬರ್ ಪ್ಲೇಟ್ ಗಳು ಇಲ್ಲದ ದ್ವಿಚಕ್ರ ವಾಹನಗಳಲ್ಲಿ ಬರುವ ಅಪ್ರಾಪ್ತರು ಅಡ್ಡದಿಡ್ಡಿ ಚಲಾಯಿಸುವ ಮೂಲಕ ಸ್ಥಳೀಯರನ್ನ ಗಾಬರಿ ಪಡಿಸುವ ಘಟನೆ ವರದಿಯಾಗಿದೆ.
ಸ್ಥಳೀಯರ ಪ್ರಕಾರ ಇವರುಗಳು ಐದು ಬೈಕ್ ನಲ್ಲಿ ಸುಮಾರು10 ಕ್ಕೂ ಹೆಚ್ಚು ಜನರು ಅಪ್ರಾಪ್ತರು ಮತ್ತು ಇತರರು ಸೇರಿ ಮದಾರಿ ಪಾಳ್ಯ ಸೂಳೆಬೈಲಿನಿಂದ ಇಂದು ಬೆಳಗ್ಗೆ 6-30 ಮತ್ತು 7 ಗಂಟೆಯ ಸಮಯಕ್ಕೆ ಅಡ್ಡದಿಡ್ಡಿ ಚಲಾಯಿಸಿಕೊಂಡು ಕಡೇಕಲ್ಲು, ಸಿದ್ದರಹಳ್ಳಿ, ಮತ್ತೂರು ಮೂಲಕ ಹೊನ್ನಾಪುರ ಗಾಜನೂರಿಗೆ ತಲುಪಿದ್ದು
ಗಾಜನೂರಿನಿಂದ ವಾಪಾಸ್ ಮಂಡ್ಲಿಯ ವರೆಗೂ ಅಡ್ಡದಿಡ್ಡಿ ಚಲಾಯಿಸಿಕೊಂಡು ಓಡಾಡಿದ್ದಾರೆ. ಇಲ್ಲಿ ದಾರಿ ಮೇಲೆ ಓಡಾಡುವ ಪಾದಚಾರಿಗಳ ಮೇಲೆ ಹಲ್ಲೆ ಮಾಡಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯರ ಪ್ರಕಾರ ನಂಬರ್ ಪ್ಲೇಟ್ ಗಳು ಇಲ್ಲದ ವಾಹನದಲ್ಲಿ ಮೂವರು ಯುವಕರು ಅಡ್ಡಾದಿಡ್ಡಿ ಚಲಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು ಸೂಳೆಬೈಲು ಮತ್ತೂರು ರಸ್ತೆಯಲ್ಲಿ ಕೆಲ ಅಪ್ರಾಪ್ತರು ಮತ್ತಿತರರು ನಂಬರ್ ಪ್ಲೇಟ್ ಇಲ್ಲದ ವಾಹನಗಳಲ್ಲಿ ಅಡ್ಡಾದಿಡ್ಡಿ ಚಲಾಯಿಸಿರುವ ಘಟನೆಗಳು ನಡೆದಿದ್ದು ಇಬ್ಬರನ್ನ ಮತ್ತು ಎರಡು ನಂಬರ್ ಪ್ಲೇಟ್ ಇಲ್ಲದ ವಾಹನಗಳಲ್ಲಿ ಬಂದಿರುವರನ್ನ 112 ಪೊಲೀಸರು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ. ಇವರ ಮೇಲಿನ ಆರೋಪಗಳನ್ನ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
Locals teach a lesson for driving recklessly without a number plate

