ಕದಿಯಲು ಬಂದವನಿಗೆ ಸ್ಥಳೀಯರಿಂದ ಧರ್ಮದೇಟು, ಮೆರವಣಿಗೆ, ನಂತರ ಪೊಲೀಸರಿಗೆ ಹಸ್ತಾಂತರ- Locals beaten and parade to thief, then hand him over to the police

SUDDILIVE || SAGARA

ಕದಿಯಲು ಬಂದವನಿಗೆ ಸ್ಥಳೀಯರಿಂದ ಧರ್ಮದೇಟು, ಮೆರವಣಿಗೆ, ನಂತರ ಪೊಲೀಸರಿಗೆ ಹಸ್ತಾಂತರ- Locals beaten and parade to thief, then hand him over to the police   



ಹಾಡಹಗಲೇ ಮನೆಗಳ್ಳತನ- ರೆಡ್ ಹ್ಯಾಂಡ್ ಆಗಿ ಹಿಡಿದು ಕಳ್ಳನಿಗೆ ಜನರು ಗೂಸಾ ನೀಡಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕದಿಯಲು ಬಂದ ಖದೀಮನನ್ನ ಸುರೇಶ್ ಎಂದು ಗುರುತಿಸಲಾಗಿದೆ. 

ಸಾಗರ ತಾಲೂಕಿನ ಕಾನಲೆ ಗ್ರಾ.ಪಂ ವ್ಯಾಪ್ತಿಯ ಹೊಂಕೇರಿ ಗ್ರಾಮದಲ್ಲಿ ನಡೆದ ಘಟನೆ ಹಾಡುಹಗಲೇ ಕಳ್ಳತನ ಮಾಡಲು ಸುರೇಶ್ ಫೀಲ್ಡಿಗಿಳಿದಿದ್ದ, ಹೊಂಕೇರಿ ಗ್ರಾಮದ ರೈತರೊಬ್ಬರ ಮನೆಯಲ್ಲಿ 50 ಸಾವಿರ ಕದ್ದು ಪರಾರಿ ಆಗಲು ಯತ್ನಿಸಿದ್ದ ಖದೀಮನನ್ನ ಕಳ್ಳತನ ಮಾಡುತ್ತಿದ್ದ ಖದೀಮನನ್ನ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 


ಬೆಲ್ಲ ಮಾರಾಟ ಮಾಡಿ ಕೂಡಿಟ್ಟಿದ್ದ 50 ಸಾವಿರ ಹಣ ಹಾಗೂ ಚಿನ್ನಾಭರಣ ಕಳುವು ಮಾಡಲು ಸುರೇಶ್ ಮನೆಗೆ ನುಗ್ಗಿದ್ದ. ಮನೆಯ ಕಿಟಕಿ-ಬಾಗಿಲು ಮುರಿದು ಒಳನುಗ್ಗಿ ನಗದು ಹಣ ಮತ್ತು ಚಿನ್ನಾಭರಣಗಳನ್ನ  ದೋಚಿದ್ದ. ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಖದೀಮನ ಸೆರೆಯಾಗಿದೆ. 

ಗ್ರಾಮಸ್ಥರೆಲ್ಲಾ ಒಟ್ಟಾಗಿ ಸೇರಿ ಕಳ್ಳನನ್ನು ಸೆರೆ ಹಿಡಿದು ಮೆರವಣಿಗೆ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸರಿಗೆ ಧರ್ಮದೇಟು ನೀಡಿ ಸ್ಥಳೀಯರು ಒಪ್ಪಿಸಿದ್ದಾರೆ. ಧರ್ಮದೇಟಿಗೆ ಸುರೇಶ್ ಸಂಪೂರ್ಣ ಅಸ್ವಸ್ಥನಾಗಿದ್ದಾನೆ. ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುರೇಶ್ ಮೂಲತಃ ಉಡುಪಿಯಾಗಿದ್ದರು ಸಾಗರದ ಟೌನ್ ನಲ್ಲಿ ವಾಸವಾಗಿದ್ದ. 

Locals beaten and parade to thief, then hand him over to the police

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close