SUDDILIVE || SHIVAMOGGA
ನಗರದ ಹಂಪ್ಸ್ ಗಳ ತಪಾಸಣೆ, ಎಸ್ಪಿ ಅವರಿಂದ ಮಹತ್ಸದ ಸೂಚನೆ-Inspection of city humps, important instructions from SP
ಸವಳಂಗ ರಸ್ತೆಯ ಹಂಪ್ಸ್ ನಿಂದ ಯುವಕನ ಬಲಿ ಹಾಗೂ ಅವಾಂತರದ ಹಿನ್ನಲೆಯಲ್ಲಿ ಇಂದು ಎಸ್ಪಿ ನಿಖಿಲ್ ನೇತೃತ್ವದಲ್ಲಿ ಪಾಲಿಕೆ ಇಂಜಿನಿಯರ್ ಟ್ರಾಫಿಕ್ ಪೊಲೀಸರು ನಗರದ ಪ್ರಮುಖ ಹಂಪ್ಸ್ ಗಳಿಗೆ ವಿಸಿಟ್ ನೀಡಿದ್ದಾರೆ.
ನಗರದಲ್ಲಿ ಒಟ್ಟು 29 ಹಂಪ್ಸ್ ಗಳು ಪಾಲಿಕೆ ವ್ಯಾಪ್ತಿಗೆ ಬರಲಿವೆ. ಇದರಲ್ಲಿ ಪಶ್ಚಿಮ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ 13 ಹಂಪ್ಸ್ ಗಳು ಇದ್ದು, ಇಂದು ಎಸ್ಪಿ ನಿಖಿಲ್ ನೇತೃತ್ವದಲ್ಲಿ ಟ್ರಾಫಿಕ್ ಪೊಲೀಸರು ಮತ್ತು ಪಾಲಿಕೆ ಇಂಜಿನಿಯರ್ ತಂಡ ವಿಸಿಟ್ ಮಾಡಿದ್ದಾರೆ.
ಮೊನ್ನೆ ಫೆ.12 ರಂದು ಸವಳಂಗ ರಸ್ತೆಯಲ್ಲಿ ನಡೆದ ಹಂಪ್ಸ್ ಅವಾಂತರದಿಂದ ಸೈಯದ್ ಸುಹೇಲ್ ಉಲ್ಲಾ ಎಂಬ ಯುವಕ ಬೈಕ್ ನಲ್ಲಿ ಬರುವಾಗ ಜೀವಕಳೆದುಕೊಂಡಿದ್ದನು. ಇದರಿಂದ ಆತನ ಕುಟುಂಬಸ್ಥರು ಮತ್ತು ಸ್ನೇಹಿತರು ಇಡೀ ಹಂಪ್ಸ್ ನ್ನೇ ಕಿತ್ತು ಹಾಕಿದ್ದರು.
ಈ ಹಂಪ್ಸ್ ಗಳನ್ನ ಅಲ್ಲಿನ ಅಂಗಡಿಯವರೆ ಪಾಲಿಕೆಗೆ ಅರ್ಜಿ ಕೊಟ್ಟು ಹಂಪ್ಸ್ ನಿರ್ಮಿಸಿಕೊಂಡಿರುವುದಾಗಿ ಅಧಿಕಾರಿಗಳ ವಾದವಾಗಿದೆ. ಸವಳಂಗ ರಸ್ತೆಯ ಓವರ್ ಬ್ರಿಡ್ಜ್ ನಂತರದ ಹಂಪ್ಸ್ ನ್ನ ಇತ್ತೀಚೆಗೆ ನಿರ್ಮಿಸಿ ಅದಕ್ಕೆ ರಿಫ್ಲೆಕ್ಟರ್ ಗಳನ್ನ ಅಳವಡಿಸದೆ ಇರುವ ಬಗ್ಗೆ ಎಸ್ಪಿ ನೇತೃತ್ವದ ತಂಡ ಗಮನಿಸಿದೆ.
ಕೆಲ ಹಂಪ್ಸ್ ಗಳು ಎತ್ತರವಾಗಿದ್ದು, ಇವುಗಳ ಎತ್ತಗಳನ್ನ ಕಡಿಮೆಗೊಳಿಸುವಂತೆ ಎಸ್ಪಿ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಹಂಪ್ಸ್ ನಿಂದಾಗಿ ನಡೆದಿರುವ ಓರ್ವನಬಲಿ ಇತರರ ಜೀವನ ಉಳಿಸಲಿದೆಯಾ ಕಾದುನೋಡಬೇಕಿದೆ.
Inspection of city humps, important instructions from SP
