ಸೂರಗೊಂಡನಗೊಪ್ಪದಲ್ಲಿ ಡಿಸಿಎಂ ಡಿಕೆಶಿಗೆ ಕಪ್ಪುಬಾವುಟ ಪ್ರದರ್ಶನ-ಇದರ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂದ ಸಮುದಾಯ ನಾಯಕರು- Black flags displayed to DCM DK in Suragondana Goppa - Community leaders say BJP leaders are behind this

 SUDDILIVE || SHIVAMOGGA

ಸೂರಗೊಂಡನಗೊಪ್ಪದಲ್ಲಿ ಡಿಸಿಎಂ ಡಿಕೆಶಿಗೆ ಕಪ್ಪುಬಾವುಟ ಪ್ರದರ್ಶನ-ಇದರ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ ಎಂದ ಸಮುದಾಯ ನಾಯಕರು- Black flags displayed to DCM DK in Suragondana Goppa - Community leaders say BJP leaders are behind this    

DCM, blackflag


ಸಂತ ಸೇವಾಲಾಲ್ ಜಯಂತಿಯ ದಿನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸೂರಗೊಂಡನ ಕೊಪ್ಪದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿರುವುದರ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆಗ್ರಹಿಸಿ ಇಂದು ಬಂಜಾರ ಸಮುದ ಸಮುದಾಯದ ಕೆಲ ನಾಯಕರು ಸುದ್ದಿಗೋಷ್ಠಿ ನಡೆಸಿ ಮಾಜಿ ಶಾಸಕರು ಸಮಾಜಕ್ಕೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.  

ಉಪಮುಖ್ಯಮಂತ್ರಿ ಡಿಕೆಶಿ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವಂತೆ ಕುಮ್ಮಕ್ಕು ನೀಡಿರುವುದರ ಹಿಂದೆ ಬಿಜೆಪಿಯ ಮಾಜಿ ಶಾಸಕ ಪಿ ರಾಜೀವ್ ಹಾಗೂ ಕೆಬಿ ಅಶೋಕ್ ನಾಯಕರವರ ಚಿತಾವಣೆ ಇದೆ ಎಂದು ಮಂಡೇನಕೊಪ್ಪದ ಟಿ ನಾನ್ಯ ನಾಯ್ಕ, ಕುಂಚೇನ ಹಳ್ಳಿಯ ಎಸ್ ಡಿ ಶಿವ ನಾಯ್ಕ, ಬನ್ನಿ ಕೆರೆಯ ಎಚ್ ಚಂದ್ರ ನಾಯ್ಕ ದುಮ್ಮಳ್ಳಿಯ ಮಂಜು ನಾಯ್ಕರು ಆರೋಪಿಸಿದ್ದಾರೆ. 

ಸರ್ಕಾರ ಸಂತ ಸೇವಾಲಾಲರ 287ನೇ ಜಯಂತಿಯನ್ನು ಫೆಬ್ರವರಿ 14ರಂದು ಸೂರಗೊಂಡನಗೊಪ್ಪದಲ್ಲಿ ಆಚರಿಸಲಾಗಿದ್ದು ಈ ವೇಳೆ ಡಿಸಿಎಂ ಡಿಕೆಶಿ ಭಾಗಿಯಾಗಿದ್ದರು. ಈ ವೇಳೆ ಡಿಸಿಎಂಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದು, ಇದರ ಹಿಂದೆ ಮಾಜಿ ಶಾಸಕರುಗಳ ಚಿತಾವಣೆಯಿಂದ ಧಾರ್ಮಿಕ ಸಭೆ ರಾಜಕೀಯ ಕೇಂದ್ರದ ತರಹದಲ್ಲಿ ನಡೆದಿದೆ. ಇದು ನಾಚಿಕೆ ಮತ್ತು ಅಸಹ್ಯ ಎಂದು ಬಣ್ಣಿಸಿದ್ದಾರೆ.

ಸಾಮಾಜಿಕವಾಗಿ ಅನ್ಯಾಯವಾಗಿ ಇರುವ ಬಂಜಾರ ಸಮುದಾಯಕ್ಕೆ ಮೀಸಲಾತಿ ವರ್ಗಿಕರಣ ಮಾಡಿ ಹಂಚಲಾಗಿದೆ ಇದನ್ನು ಪ್ರಶ್ನೆ ಮಾಡಲು ಬೇರೆ ಬೇರೆ ವೇದಿಕೆಗಳು ಹಾಗೂ ಮಾರ್ಗಗಳು ಇವೆ. ನ್ಯಾಯಾಲಯಕ್ಕೆ ಹೋಗಿ ಅಲ್ಲಿ ಆಕ್ಷೇಪಿಸಬಹುದಾಗಿದೆ.

ಚುನಾವಣೆ ವೇಳೆ ದಮನಿತರನ್ನು ಕುಳಿಯುವ ಯತ್ನ ಮಾಡಿದವರಿಗೆ ಬುದ್ಧಿ ಕಲಿಸಲು ಮತದಾನದ ಅಧಿಕಾರವೂ ನಮಗೆ ಇದೆ.  ಇದನ್ನು ಬಿಟ್ಟು ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿಕೆಶಿ ಅವರ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿ ಅವಮಾನ ಮಾಡಿರುವುದನ್ನು ಇವರುಗಳು ಖಂಡಿಸಿದ್ದಾರೆ.

ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಇವರುಗಳು ಘಟನೆಗೆ ಕಾರಣರಾದ ಬಿಜೆಪಿಯ ಮಾಜಿ ಶಾಸಕರಾದ ಪಿ ರಾಜೀವ್ ಕೆ ಬಿ ಅಶೋಕ್ ಅಶೋಕ್ ನಾಯಕ್ ಇವರು ಸಮಾಜಕ್ಕೆ ಕ್ಷಮ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಇದೇ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಶಿಕಾರಿಪುರದಲ್ಲಿ ಬಿಎಸ್ ವೈ ಮನೆಯ ಮೇಲೆ ಕಲ್ಲು ತೂರಿದಾಗ ಮಾತನಾಡದ ಸಮುದಾಯದ ನಾಯಕರು ಮಜಾ ತೆಗೆದುಕೊಂಡಿದ್ದು ಇತ್ತು.  ಈಗ ತಮ್ಮ‌ನಾಯಕರಿಗೆ ಅನ್ಯಾಯವಾಗಿದೆ ಎಂದು ಹೇಳುವ ಈ ನಾಯಕರ ರಾಜಕೀಯ ಹೇಳಿಕೆಗಳ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕಿದೆ. 

Black flags displayed to DCM DK in Suragondana Goppa - Community leaders say BJP leaders are behind this 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close