SUDDILIVE || SHIVAMOGGA
ನಸೀರ್ ಅಹಮದ್, ಎಸ್ ರವಿ ಹಾಗೂ ಬಿಕೆಹೆಚ್ ಕ್ಷಮೆ ಕೇಳಲಿ-ಡಿ.ಎಸ್.ಅರುಣ್ ಆಗ್ರಹ-D.S. Arun demands that Nasir Ahmed, S Ravi and BKH apologize
ವರ್ಷದ ಮೊದಲನೆ ಕಲಾಪ ಸಾಮಾನ್ಯವಾಗಿ ಫೆಬ್ರವರಿಗೆ ಆರಂಭವಾಗುತ್ತೆ. ಆದರೆ ರಾಜ್ಯ ಸರ್ಕಾರ ವಿಬಿಜಿ ರಾಮ್ ಜಿ ಯೋಜನೆಯ ವಿರೋಧ ಮಾಡುವ ಉದ್ದೇಶದಿಂದ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಮೂವರು ಶಾಸಕರ ನಡವಳಿಕೆ ರಾಜ್ಯದ ತಲೆತಗ್ಗಿಸಿದೆ ಹಾಗಾಗಿ ಮೂವರು ರಾಜ್ಯದ ಕ್ಷಮೆ ಕೇಳಬೇಕೆಂದು ಶಾಸಕ ಡಿಎಸ್ ಅರುಣ್ ಅಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ನಡೆದ ಶಾಸಕರ ನಡೆ, ನಂತರ ನಡೆದ ಬೆಳವಣಿಗೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ. ರಾಜ್ಯಪಾಲರ ಬಾಯಿಯಲ್ಲಿ ಸುಳ್ಳು ಹೇಳಿಸುವ ಪ್ರಯತ್ನ ನಡೆಯಿತು. ರಾಜ್ಯಪಾಲರು ಭಾಷಣ ಮುಗಿಸಿ ಹೊರಟ ವೇಳೆ, ಈ ವೇಳೆ ರಾಷ್ಟ್ರಗೀತೆ ಹಾಕದಿದ್ದರೂ ರಾಷ್ಟ್ರಗೀತೆಗೆ ಅಪಮನ ಮಾಡಿದ್ದಾರೆ ಎಂಬ ಸುಳ್ಳು ಆರೋಪ ಮಾಡಲಾಗಿದೆ. ಅವರ ಅಡ್ಡಹಾಕುವ ಪ್ರಯತ್ನ ನಡೆಯಿತು. ಕಾಂಗ್ರೆಸ್ ಶಾಸಕರಾದ ಬಿಕೆ ಹರಿ ಪ್ರಸಾದ್ ಹಾಗೂ ಎಸ್ ರವಿ ರಾಜ್ಯಪಾಲರನ್ನ ಅಡ್ಡಹಾಕಿ ಬೆರಳು ತೋರಿಸಿ ಬೆದರಿಕೆ ಹಾಕಿದ್ದಾರೆ. ಹರಿಪ್ರಸಾದ್ ಅವರ ಕುರ್ತ ಹರಿದುಹೋಗಿದ್ದರೆ ಅದನ್ನ ಬಿಜೆಪಿ ಹರಿದಿದೆ ಎಂದು ದೂರಿದ್ದಾರೆ.
ಹರಿಪ್ರಸಾದ್ ಮತ್ತು ರವಿಯನ್ನ ಅಮಾನತ್ತಿಗೆ ಬಿಜೆಪಿ ಆಗ್ರಹಿಸಿತು. ಚರ್ಚೆ ನಡೆದಿದೆ. ನಮ್ಮ ಕಲಾಪದಲ್ಲಿ ಕೈಎತ್ತಿದಾಗ ಮಾತಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಹರಿಪ್ರಸಾದ್ ಮಾತನಾಡಿದ ಪದಗಳು ಮರೆಯಲಾಗದು. ಅವರ ನಡುವಳಿಕೆ ಬಗ್ಗೆ ಚರ್ಚೆಯಾಗೊಲ್ಲ. ಅವರ ಪದಗಳನ್ನ ಕಡತದಿಂದ ತೆಗೆಯಿಸಬಹುದು. ಆದರೆ ನಡವಳಿಕೆ, ಬಳಸಿದ ಪದಗಳು ಚರ್ಚಾಸ್ಪದವಾಗಿದೆ. ಚೆಡ್ಡಿಗಳು, ಹಾವಿನ ತರಹದವರು ಎನ್ನುತ್ತಿದ್ದ ಹರಿಪ್ರಸಾದ್ ಈ ಬಾರಿ ಮತ್ತೊಂದು ಹೆಜ್ಜೆ ಮುಂದು ಹೋಗಿ ತಲೆಹಿಡುಕರು, ಚೆಡ್ಡಿಗಳು ಲಫಂಗಾಗಳು ಎಂಬ ಪದ ಬಳಕೆಗೆ ಮುಂದಾಗಿದ್ದಾರೆ.
ಇದನ್ನ ಸಭಾಪತಿಗಳಿಗೆ ಉದಾಹರಣೆ ಸಮೇತ ಉತ್ತರಿಸುತ್ತೇವೆ. ಆ ವೇಳೆ ನೀತಿ ನಿರೂಪಣ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ಬೇಡ ಎಂದು ಕಾಂಗ್ರೆಸ್ ಪತ್ರ ನೀಡುತ್ತೇವೆ. ಈಗ ಪದಗಳನ್ನ ತೆಗೆಯಿಸಲಾಗಿದೆ. ವಿಬಿಜಿ ರಾಮ್ ಜಿ ಚರ್ಚೆ ಮಾಡಲು ಕಾಂಗ್ರೆಸ್ ರೆಸುಲೂಷನ್ ಮಾಡಿ ಡಿಸಿಡೆಂಟ್ ಹಾಕಿ ಪ್ರತಿಭಟಿಸಬೇಕೆಂಬ ಹಪಾಪಿಯಲ್ಲಿತ್ತು. ಮತ್ತೆ ಚರ್ಚೆ ನಡೆದಾಗ ನಸೀರ್ ಅಹಮದ್ ಪ್ರಧಾನಿಯನ್ನ ದೇಶದ್ರೋಹಿ ಎಂದು ಉಲ್ಲೇಖಿಸಿದರು. ಇದನ್ನ ಬಿಜೆಪಿ ಎಷ್ಟುದಿನ ಸಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಪ್ರಧಾನಿಯನ್ನ ದೇಶದ್ರೋಹ ಎಂಬುದು ಸರಿಯಲ್ಲ ಎಂದರೆ ಸಮರ್ಥಿಸಿಕೊಳ್ಳುವ ಹಂತಕ್ಕೆ ಕಾಂಗ್ರೆಸ್ ತಲುಪಿದೆ. ಸಿಟಿ ರವಿ ಯಾರು ಈ ದೇಶದ ದೇಶದ್ರೋಹಿ ಎಂದು ಹೇಳುವವರು ಈದೇಶದವರಲ್ಲ ಅವರು ಪಾಕಿಸ್ತಾನಿಗಳು ಎಂದರೂ ಸಿಟಿ ರವಿಯವರ ಮಾತನ್ನ ತಿರುಚಲಾಯಿತು. ಸಿಟಿ ರವಿ ಹೇಳಿದ್ದು ತಪ್ಪು ಎನ್ನಲಾಯಿತು. ಇದಕ್ಕೆ ಕಾಂಗ್ರೆಸ್ ಅಸಂವಿಧಾನ ಪದ ಬಳಸುತ್ತಿದೆ ಎಂದರು.
ಸಭಾಪತಿಗಳು ಎಲ್ಲಾ ಸದಸ್ಯರ ನಡವಳಿಕೆ ಸರಿಯಿರಲಿಲ್ಲ ಎಂದಿದ್ದು ನೋವಾಗಿದೆ. ಬಿಕೆ ಹರಿಪ್ರಸಾದ್, ರವಿ ಮತ್ತು ನಸೀರ್ ಅಹಮದ್ ಅವರ ನಡವಳಿಕೆ ಸರಿಯಲ್ಲ ಎನ್ನಬೇಕಿದ್ದ ಸಭಾಪತಿಗಳು ಅವರ ಪದ ಬಳಕೆ ಸರಿಯಲ್ಲ ಎಂದವರ ಬಗ್ಗೆ ಸರಿಯಲ್ಲ ಎಂದಿದುಬನೋವು ತಂದಿದೆ. ಈ ಮೂವರು ರಾಜ್ಯದ ಕ್ಷಮೆ ಕೇಳಬೇಕು ಎಂದರು.
ಮೆಟ್ರೋದರ ಏರಿಕೆ ರಾಜ್ಯದ ಬೆಂಗಳೂರಿನಲ್ಲಿದೆ. ಸಂಸದ ತೇಜಸದವಿ ಸೂರ್ಯ ತಡೆಹಿಡಿಯಬೇಕಿದೆ ಎಂದರೆ ರಾಜ್ಯ ಸರ್ಕಾರ ಬೇಕೆ ಬೇಕು ಎಂಬ ಹಪಾಪಿ ತನಕ್ಕೆ ಬಿದ್ದಿದೆ. ರಾಜ್ಯ ಸರ್ಕಾರ ರೆವೆನ್ಯೂ ಬೇಕೆಬೇಕು ಎಂಬುದಕ್ಕೆ ಹಣವನ್ನ ಸಂಗ್ರಹಿಸಲಾಗುತ್ತಿದೆ ಎಂದ ಶಾಸಕರು, ಸಾಗರದ ಮಾರಮ್ಮನಜಾತ್ರೆಗೆ ಹೆಲಿ ಟೂರಿಸಂಗೆ ಬೇಡ ಎಂದು ಡಿಸಿಗೆ ಹೇಳಿದರೂ ಟಫ್ ಗ್ರೌಂಡ್ ಬೇಡ ಎಂದರೂ ಮಾಡುತ್ತಿದ್ದಾರೆ. ಮತ್ತೆ ಟಫ್ ಗ್ರೌಂಡ್ ಮಾಡುತ್ತಿರುವುದು ಮತ್ತೆ ಸಿದ್ದ ಪಡಿಸಲು ಕಷ್ಟವಾಗಲಿದೆ. ಕೆಎಸ್ ಸಿಎ ಗೆ ಆ ಗ್ರೌಂಡನ್ನ ಸಿದ್ದಪಡಿಸಿಲ್ಲ. ಕೆಎಸ್ಸಿಎಗೆ ಸೇರಿದ್ದರೆ ಗ್ರೌಂಡ ಬಳಕೆಗೆ ಕೊಡುತ್ತಿರಲಿಲ್ಲ ಎಂದರು.
ಆಯುಷ್ ವಿವಿಗೆ ಬಿಎಸ್ ವೈ ಸಿಎಂ ಆಗಿದ್ದಾಗ ಸೋಗಾನೆಯಲ್ಲಿ 100 ಎಕರೆ ಭೂಮಿ ತೆಗೆದಿಡಲಾಗಿತ್ತು. ಈಗ ಅದು 17 ಎಕರೆ ಉಳಿದುಕೊಂಡಿದೆ. ಇದೇ ಪ್ರಶ್ನೆ ಕೇಳಿದಾಗ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಇರುವ ವಿವಿಯನ್ನ ಸೇರಿಸಲಾಗುತ್ತಿದೆ. ಇರುವ ವಿವಿ ಹಾಗೆ ನಡೆದುಕೊಂಡು ಹೋಗಲಿ ಎನ್ನುತ್ತಿದ್ದಾರೆ. ಹೀಗೆ ಮುಂದು ವರೆದರೆ ಆಸ್ಪತ್ರೆಗಳಲ್ಲಿ ಪ್ರಾಣಿಗಳಿಗೆ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸ ಬೇಕೆ ವಿನ ಜನರದ್ದಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಸುದ್ದಿಗೋಷ್ಠಿಗೂ ಮೊದಲು ಪತ್ರಕರ್ತ ಆರುಂಡಿ ಶ್ರೀನಿವಾಸ್ ಅವರು ಬರೆದ ಪುಸ್ತಕವನ್ನ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಪಠ್ಯವಾಗಿ ಅಳವಡಿಸಿಕೊಂಡಿರುವುದಕ್ಕೆ ಸನ್ಮಾನಿಸಲಾಯಿತು.
D.S. Arun demands that Nasir Ahmed, S Ravi and BKH apologize

