ಬಿಂದು ಸಿರ ವಿರುದ್ಧ ರಾಷ್ಟ್ರಪ್ರೇಮಿ ವಕೀಲರ ಬಳಗ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ದೂರು-Patriotic Lawyers Association files complaint against Bindu Sira at Shivamogga Police Station

 SUDDILIVE || SHIVAMOGGA

ಬಿಂದು ಸಿರ ವಿರುದ್ಧ ರಾಷ್ಟ್ರಪ್ರೇಮಿ ವಕೀಲರ ಬಳಗ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ದೂರು-Patriotic Lawyers Association files complaint against Bindu Sira at Shivamogga Police Station

Patroitic, lawyer





ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಗೌರವಾನ್ವಿತ ಪ್ರಧಾನಮಂತ್ರಿಯವರನ್ನು ಅವಹೇಳನಕಾರಿಯಾಗಿ ಬಿಂಬಿಸುವ ರೀತಿಯಲ್ಲಿ, ವ್ಯಂಗವಾಗಿ ಕಾಣುವಂತೆ ಪ್ರಧಾನಿಯವರ ಅರೆಬೆತ್ತಲೆ ಚಿತ್ರಗಳನ್ನು ಹಂಚಿಕೊಂಡು, ಸುಳ್ಳು ಸುದ್ದಿ ಹರಡಿಸುತ್ತಿರುವ ʼʼಬಿಂದು ಸಿರ ʼʼ ಅವರ ವಿರುದ್ಧ ರಾಷ್ಟ್ರಪ್ರೇಮಿ ವಕೀಲರ ಬಳಗ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. 

ಫೆ 24 ರಂದು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಬಿಂದು ಸಿರ ಎಂಬುವರು ದೇಶದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಅರೆಬೆತ್ತಲೆಯಲ್ಲಿ ನಿಲ್ಲಿಸಿ ಅಶ್ಲೀಲ ಹಾಗೂ ವಿಕೃತವಾಗಿ ಕಾಣುವಂತೆ ಚಿತ್ರಿಸಿ ಅವರ ವಿರುದ್ಧ ಸುಳ್ಳು ಸುದ್ದಿಯನ್ನು ಹರಡಿಸಿದ್ದನ್ನ ಖಂಡಿಸಿ ಇಂದು ವಕೀಲ ಸುರೇಶ್ ಬಾಬು ನೇತೃತ್ವದಲ್ಲಿ ಬಳಗ ಜಯನಗರ ಪಿಐ ರವಿಸಂಗಣ್ಣಗೌಡರಿಗೆ ಮನವಿ ಸಲ್ಲಿಸಿದರು.  

ಕ್ಷುಲ್ಲಕ ಕಾರಣಕ್ಕೆ ಈ ದೇಶದ ಪ್ರಧಾನ ಮಂತ್ರಿಗಳನ್ನು ಅತ್ಯಂತ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. EPSTINE FILESp ಎಂಬ ಸುಳ್ಳು ಸುದ್ದಿಯನ್ನು ಬಳಸಿ ಸಾರ್ವಜನಿಕರಲ್ಲಿ ಗೊಂದಲ ಮತ್ತು ದ್ವೇಷದ ಭಾವನೆಯನ್ನು  ಬಿತ್ತಿರುತ್ತಾರೆ. ಟೀಕೆ ಮಾಡುವ ಬರದಲ್ಲಿ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರನ್ನು ಈ ರೀತಿ ಅಶ್ಲೀಲ ಮತ್ತು ಅವಹೇಳನಕಾರಿಯಾಗಿ ಚಿತ್ರಿಸುವುದು ಈ ದೇಶದ ಸಂವಿಧಾನದಲ್ಲಿ ನಂಬಿಕೆ ಇಟ್ಟ ಪ್ರತಿಯೊಬ್ಬ ಭಾರತೀಯನಿಗೂ ಅತೀವವಾಗಿ ನೋವು ಉಂಟು ಮಾಡಿದೆ, 

ಉನ್ನತ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಪ್ರಧಾನಮಂತ್ರಿಯವರಿಗೆ ಮಾಡಿದ ಅವಮಾನ ಈ ದೇಶದ ಜನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಮತ್ತು ಜನರ ಭಾವನೆಗಳ ಮೇಲೆ ರಾಶಿ ನೋವು ಉಂಟು ಮಾಡಿರುತ್ತದೆ,  ಅಲ್ಲದೆ ಈ ವಿಚಾರವು ಉದ್ದೇಶ ಪೂರ್ವಕವಾಗಿ ಸುಳ್ಳು ಸುದ್ಧಿಯನ್ನು ಸೃಷ್ಠಿಮಾಡಲೇಂದು, ದ್ವೇಷ ಭಾವನೆ ಬಿತ್ತಲೇಂದು, ಹಾಗೂ ದೇಶದ ಪ್ರಧಾನಿಗಳಿಗೆ ಅವಮಾನ ಮಾಡಲೇಂದೇ ಈ ಕೃತ್ಯಮಾಡಿರುವ  ಬಿಂದು ಸಿರ ಅವರ ವಿರುದ್ಧ ಕಟ್ಟುನಿಟ್ಟಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

Patriotic Lawyers Association files complaint against Bindu Sira at Shivamogga Police Station

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close