SUDDILIVE || SHIVAMOGGA
ಗೃಹಿಣಿ ಆತ್ಮಹತ್ಯೆಗೆ ಕಾರಣರಾದ ಐವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಾಲಯ- Court sentences five people to death for housewife's suicide
ಗೃಹಿಣಿಗೆ ಮಾನಸಿಕ ಹಿಂಸೆ ನೀಡಿ ಆಕೆಯ ಆತ್ಮಹತ್ಯೆಗೆ ಕಾರಣರಾದ ಗಂಡನ ಮನೆಯ ಐವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರೇಮಾ ರವರು ಮದುವೆಯಾದ ನಂತರ ಆಕೆಯ ಗಂಡ ಹಾಗೂ ಗಂಡನ ಮೆಯವರೆಲ್ಲರೂ ಸಣ್ಣಪುಟ್ಟ ವಿಚಾರಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿ, ಮನೆಯಿಂದ ತವರುಮನೆಗೆ ಕಳಿಸಿದ್ದು, ಆಕೆಯಿಂದ ತನ್ನ ಮಕ್ಕಳನ್ನು ಕೂಡ ದೂರಮಾಡಿದ್ದಲ್ಲದೇ, ಮನೆಗೆ ಬರುತ್ತೇನೆ ಕರೆದುಕೊಂಡು ಹೋಗಿ ಎಂದರೂ ಕೂಡ ನೀನು ಮನೆಗೆ ಬರುವುದು ಬೇಡ ವಿಷ ಕುಡಿದು ಸಾಯಿ ಎಂದು ಹೇಳಿದ್ದರಿಂದ ಪ್ರೇಮಾ ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ 26-03-2017 ರಂದು ವಿಷ ಸೇವನೆ ಮಾಡಿದ್ದು, ದಿ-07/04/2017 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ 84/2017 ಕಲಂ 498(ಎ), 306 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ನಿಜಾಮ್ ಎಎಸ್ಐ (ನಿವೃತ್ತ) ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ: 13-02-2026 ರಂದು ಆರೋಪಿತರಾದ ಎ1 ಮೋಹನ್ ಆರ್* ಬಿನ್ ರಂಗಪ್ಪ, 33 ವರ್ಷ, ವಾಸ ಸಂಕ್ಲಿಪುರ ಗ್ರಾಮ, ಭದ್ರಾವತಿ ತಾ||, ಶಿವಮೊಗ್ಗ.
ಎ2 ಸರೋಜಮ್ಮ ಕೋಂ ರಂಗಪ್ಪ, 60 ವರ್ಷ, ವಾಸ ಸಂಕ್ಲಿಪುರ ಗ್ರಾಮ, ಭದ್ರಾವತಿ ತಾ||, ಶಿವಮೊಗ್ಗ. ಎ3 ರಂಗಪ್ಪ ಬಿನ್ ಕೃಷ್ಣಪ್ಪ, 66 ವರ್ಷ, ವಾಸ ಸಂಕ್ಲಿಪುರ ಗ್ರಾಮ, ಭದ್ರಾವತಿ ತಾ||, ಶಿವಮೊಗ್ಗ. ಎ4 ಶೇಖರ್ ಬಿನ್ ರಂಗಪ್ಪ, 44 ವರ್ಷ, ವಾಸ ಸಂಕ್ಲಿಪುರ ಗ್ರಾಮ, ಭದ್ರಾವತಿ ತಾ|| ಶಿವಮೊಗ್ಗ ಮತ್ತು ಎ5 ಮೂರ್ತಿ ಬಿನ್ ರಂಗಪ್ಪ, 41 ವರ್ಷ, ವಾಸ ಸಂಕ್ಲಿಪುರ ಗ್ರಾಮ, ಭದ್ರಾವತಿ ತಾ||, ಶಿವಮೊಗ್ಗರವರಿಗೆ ಕಲಂ 498ಎ), 306 ಸಹಿತ 149 ಐಪಿಸಿ ರಿತ್ಯಾ 3 ವರ್ಷ ಕಠಿಣ ಕಾರಾವಾಸ ಸಜೆ ಮತ್ತು 1,50,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತದೆ ಹಾಗೂ ಮೃತೆ ಶ್ರೀಮತಿ ಪ್ರೇಮಾರವರ ತಾಯಿ ಶ್ರೀಮತಿ ಚಂದ್ರಮ್ಮ ರವರಿಗೆ ಪರಿಹಾರವಾಗಿ 1,00,000/- ರೂಗಳನ್ನು ನೀಡಲು ಆದೇಶಿಸಿರುತ್ತದೆ.
Court sentences five people to death for housewife's suicide
