SUDDILIVE || SHIKARIPURA
ನಾಯಿಗಳು ಅಟ್ಟಾಡಿಸಿದ ಚಿರತೆ ಸಾವು- Leopard killed by dogs
ನಾಯಿಗಳ ಹಾವಳಿಗೆ ಚಿರತೆ ಬಲಿಯಾಗಿದೆ. ನಿತ್ರಾಣಗೊಂಡಿದ್ದ ಚಿರತೆಯನ್ನ ನಾಯಿಗಳೆ ಅಟ್ಟಾಡಿಸಿದ ಪರಿಣಾಮ ಚಿರತೆ ಸಾವುಕಂಡಿದೆ.
ಶಿಕಾರಿಪುರ ತಾಲೂಕು ದಿಂಡದಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಚಿರತೆ ಹಲವು ದಿನಗಳಿಂದ ಊರ ಬದಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ. ಎರಡೂವರೆ ವರ್ಷ ಹೆಣ್ಣು ಚಿರತೆ ನಾಯಿಗಳ ದಾಳಿಗೆ ಜೀವತ್ತೆತ್ತಿದೆ.
ತಾಯಿಯಿಂದ ಬೇರ್ಪಟ್ಟು ಆರೇಳು ತಿಂಗಳು ಕಳೆದಿವೆ. ಹೊಟ್ಟೆ ಹಸಿದು ನಿತ್ರಾಣಗೊಂಡಿದ್ದ ಚಿರತೆ ನಾಯಿ ಬೇಟೆಗೆ ಬಲಿಯಾಗಿದೆ. ತಜ್ಞಾರ ಪ್ರಕಾರ ತಾಯಿಯಿಂದ ಬೇರ್ಪಟ್ಟ ಚಿರತೆ ಈ ವಯಸ್ಸಿನಲ್ಲೂ ಬೇಟೆ ಸರಿಯಾಗಿ ಬಾರದ ಪ್ರಾಯ ವಾಗಿರುತ್ತದೆ ಎಂದು ಊಹಿಸಲಾಗುತ್ತಿದೆ,
ಊರಿನ ನಾಯಿಗಳಿಂದ ಸೋಂಕು ತಗುಲಿರಲೂ ಬಹುದು ಎಂದು ಅಂದಾಜಿಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿರುವ ವನ್ಯ ಜೀವಿ ವೈದ್ಯ ಮುರುಳಿ ಮನೋಹರ್ಚಿರತೆ ಸ್ಯಾಂಪಲ್ ಸಹ ಕಲೆಲ್ಟ್ ಮಾಡಿದ್ದಾರೆ. ದಿಂಡದಹಳ್ಳಿಯಲ್ಲಿ ಚಿರತೆಗಾಗಿ ಬೋನ್ ಸಹ ಇಡಲಾಗಿತ್ತು.
Leopard killed by dogs
