SUDDILIVE || BHADRAVATHI
ನಿನ್ನೆ ಬಿಡುಗಡೆಯಾಗಿದ್ದ ಡಿಚ್ಚಿ ಮುಬಾರಕ್ ಕಾಲಿಗೆ ಬಿತ್ತು ಗುಂಡು-Dichi Mubarak, which was released yesterday, is locked again
ಶಾಸಕ ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಯಾನೆ ಬಸವನಿಗೆ ಕೊಲೆ ಬೆದರಿಕೆ ಹಾಕಿ ಸುಮಾರು ಒಂದುವರೆ ವರ್ಷದ ಹಿಂದೆ ಜೈಲು ಸೇರಿದ್ದ ಡಿಚ್ಚಿ ಮುಬಾರಕ್ ಮತ್ತೆ ಪೊಲೀಸರ ಬಳಿ ಲಾಕ್ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದ ಡಿಚ್ಚಿ ಇಂದು ಸಂಜೆ ಹೊಸಮನೆ ಪೊಲೀಸ್ ಠಾಣ ವ್ಯಾಪ್ತಿಯ ಗೌರಪುರದಲ್ಲಿ ಲಾಕ್ ಆಗಿದ್ದಾನೆ. ಕಾರಿನ ತುಂಬ ಮಾರಕಾಸ್ತ್ರಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಾಭ್ಯವಾಗಿದೆ. ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಮಾಹಿತಿ ಖಚಿತ ಪಡಿಸುತ್ತಿಲ್ಲ
ಸ್ಥಳೀಯ ಮಾಹಿತಿಯ ಪ್ರಕಾರ ಡಿಚ್ಚಿ ಮುಬಾರಕ್ ನ್ನ ಉಕ್ಕುಂದದಿಂದ ಚೇಸ್ ಮಾಡಿಕೊಂಡು ಬಂದ ಪೊಲೀಸರು ಶಿವಾನಿ ಕ್ರಾಸ್ ಬಳಿ ಅಡ್ಡಹಾಕಿದ್ದಾರೆ. ಅಡ್ಡಹಾಕಿದ ವೇಳೆ ಡಿಚ್ಚಿ ಹೊಸಮನೆ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದಪ್ಪನವರ ಖಾಸಗಿ ಕಾರಿಗೆ ಡಿಕ್ಕಿ ಹೊಡೆದ ಡಿಚ್ಚಿಯಿದ್ದ ಮಹೇಂದ್ರ ಎಕ್ಸ್ ಯು ವಿ ರಸ್ತೆ ಪಕ್ಕದ ಗುಂಡಿಗೆ ಬಿದ್ದಿದ್ದಾನೆ.
ಕಾರು ತೆಗೆಯಲಾಗದ ಹಿನ್ನಲೆಯಲ್ಲಿ ಡಿಚ್ಚಿ ಸೇರಿ ನಾಲ್ವರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದರಲ್ಲಿ ಒಬ್ಬ ಎಸ್ಕೇಪ್ ಆಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಘಟನೆ ಇಂದು ಸಂಜೆ ಸುಮಾರು 5 ಗಂಟೆಗೆ ನಡೆದಿರುವುದಾಗಿ ತಿಳಿದು ಬಂದಿದೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸ್ ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಕಾಲಿಗೆ ಗುಂಡು
ಗನ್ ಸಮೇತ ತಗಲಾಕಿಕೊಂಡಿರುವ ಮುಬಾರಕ್ ನ ಕಾಲಿಗೆ ಗುಂಡು ಹಾರಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಎಲ್ಲಾ ಅನುಮಾನಕ್ಕೆ ಸ್ಪಷ್ಟನೆ ಸಿಗಲು ಪೊಲೀಸರು ಬಾಯಿ ಬಿಡುತ್ತಿಲ್ಲ. ಹಾಗಾಗಿ ಈ ಎಲ್ಲಾ ಘಟನೆಗಳು ಪೊಲೀಸ್ ಇಲಾಖೆಯ ಸ್ಪಷ್ಟನೆ ಇಲ್ಲದ ಸುದ್ದಿಗಳಾಗಿವೆ. ಆದರೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಡಿಚ್ಚಿಯನ್ನ ಕರೆತಂದು ಚಿಕಿತ್ಸೆ ನೀಡಲಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪಿಎಸ್ಐ ಕೃಷ್ಣಕುಮಾರ್ ಮಾನೆ ಮೂವರು ಪಿಸಿ ಸಹ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬಸವನಿಗೆ ಸ್ಕೆಚ್ ಅಂಡ್ ಡೀಲ್ ಮಾಡಿದ್ದ ಡಿಚ್ಚಿ ಜೈಲಿನಲ್ಲಿರುವಾಗಲೆ ಜೈಲ್ ಸಿಬ್ಬಂದಿಗಳಿಗೆ ಹಾವಳಿಯಿಟ್ಟಿದ್ದ, ಭದ್ರಾವತಿ ನ್ಯಾಯಾಲಯದ ಕಲಾಪಕ್ಕೆ ಕರೆದುಕೊಂಡು ಹೋಗಿದ್ದ ಸಿಬ್ಬಂದಿಗಳಿಗೆ ವಾಹನ ಹತ್ತಲ್ಲ ಎಂದು ಮುಬಾರಕ್ ಕಿರಿಕ್ ತೆಗೆದಿದ್ದ. ಧೂಮಪಾನ ಮಾಡಲು ಅವಕಾಶ ನೀಡುವಂತೆ ವಾಗ್ವಾದಕ್ಕೆ ಇಳಿದು ಕರ್ತವ್ಯ ನಿರತ ಡಿಎಆರ್ ಪೊಲೀಸ್ ಗೆ ಕೈಸನ್ನೆ ಮಾಡಿ ಬೆದರಿಕೆ ಹಾಕಿದ್ದ. ಇದು ತಿಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Dichi Mubarak, which was released yesterday, is locked again


