ಸಾಲ ಮತ್ತು ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ-ಶಿವಮೊಗ್ಗ ಸಂಸದ-State government should issue a white paper on debt and development - Shivamogga MP

 SUDDILIVE || SHIVAMOGGA

ಸಾಲ ಮತ್ತು ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ-ಶಿವಮೊಗ್ಗ ಸಂಸದ-State government should issue a white paper on debt and development - Shivamogga MP    

Shivamogga, Mp


ಕಾಂಗ್ರೆಸ್ ಸರ್ಕಾರ 1000 ದಿನಗಳ ಸಾಧನೆ ಸಮಾವೇಶವನ್ನ ಹಾವೇರಿಯಲ್ಲಿ ನಡೆಸಲಾಗುತ್ತಿದೆ. ಇದು ಸಾಧನೆ, ಅಲ್ಲ, ವಂಚನೆ ಆರ್ಥಿಕ ಮತ್ತು ಆಡಳಿತದ ದಿವಾಳಿತನ ಎಂದು ಸಂಸದರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಅಭಿವೃದ್ಧಿ ನಿಂತುಹೋಗಿದೆ ಗುತ್ತಿಗೆದಾರರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಗ್ಯಾರೆಂಟಿಗೆ ಹಣ ಒದಗಿಸಲು ಆಗ್ತಾಯಿಲ್ಲ. ಸಾಧನ ಸಮವೇಶ ಜನರನ್ನ‌ ಮುಜುಗರ ಉಂಟುಮಾಡುವ ಸಮಾವೇಶ ಎಂದು ವಾಗ್ದಾಳಿ ನಡೆಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಗತ್ಯವಸ್ತುಗಳ ಏರಿಕೆಯಾಗುತ್ತಿದ್ದು, ಇದರ ನಡುವೆ ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿದೆ. ಅಬಕಾರಿ, ಮೂಡ, ವಾಲ್ಮೀಕಿ ನಿಗಮದಲ್ಲಿ ಹಗರಣಗಳು ಓಲೈಕೆ ರಾಜಕಾರಣಕ್ಕೆ ಸೀಮಿತಗೊಳಿಸಿ ಕಾಂಗ್ರೆಸ್ ಆಡಳಿತ ನಡೆಸುತ್ಯಿದೆ. ಗೃಹಲಕ್ಷ್ಮೀ ಗ್ಯಾರೆಂಟಿಗೆ 5200 ಕೋಟಿ ಹಣ ಕೊಡಲು ಸಾಧ್ಯವಾಗದೆ ಬೆಳಗಾವಿ ವಿಧಾನ ಸಭೆಯಲ್ಲಿ ಉತ್ತರ ಕೊಡಲಾಗಿಲ್ಲ. 

ಯುವನಿಧಿಯಲ್ಲಿ 60% ಮಾತ್ರ ಹಣ ಒದಗಿಸಲಾಗುತ್ತಿದೆ.  3.79 ಲಕ್ಷ ಜನ ಅರ್ಜಿ 2.90 ಲಕ್ಷ ಜನರಿಗೆ ಹಣ ನೀಡಲಾಗುತ್ತಿದೆ. ಶಕ್ತಿ ಯೋಜನೆಯಲ್ಲಿ 4700 ಕೋಟಿ ಹಣ ಬಾಕಿ ಉಳಿದಿದೆ. ಗ್ರಾಮೀಣ ಪ್ರದೇಶದ 1200 ರೂಟ್ ಗಳು ನಿಲ್ಲಿಸಲು ಪ್ರಯತ್ನ ನಡೆದಿದೆ. ಈ ಸಾರಿಗೆಯನ್ನ  ನಗರಕ್ಕೆ ಡೈವರ್ಟ್ ಮಾಡಲಾಗುತ್ತಿದೆ. ಗೃಹಜ್ಯೋತಿಯಲ್ಲಿ ಕೈಗಾರಿಕೆಗೆ ಸಿಕ್ಕಪಟ್ಟೆ ವಿದ್ಯುತ್ ಏರಿಸಲಾಯಿತು. ಅನ್ನಭಾಗ್ಯದ ವ್ಯತ್ಯಸದ ಹಣ 657 ಕೋಟಿ ಹಣ ಗ್ರಾಹಕರಿಗೆ ಜಮಾವಾಗಿಲ್ಲ. ಇದು ಸರ್ಕಾರದ ಸಾಧನೆಯಾಗಿದೆ ಎಂದು ಆರೋಪಿಸಿದರು. 

ದಲಿತರ ಹಣಕ್ಕೆ ಖನ್ನಹಾಕಲಾಗಿದೆ. ಸಾಮಾಜಿಕ ಹೆಸರಿನಲ್ಲಿ ದೋಖಮಾಡಲಾಗುತ್ತಿದೆ. ಮೂರು ವರ್ಷ 2819 ರೈತರ ಆಯ್ಮಹತ್ಯೆ300 ಜನ ರೈತರ ಆತ್ಮಹತ್ಯೆ ಹಾವೇರಿಯಲ್ಲೇ ಆಗಿದೆ. ಯಾವ ಮುಖ ಇಟ್ಟುಕೊಂಡು ಹಾವೇರಿಯಲ್ಲಿ  ಸಮಾವೇಶ ನಡೆಯುಯ್ತಿದೆ ಎಂದು ದೂರಿದರು. ಭ್ರಷ್ಠಾಚಾರದಲ್ಲಿ ಸರ್ಕಾರ ಮುಂದಾಗಿದೆ. ಗುತ್ತಿಗೆದಾರರಿಗೆ 37 ಸಾವಿರ ಕೋಟಿ ಹಣ ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿದೆ. 

ಸಿಎನ್ ಜಿ ವರದಿ ಪ್ರಕಾರ ರಾಜ್ಯದ ಸಾಲದ ಮೊತ್ತ 7.64 ಲಕ್ಷ  ಕೋಟಿ ದಾಟಿದೆ. ಜೈಲುಗಳು ರೆಸಾರ್ಟ್ ಆಗಿದೆ. ಬಳ್ಳಾರಿ ಶಾಸಕರ ಗೂಂಡಾಗಿರಿ. ಡ್ರಗ್ಸ್ ಗೆ ಕರ್ನಾಟಕ ರೆಡ್ ಕಾರ್ಪೆಟ್ ಹಾಕಲಾಗಿದೆ. ಮರಳು ತಡೆಯುವ ಅಧಿಕಾರಿಗಳ ಮೇಲೆ ಲಾರಿ ಹತ್ತಿಸುವ ಪ್ರಯತ್ನ. ಮಹಿಳೆಯರಿಗೆ ರಕ್ಷಣೆಯಿಲ್ಲ. ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವಂತಹ ಕೆಲಸ ಮಾಡಲಾಗಿದೆ. ದ್ವೇಷ ಭಾಷಣದ ಮುಖಾಂತರ ವಿಪಕ್ಷಗಳ ಮತ್ತು ಮಾಧ್ಯಮಗಳ‌ಬಾಯಿಕಟ್ಟಲು ಯತ್ನ ನಡೆದಿದೆ. 

ಸಾಲ ಮತ್ತು ಅಭಿವೃದ್ಧಿ ವೆಚ್ಚದಲ್ಲಿ ಸರ್ಕಾರ ಶ್ವೇತ ಪತ್ರ ಬಿಡುಗಡೆ ಮಾಡಲು ಸಂಸದರು ಆರೋಪಿಸಿದರು. ಶಾಸಕರ ವಿದೇಶ ಪ್ರವಾಸ ಅವರ ಹಣದಲ್ಲಿ ಹೋಗುತ್ತಿದ್ದಾರೆ. 

ಟನಲ್ ಗೆ ವರದಿ ಏನು ಬರುತ್ತೆ ನೋಡೋಣ

4 ಲೇನ್ ವೈಡಿಂಗ್ ಮತ್ತು ಆಗುಂಬೆ ಟನಲ್ ನಲ್ಲಿ ನಿರ್ಮಾಣಕ್ಕೆ ಡಿಪಿಆರ್ ನಿರ್ಮಾಣಕ್ಕೆ 2.2 ಕೋಟಿ ಬಿಡುಗಡೆ ಮಾಡಿ 6 ತಿಂಗಳಲ್ಲಿ ವರದಿ ನೀಡಲು ಹೇಳಿದೆ. ಹಿಂದಿನ ಟೆಕ್ನಾಲಜಿಯನ್ನೇ ಬಳಸಿ ಟನಲ್ ನಿರ್ಮಿಸಲಾಗಿದೆ. ಪರಿಸರಕ್ಕೆ ಹಾನಿಯಾಗದಂತೆ ಟನಲ್ ನಿರ್ಮಿಸಲು ಯೋಚಿಸಲಾಗುತ್ತಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close