ಸಂಕೇತ್ ಬ್ಯಾನರ್ ಹಿಡಿದು ಬಂದು ಅಡಿಷನಲ್ ಎಸ್ಪಿಗೆ ಮನವಿ ಸಲ್ಲಿಸಿದ ಸ್ಥಳೀಯರು-Locals came holding Sanket banners and submitted a petition to the Additional SP.

 SUDDILIVE || SHIVAMOGGA

ಸಂಕೇತ್ ಬ್ಯಾನರ್ ಹಿಡಿದು ಬಂದು ಅಡಿಷನಲ್ ಎಸ್ಪಿಗೆ ಮನವಿ ಸಲ್ಲಿಸಿದ ಸ್ಥಳೀಯರು-Locals came holding Sanket banners and submitted a petition to the Additional SP

ಗಾಂಜಾ, ಸಾರಾಯಿ  ಮೊದಲಾದ  ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್ ಹಾಕುವಂತೆ ಹಾಗೂ ಬಾಲಕ ಸಂಕೇತ್ ಹತ್ಯೆ ಖಂಡಿಸಿ ಸ್ಥಳೀಯರು ಬಾಲಕನ ಭಾವಚಿತ್ರವಿರುವ ಬ್ಯಾನರ್ ಹಿಡಿದು ಮುಂಬತ್ತಿ ಮೆರವಣಿಗೆ ನಡೆಸಿ ಅಡಿಷನಲ್ ಎಸ್ಪಿ ಕಾರ್ಯಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.



ಸೂಳೆಬೈಲಿನಲ್ಲಿ ಎರಡುದಿನಗಳ ಹಿಂದೆ ಸಂಕೇತ್ ಎಂಬ ಅಪ್ರಾಪ್ತ ಬಾಲಕನ ಮೇಲೆ ಏಳು ಜನ ಅಪ್ರಾಪ್ತರು ಹತ್ಯೆ ನಡೆಸಿದ್ದರು. ಈ ಹತ್ಯೆಗೆ ಸೂಳೆಬೈಲಿನಲ್ಲಿ ತಲೆ ಎತ್ತಿರುವ ಸಣ್ಣ ಸಣ್ಣ ಮದ್ಯ ಮಾರಾಟ ಅಂಗಡಿಗಳು ಹಾಗೂ ಗಾಂಜಾ ಮಾರಾಟ ಮಾಡುವ ತಂಡವೇ ಸೂಳೆಬೈಲಿನಲ್ಲಿ ಕಾರಗಯೋನ್ಮುಖವಾಗಿದೆ. ಇದಕ್ಕೆ ಬ್ರೇಕ್ ಹಾಕಬೇಕಿದೆ ಇದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಗಾಂಜಾ ಮತ್ತು ಸಣ್ಣಪುಟ್ಟ ಮದ್ಯದಂಗಡಿಯಿಂದ ಯುವಕರು ಮತ್ತಿತರರು ವ್ಯಸನಿಗಳಾಗುತ್ತಿದ್ದಾರೆ. ಹಾಗಾಗಿ ಇಂತಹ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆ ಮಟ್ಟಹಾಕಿ ಸೂಳೆ ಬೈಲನ್ನ ಮಾದರಿ ಬಡಾವಣೆಯನ್ನಾಗಿ ಮಾಡುವಂತೆ ಹಿಂದೂ, ಮುಸ್ಲೀಂ ಸೇರಿದಂತೆ, ಸಣ್ಣ ಮಕ್ಕಳು ಒಟ್ಟಾಗಿ ಮುಂಬತ್ತಿ ಹಿಡಿದು ಪ್ರತಿಭಟನ ಮೆರವಣಿಗೆ ನಡೆಸಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದೆ. 

Locals came holding Sanket banners and submitted a petition to the Additional SP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close