ಶಿರಾಳಕೊಪ್ಪ-ಮನಕಳ್ಳತನದ ಇಬ್ಬರು ಆರೋಪಿಗಳ ಬಂಧನ-Two accused in house burglery case arrested

 SUDDILIVE || SHIRALKOPPA

ಶಿರಾಳಕೊಪ್ಪ-ಮನಕಳ್ಳತನದ ಇಬ್ಬರು ಆರೋಪಿಗಳ ಬಂಧನ-Two accused in house burglery case arrested 

House, burglary




ಜನವರಿ 26ರಂದು  ಶಿಕಾರಿಪುರ ತಾಲೂಕು, ಶಿರಾಳಕೊಪ್ಪ ಟೌನ್ ಪಂಪ್ ಹೌಸ್ ನಂ. 6ನೇ ತಿರುವಿನಲ್ಲಿ ರಿಯಾಜ್ ಅಹಮದ್ ಅವರ ಮನೆಯಲ್ಲಿ  ಮನೆ ಕಳ್ಳತನ ಪ್ರಕರಣ ದಾಖಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶಿರಳಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ಜನವರಿ 26ರಂದು ಶಿರಳಕೊಪ್ಪದಲ್ಲಿರುವ ನತಡಗಣಿ ಗೇಟ್ ನ ಬಳಿ ಉರುಸ್ ಕಾರ್ಯಕ್ರಮ ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ರಿಯಾಜ್ ಅಹ್ಮದ್ ಅವರು ತನ್ನ ಹೆಂಡತಿ ಮಕ್ಕಳನ್ನು ಹಾಗೂ ಸಹೋದರ ಆತನ ಹೆಂಡತಿ ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು. ರಾತ್ರಿ 9:30 ಸಮಯದಲ್ಲಿ ಮನೆಯಿಂದ ಹೊರ ಹೋದ ಕುಟುಂಬ 10:45 ಅಷ್ಟೊತ್ತಿಗೆ ವಾಪಸ್ ಆಗಿದ್ದರು. 

ಮನೆಗೆ ಬಂದು ನೋಡಿದಾಗ ಮನೆಯ ಹಿಂಭಾಗದ ಗೋಡೆಯ ಬಳಿ ಬೀರುಗಳ ಬೀಗ ಮುರಿದು ಅದರೊಳಗಿದ್ದ ಏಳೂವರೆ ಲಕ್ಷ ಮೌಲ್ಯದ 93 ಗ್ರಾಂ ತೂಕದ ಬಂಗಾರ ದ ಆಭರಣಗಳು 150 ಗ್ರಾಂ ಬೆಳ್ಳಿ 45,000 ನಗದನ್ನು ಕದ್ದುಕೊಂಡು ಹೋಗಿದ್ದರು.

ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆ ಕಾರಗಯಚರಣೆಗಾಗಿ ಎಸ್ ಪಿ ನಿಖಿಲ್, ಅಡಿಷನಲ್ ಎಸ್ ಪಿ, ಶಿಕಾರಿಪುರ ಉಪ ವಿಭಾಗ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ್ ಎಂ ಪಾಟೀಲ್, ಪಿಎಸ್ಐ ಪ್ರಶಾಂತ್ ಕುಮಾರ್ ಸಿಬ್ಬಂದಿಗಳಾದ ಸಂತೋಷ ಆರ್ ಸಲ್ಮಾನ್ ಖಾನ್ ಆಜಿ ರಾಕೇಶ್ ಜಿ ಆದರ್ಶ ಇಂದ್ರೇಶ್ ಗುರುರಾಜ್ ಅವರನ್ನು ಒಳಗೊಂಡ  ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಕ ತಂಡವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರು. 

ಶಿರಳಕೊಪ್ಪ ಟೌನ್ ನಿವಾಸಿ ರೆಹಮಾನ್ 25 ಆರ್ಷಿಯಲ್ ಅಹಮದ್ 19 ವರ್ಷ ಇವರುಗಳನ್ನು ವಶಕ್ಕೆ ಪಡೆದು ಪಡೆಯಲಾಗಿದೆ ಪ್ರಕರಣವನ್ನು ಆರೋಪಿಗಳಿಬ್ಬರೂ ಒಪ್ಪಿಕೊಂಡಿದ್ದು,  ಅವರಿಂದ 93 ಗ್ರಾಂ ತೂಕದ ಬಂಗಾರ ದ ಆಭರಣಗಳು 150 ಗ್ರಾಂ ಬೆಳ್ಳಿ ಆಭರಣಗಳು ವರ್ಷಕ್ಕೆ ಪಡೆಯಲಾಗಿದೆ.

Two accused in house burglery case arrested 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close