SUDDILIVE || SHIVAMOGGA
ನಾಲೂರು ಬಳಿ ಅಪಘಾತ- ಓರ್ವ ಮಹಿಳೆ ಸ್ಥಳದಲ್ಲೇ ಸಾವು-Accident near Nalur - Woman dies on the spot!
ಆಟೋ ಚಾಲಕನ ನಿರ್ಲಕ್ಷ್ಯದಿಂದಾಗಿ ನಾಲ್ವರು ಸಮೀಪ ನಿನ್ನೆ ರಾತ್ರಿ ಅಪಘಾತವೊಂದು ಸಂಭವಿಸಿದ್ದು ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಸಮೀಪ ಇರುವ ಶಬರಿ ಹೋಟೆಲ್ ಮಾಲೀಕರಾದ ಸುದರ್ಶನ್ ಮತ್ತು ಕುಟುಂಬದವರು ಉಡುಪಿಯ ಹೆಬ್ರಿ ಸಮೀಪದ ಸಂಬಂಧಿಕರ ಮನೆ ಗೃಹಪ್ರವೇಶಕ್ಕಾಗಿ ಆಟೋದಲ್ಲಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ಆಗುವಾಗ
ನಾಲೂರು ಸಮೀಪದ ತಿರುವಿನಲ್ಲಿ ಕಬ್ಬಿಣದ ಡಿವೈಡರ್ ( ತಡೆಗೋಡೆ ) ಗೆ ಆಟೋ ಡ್ರೈವರ್ ಚಾಲಕನ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದಿದ್ದು ಬಲ ಭಾಗದಲ್ಲಿ ಕುಳಿತಿದ್ದಂತಹ ನಿಶ್ಮಿತಾ ಶೆಟ್ಟಿ 27 ವರ್ಷ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುದರ್ಶನ್ 35 ವರ್ಷ ಹಾಗೂ ಮಗು ಸಂಚಿತ್ 7 ವರ್ಷ ಇಬ್ಬರಿಗೂ ಗಾಯಗಳಾಗಿದ್ದು ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕುರುವಳ್ಳಿಯ ಯಲ್ಲಪ್ಪ ಎಂಬ ಆಟೋ ಚಾಲಕನ ವಿರುದ್ಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Accident near Nalur - Woman dies on the spot!
