SUDDILIVE || BHADRAVATHI
ಡಿಚ್ಚಿಗೆ ಡಕಾಯಿತಿ ಪ್ರಕರಣದಲ್ಲಿ ಕಾಲಿಗೆ ಗುಂಡೇಟು- Dichi was shot in the leg in a robbery case
ಅನುಮಾನಸ್ಪದದ ಮೇರೆಗೆ ಸುದ್ದಿ ಮಾಡಲಾಗಿದ್ದ ಡಿಚ್ಚಿ ಮುಬಾರಕ್ ಕಾಲಿಗೆ ಬಿತ್ತು ಗುಂಡೇಟು ಎಂಬ ಶೀರ್ಷಿಕೆ ಅಡಿಯ ಸುದ್ದಿ ನಿಜವಾಗಿದೆ. ಡಿಚ್ಚಿ ಮುಬಾರಕ್ ಗೆ ಡಕಾಯಿತಿ ಅಡಿಯಲ್ಲಿ ಪ್ರಕರಣ ಫಿಕ್ಸ್ ಮಾಡಿ ಕಾಲಿಗೆ ಗುಂಡೇಟು ಹೊಡೆಯಲಾಗಿದೆ. ಡಿಚ್ಚಿ ಜೊತೆ ಇದ್ದ ಜಹೀರ್, ರೆಹಮತ್ ಪಾಷ, ಜುನೈದ್ ಮತ್ತು ಮನುಸಿಂಗ್ ಅವರನ್ನ ಬಂಧಿಸಲಾಗಿದೆ.
ಗೌರಾಪುರದಲ್ಲಿ ಡಕಾಯಿತಿಗೆ ಹೊಂಚು ಹಾಕಿದ್ದ ಡಿಚ್ಚಿ ಮುಬಾರಕ್ ನ್ನ ಹಿಡಿಯಲು ಹೋದ ಪೊಲೀಸರ ತಂಡದ ಮೇಲೆ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ಪಿಎಸ್ಐ ಕೃಷ್ಣಕುಮಾರ್ ಮಾನೆಯ ಕೈ ಬೆರಳು ಮುರಿದಿದೆ. ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾರಣ ಸಿದ್ದಪ್ಪನವರ ಕಾಲಿಗೆ ತೀವ್ರತರನಾದ ಗಾಯಗಳಾಗಿವೆ.
ಡಿಚ್ಚಿ ಮುಬಾರಕ್ ನೆಹರು ಗೇಟ್ ನಿವಾಸಿಯಾಗಿದ್ದು ಈತ ಡಕಾಯಿತಿ ಮಾಡಲು ಹೊಂಚು ಹಾಕುತ್ತಿದ್ದ ಆರೋಪದ ಮೇರೆಗೆ ಪಿಎಸ್ಐಗಳಾದ ಸಿದ್ದಪ್ಪ ಎಂ, ನ್ಯೂಟೌನ್ ಪಿಎಸ್ಐ ರಮೇಶ್, ಪೇಪರ್ ಟೌನ್ ಪಿಎಸ್ಐ ಕೃಷ್ಣಕುಮಾರ್ ಮಾನೆ ಹಾಗೂ ಸಿಬ್ಬಂದಿಗಳಾದ ವೆಂಕಟೇಶ್, ಆದರ್ಶ, ಮಂಜುನಾಥ್, ಚಿನ್ನ ನಾಯ್ಕ, ಸುನೀಲ್ ಕಾಂತರಾಜ್, ನಾಗರಾಜ್ ತೇಜ್ ಕುಮಾರ್ ಇವರ ವಿಶೇಷ ತಂಡ ರಚಿಸಿಈ ಕಾರ್ಯಾಚರಣೆ ನಡೆಸಲಾಗಿದೆ.
ಕಾದು ನೋಡಬೇಕಿದೆ
ನಿನ್ನೆ ತಾನೆ ಬಸವನಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2024 ನೇ ಸಾಲಿನ ಆಗಸ್ಟ್ ನಲ್ಲಿ ಅಂದರ್ ಆಗಿದ್ದ ಡಿಚ್ಚಿ ಮುಬಾರಕ್ ನಿನ್ನೆ ಬೆಳಿಗ್ಗೆ ಶಿವಮೊಗ್ಗದ ಕಾರಾಗೃಹದಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾಗಿ ಬರುತ್ತಿದ್ದಂತೆ ಡಕಾಯಿತಿ ಕೇಸ್ ನಲ್ಲಿ ಮತ್ತೆ ಅಂದರ್ ಆಗಲಿದ್ದಾನೆ. ಇದರಿಂದ ನೂತನ ಎಸ್ಪಿ ಆಗಿ ಬಂದ ನಿಖಿಲ್ ಬಿ ಅವರ ಮೊದಲ ಎನ್ ಕೌಂಟರ್ ಪ್ರಕರಣವಾಗಿದೆ. ಈ ಹಿಂದಿನ ಎಸ್ಪಿ ಮಿಥುನ್ ಕುಮಾರ್ ಸಹ ಇಂತಹ ಕ್ರಿಮಿನಲ್ ಗಳಿಗೆ ಕಾಲಿಗೆ ಗುಂಡೇಟು ಹೊಡೆದೆ ಬುದ್ದಿಕಲಿಸಿದ್ದು ಉಂಟು.
ಈ ಮಿಥುನ್ ಕುಮಾರ್ ಅವರ ಎನ್ ಕೌಂಟರ್ ಗೆ ಅನೇಕ ಪತ್ರಿಕೆಗಳು ಆಗ ಆಕ್ಷೇಪಿಸಿದ್ದವು. ಮಿಥುನ್ ಕುಮಾರ್ ರೌಡಿಗಳ ಕಾಲಿಗೆ ಗುಂಡೇಟು ಹೊಡೆದೆ ಕಾನೂನು ಸುವ್ಯವಸ್ಥೆ ಕಾಪಾಡಲಿದ್ದಾರಾ ಎಂಬ ಆಕ್ಷೇಪಗಳು ಕೇಳಿ ಬಂದಿದ್ದವು. ಅವರ ಮೂರು ವರೆ ವರ್ಷದ ಅವಧಿಯಲ್ಲಿ 35-40 ಜನ ರೌಡಿಗಳ ಕಾಲಿಗೆ ಗುಂಡು ಹೊಡೆದಿರಬಹುದು. ನೂತನ ಎಸ್ಪಿ ನಿಖಿಲ್ ಸಹ ಅದೇ ಮಾರ್ಗವನ್ನ ಹಿಡಿಯಲಿದ್ದಾರಾ ಕಾದು ನೋಡಬೇಕಿದೆ.
Dichi was shot in the leg in a robbery case
