SUDDILIVE || SHIVAMOGGA
ಸೈಬರ್ ಕ್ರೈಂ, ಆರೋಪಿ ಬಂಧನ-Cybercrime, accused arrested
ಕಮಿಷನ್ ಕೊಸಿಡುವುದಾಗಿ ನಂಬಿಸಿ ಆಧಾರ್ ಕಾರ್ಡ್ ಲಿಂಕ್ ಮಾಡಿದ ಮೊಬೈಲ್ 15 ದಿನ ಕೊಡು ಎಂದು ವಂಚಿಸಿ ಟೀ ಸ್ಟಾಲ್ ನಡೆಸುತ್ತಿದ್ದ ಯುವಕನ ಅಕೌಂಟ್ ನಿಂದ ಲಕ್ಷಾಂತರ ರೂ ಹಣ ವರ್ಗಾಯಿಸಿದ ಆರೋಪದ ಅಡಿ ಓರ್ವ ಖತರ್ನಾಕ್ ಒಬ್ಬನನ್ನ ಸೆನ್ ಪೊಲೀಸರು ಬಂಧಿಸಿ ಜೆಸಿಗೆ ಕಳುಹಿಸಿದ್ದಾರೆ.
ಶಿವಮೊಗ್ಗ ವಿನೋಬನಗರದ ಇಂಡಿಯನ್ ಓವರ್ಸಿಸ್ ಬ್ಯಾಂಕ್ ಬ್ರಾಂಚ್ ನಲ್ಲಿ ಗಣೇಶ್ ಟಿ-ಶಾಪ್ ಹೆಸರಿನಲ್ಲಿ ಗೋಪಾಳದ ಅಮಿತ್ ಎಂಬುವರು ಖಾತೆಯನ್ನು ಓಪನ್ ಮಾಡಿಕೊಂಡು ಬಳಸುತ್ತಿದ್ದರು. ಈ ಖಾತೆಯನ್ನು ಸ್ನೇಹಿತನಾದ ಶರತ್ @ ಗುಂಡ ಎಂಬಾತನು ಅಮಿತ್ ರಿಂದ ಪಾಸ್ ಬುಕ್, ಎ.ಟಿಎಂ ಕಾರ್ಡ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರುವ ಮೊಬೈಲ್ ನಂಬರ್ 9902039655 ನ್ನು ನನಗೆ ಕೊಡು ನಿನಗೆ 15 ದಿನಗಳಿಗೊಮ್ಮೆ ಕಮಿಷನ್ ಕೊಡುತ್ತೇನೆಎಂದು ನಂಬಿಸಿ, ಸದರಿಯನ್ನು ಖಾತೆಯನ್ನು ಪಡೆದುಕೊಂಡು ಲಕ್ಷಂತಾರ ರೂ ಹಣವನ್ನು ವರ್ಗಾವಣೆ ಮಾಡಿಕೊಂಡಿರುವ ಆರೋಪದ ಅಡಿಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿ ಬಗ್ಗೆ ಎಸ್ಪಿ ನಿಖೀಲ್ ಬಿ ಮತ್ತು ಅಡಿಷನಲ್ ಎಸ್ಪಿಗಳಾದ ಕಾರಿಯಪ್ಪ ಎ ಜಿ, ಮತ್ತು ರಮೇಶ್ ಕುಮಾರ್, ಸೆನ್ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ರವರ ಮಾರ್ಗದರ್ಶನದಲ್ಲಿ, ಮಂಜುನಾಥ ಪೊಲೀಸ್ ನಿರೀಕ್ಷಕರು ಸೈಬರ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳಾದ ಶೇಖರ ಎನ್, ಜೆ ಕೆ ಪ್ರಕಾಶ್ ಎಎಸ್ಐ, ಕಾಂತಮ್ಮ, ಮಹಿಳಾ ಹೆಚ್. ಸಿ, ಗಿರೀಶ್ ಸ್ವಾಮಿ, ಆಂಡ್ರೂಸ್ ಜೋನ್ಸ್, ಅರವಿಂದ ಸಿಪಿಸಿ ರವರುಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ತನಿಖಾ ತಂಡವು ಪ್ರಕರಣದ ಆರೋಪಿ ಶರತ್ ಬಿನ್ ಕೃಷ್ಣ ರೆಡ್ಡಿ ,ವಾಸ - ಕೆಳಗಿನ ತುಂಗಾ ನಗರ 2nd Cross, ಈತನನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಲಾಗಿ ಆರೋಪಿತನ ಬಳಿ ವಿವಿಧ ಹೆಸರಿನಲ್ಲಿರುವ ವಿವಿಧ ಬ್ಯಾಂಕ್ ಗಳಲ್ಲಿ ಪತ್ತೆಹಚ್ಚಲಾದ 19 Mule accounts ಮೇಲೆ ದೇಶಾದ್ಯಂತ ಒಟ್ಟು 96 ಕ್ಕೂ ಹೆಚ್ಚು ಪ್ರಕರಣಗಳಿದ್ದು, ಅವುಗಳಲ್ಲಿ ಸುಮಾರು 55,43,56,248/- ರೂ ಗೂ ಹೆಚ್ಚು ವಂಚಿಸಿರುವುದಾಗಿ ತಿಳಿದು ಬಂದಿದೆ.
ಅಲ್ಲದೆ ಆರೋಪಿಯು ಸ್ವಾದೀನಹೊಂದಿದ್ದ 19 Mule account ಗಳಲ್ಲಿ ಒಟ್ಟು 11,48,42,898 ರೂ ಗೂ ಹೆಚ್ಚು ಹಣ ವರ್ಗಾವಣೆಯಾಗಿರುವುದು ಕಂಡು ಬಂದಿರುತ್ತದೆ. ಮನೆ ಶೋಧನೆಯನ್ನ ಪೊಲೀಸರು ನಡೆಸಿದಾಗ
1) 18 Pass Book
2) 07 Cheque Book
3) 25 ATM card
4) 02 QR ಕೋಡ್ Scanner
5) 02 Mobiles
ಗಳನ್ನು ಪತ್ತೆಯಾಗಿದ್ದು ಇವುಗಳನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
Cybercrime, accused arrested
