SUDDILIVE || SHIVAMOGGA
ಅಬ್ಬೇಪಾರಿ ಮೋಹನ...!Abbepari Mohan
ಗಂಡನನ್ನ ಕಳೆದುಕೊಂಡು ನೋವಿನಲ್ಲಿದ್ದ ಮಹಿಳೆಯೊಬ್ಬಳು ಪೋಲಿಸಪ್ಪನ ಕಾಟಕ್ಕೆ ಜೀವ ಕಳೆದುಕೊಂಡ ನಂತರ ಈ ಪೊಲೀಸ್ ಮೋಹನ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನವನ್ನ ಉಂಟು ಮಾಡಿದ್ದಾನೆ . ನೊಂದ ಹೆಣ್ಣು ಮಕ್ಕಳ ಶಾಪದಿಂದ ಮೋಹನನಿಗೆ ಈ ಶಾಪ ತಟ್ಟಿದೆ ಎಂದು ಹೇಳಿ ಜವಬ್ದಾರಿ ಕಳೆದುಕೊಳ್ಳಬಹುದಿತ್ತು. ಅದರೆ ಜೀವ ಕಳೆದುಕೊಂಡವರ ಮನೆಗೆ ಹೇಗೆ ಸಾಂತ್ವಾನ ಹೇಳೋದು? ಇಂತಹ ಲಜ್ಜೆಗೆಟ್ಟವರ ನಡುವೆಯೂ ಬದುಕು ಅನಿವಾರ್ಯವೆನಿಸಿಕೊಂಡಿದೆಯಲ್ಲಾ ಎಂಬ ಸಂಕಟದಿಂದ ಈ ಸುದ್ದಿ ಮಾಡುವಂತಾಗಿದೆ...
ಗಂಡನನ್ನ ಕಳೆದುಕೊಂಡವರು ಹಾಗೂ ಸೋಷಿಯಲ್ ಮೀಡಯಾ ಫೇಸ್ ಬುಕ್ ನಲ್ಲಿ ಆಕ್ಟಿವ್ ಆದ ಮಹಿಳೆಯರೆ ಈತನ ಟಾರ್ಗೆಟ್ ಆಗಿದ್ದಾರಾ ಎಂಬ ಅನುಮಾನ ಶುರುವಾಗಿದ್ದೆ ಭದ್ರಾವತಿಯ ಸ್ವಾತಿಯನ್ನ ಕಳೆದುಕೊಂಡ ನಂತರ. ಬಹುತೇಕ ಮಹಿಳೆಯರಿಂದ ಉಗಿಸಿಕೊಳ್ಳಲ್ಪಟ್ಟವನೆ ಈ ಮೋಹನ? ಅವನ್ ಬಗ್ಗೆ ಮಹಿಳೆಯರ ಕಾಮೆಂಟ್ಸ್ ಗಳು ಫೇಸ್ ಬುಕ್ ನಲ್ಲಿ ಕುತೂಹಲವಾಗಿದೆ. ಹೀಗಿದೆ ನೋಡಿ,
ಒಬ್ಬರಂತು ಒಂದ್ ಗವರ್ನಮೆಂಟ್ job ಇಟ್ಕೊಂಡು ಹೇಗೆಲ್ಲ ಆಟ ಆಡಬಹುದು ಅಂತಾ ಹೇಳಿಕೊಟ್ಟ ಜೈಲು ಸೇರಿದ, ಇದ್ದಿದ್ದು ಕಾನ್ಸ್ಟೇಬಲ್ ಆದರೆ ಬಿಲ್ಡಪ್ ಮಾತ್ರ sp ಲೆವೆಲ್ ge ಅವನದು ಎಂದು ಫೆಸ್ ಬುಕ್ ಬಳಕೆದಾರರು ಬೈದಿದ್ದಾರೆ. ನಾ 5 ವರ್ಷದ ಹಿಂದೇನೆ ಅವನ ಜಾತಕ ಬರೆದು ಹಾಕಿದ್ದೆ ಅವಾಗ ಯಾರು ನಂಬಿರ್ಲಿಲ್ಲ ಇವಾಗ್ ಗೊತ್ತಾಯ್ತ ಇಂತವರು ಇನ್ನೂತುಂಬಾ ಜನ ಸಭ್ಯರು ದೇವ್ರು ಗಳು ಇದ್ದಾರೆ ಅಂತ ಶಾಪ ಹಾಕಿದ್ದಾರೆ. ಪದ್ಯ, ಕವನಗಳಿಂದ ಮಹಿಳೆಯರನ್ನ ಸೆಳೆಯುವುದು
ಇಲ್ಲಿ ಮಾತಾಡಿದ್ರೆ ಮುತ್ತು ಉದ್ರಬೇಕು ಹಾಗೆ ಮಾತಾಡ್ತಾರೆ ಅವರ ಪ್ರೊಫೈಲ್ ನೋಡಿದ್ರೆ ಎಪ್ಪಾ ಎಷ್ಟ್ ಒಳ್ಳೆಯವ್ರು ಅನ್ಬೇಕು ಹೆಣ್ಮಕ್ಳು.. ಹೆಂಗಸರು ಕೂಡ ಇಂಥ ಕಳ್ಳ ಬಡ್ಡಿ ಮಕ್ಕಳಿಗೆ ಮಣೆ ಹಾಕೋದು ಎಂದು ಹೇಳಿ ಅಬ್ಬೆಪಾರಿ ಮೋಹನ ಭದ್ರಾವತಿ ಎಂದು ಉಲ್ಲೇಖಿಸಿದ್ದಾರೆ.
ಬಹುತೇಕ ನೆಟ್ಟಿಗರು ಪೊಲೀಸ್ ಇಲಾಖೆಗೆ ಬೈದಿದ್ದಾರೆ. ಕೆಲವರು ಇವರು 'ಪೊಲೀಸ್ ಎನ್ನೋ ಹೆಸರೆ ಆತ ಪೊಲೀಸ್ ಅಲ್ಲ ಪೋಲಿ ಅಂತ ಸೂಚಿಸುತ್ತದೆ ಎಂದು ಕಾಮೆಂಟ್ಸ್ ಮಾಡಿದರೆ, ಇವ್ನು ಈ ತರನೆ ಎಫ್ ಬಿ ಯಲ್ಲಿ ಏನೇನು ಮಾತಾಡ್ತಾ ಇದ್ದ ಎಂದು ಶಾಪ ಹಾಕಿದ್ದಾರೆ. ಫೇಸ್ ಬುಕ್ ನಲ್ಲಿ ನ್ಯೂಸ್ ಚಾನೆಲ್ ಪೋಟೋವನ್ನ ಇಟ್ಟುಕೊಂಡು ಮಹಿಳೆಯರೆ ವೈರಲ್ ಮಾಡಿ, ಹಿಂದಿನ ಅನುಭವವನ್ನ ಹಂಚಿಕೊಂಡಿದ್ದಾರೆ.
ಮತ್ತೆ ಕೆಲವರು ಕರ್ನಾಟಕ ಪೊಲೀಸರು ಎಲ್ಲದರಲ್ಲೂ ದಾಖಲೆ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಎಫ್ ಬಿಯಲ್ಲಿ ಬಳಸುತ್ತಿದ್ದ ಪದಗಳ ಬಗ್ಗೆನೂ ಆಕ್ಷೇಪಿಸಿ ಆತನನ್ನ ಅನ್ ಫಾಲೋ ಮಾಡಿರುವುದಾಗಿ ಹೇಳಿದರೆ ಮತ್ತೊಂದಿಷ್ಟು ಮಹಿಳೆಯರು ಈತನನ್ನ ಗುರುತಿಸಿ ಆತನ ಪರಿಚಯ ಹೇಳಿ ತಮಗೆ ಆದ ನೋವನ್ನ ಹೇಳಿಕೊಂಡಿದ್ದಾರೆ.
ಇವನ ಹೆಸರು ಮೋಹನ ಭದ್ರಾವತಿ ಅಂತಾ ಕೆಲಸ ಪೊಲೀಸ್ ಕಾನ್ಸ್ಟೇಬಲ್ ಆದ್ರೆ ಪೂರ್ಣ ಪ್ರಮಾಣದ ಕೆಲಸ ಫೇಸ್ಬುಕ್ ಲ್ಲಿ. ಗಂಡ ಸತ್ತ ಮಹಿಳೆಯರು ಗಂಡನ ಬಿಟ್ಟ ಮಹಿಳಿಯರೇ ಜಾಸ್ತಿ ಟಾರ್ಗೆಟ್, ಹಾಗಂತ ಸಂಸಾರ ಇದ್ದ ಮಹಿಳೆಯರಿಗೂ ಇವ್ನು ಕಾಟ ಕಿರಿಕಿರಿ ಕೊಡೋದ್ ಬಿಟ್ಟಿಲ್ಲ. ಯಾರಾದ್ರೂ ಆನ್ಲೈನ್ ಹೆಣ್ಮಕ್ಳು. ಇದ್ರೆ ಸಾಕು ಒಂದೇ msgs ಒಂದು 100 ಜನಕ್ಕೆ ಗುಂಪಾಗಿ ಫಾರ್ವರ್ಡ್ ಮಾಡೋನು.
ಕಥೆ ಕವನ ಅಂತಾ ಫಾರ್ವರ್ಡ್ ಕಳ್ಸಿ ಮಳ್ಳು ಮಾಡೋದ್ ಅಕಸ್ಮಾತ್ ಯಾರಾದ್ರೂ ರಿಪ್ಲೈ ಮಾಡಿಲ್ಲ ಅಂದ್ರೆ ಸಾಕು ಬೈಯೋದು ಅವರ ಬಗ್ಗೆ ಅಪಪ್ರಚಾರ ಮಾಡೋದ್ ಇತನ ಕಾಯಕ ಇತನ ನಂಬಿ ಅದೆಷ್ಟೋ ಹುಚ್ಚಿಯರು ವಾಟ್ಸಪ್ಪ್ no ಕೊಟ್ಟು ಪೇಚಿಗೆ ಸಿಲ್ಕಿದ್ರೋ ಗೊತ್ತಿಲ್ಲ. ನನಗೆ ಇವನು msgs ಮಾಡಿ ತಲೆ ತಿಂದಾಗ ಹೀಗೆ ಬರ್ದಿದ್ದೆ ಅವಾಗ ಕೂಡ ನನ್ನಬಗ್ಗೆ ಅಪಪ್ರಚಾರ ಮಾಡಿ ಬ್ಲಾಕ್ ಮಾಡ್ಕೊಂಡ್ ಹೋಗಿದ್ದ ಪುಣ್ಯಾತ್ಮ. ಇಂಥ ತುಂಬಾ ಬೇವರ್ಸಿ ಜನ ಇದಾರೆ ಅವ್ರೆಲ್ಲ ಒಂದಿನ ಹೀಗೆ ಸಿಕ್ಕಕೊಳ್ಳೋದು ಪಕ್ಕ... ಏನೆ ಆಗ್ಲಿ ಹೆಂಗಸರು ಹೆಣ್ಮಕ್ಳು ಇಂತವರಿಂದ ಎಚ್ಚರಿಕೆ ಇಂದ ಇರೋದ್ ಕಲಿಬೇಕು ಎಂದು ನೊಂದವರು ಹೇಳಿದ್ದಾರೆ.
ಅಕ್ಕಾಪಡೆ, ಪೋಶ್, ಮಹಿಳಾ ಆಯೋಗ, ಸೈಬರ್ ಕ್ರೈಂ ಹೀಗೆ ಕಾನೂನು ಕಟ್ಟಲೆಗಳು ಇದ್ದರು ಅಮಾಯಕ ಮಹಿಳೆರಯರನ್ನ ಬದುಕಿಸಲು ಸಾಧ್ಯವಾಗಲೇ ಇರುವುದು ನಾವು ಬದುಕುತ್ತಿರುವ ವ್ಯವಸ್ಥೆಯಾಗಿದೆ. ಇಲ್ಲಿ ಕೆಲ ಮಹಿಳೆಯರು ಜೈಲಿಗೆ ಸೇರಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಬಂಧಿಯಾಗಿಲ್ಲ. ಈತನ ಟಾಲೆಂಟ್, ಟಾರ್ಗೆಟ್ ಗುರುತಿಸಿ ಹಿಂದಿನ ಎಸ್ಪಿ ಭದ್ರಾವತಿಯಿಂದ ಮಾಳೂರು ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು.
ಎಲ್ಲೂ ಸುಧಾರಣೆಯಾಗದವರು ಇಲಲ್ಲಿದ್ದರೇನು ಎಂಬ ಉದಾಹರಣೆ ಈ ಅಬ್ಬೇಪಾರಿ ಮೋಹನನಿಗೆ ಅನ್ವಯಿಸುತ್ತೆ. ಕಾದು ನೋಡೋಣ ಮಹಿಳೆಯ ಜೀವ ಮತ್ತು ಜೀವನ ಹೀಗೆ ಅಬ್ಬೇಪಾರಿಗಳ ಕೈಗೆ ಸಿಲುಕಿ ನರಳುತ್ತದೋ ಅಥವಾ ಕಾನೂನು ನಮ್ಮ ದೇಶದಲ್ಲಿ ಗಟ್ಟಿಯಾಗಿ ಚಾಲನೆ ಮಾಡುವ ಅಧಿಕಾರಿಗಳು ಇದ್ದಾರೆ ಎಂದು ತೋರಿಸುತ್ತಾರೋ ಕಾದು ನೋಡೋಣ...
Abbepari Mohan
