SUDDILIVE || SHIVAMOGGA
ಮಾದಕ ವಸ್ತು ನಿಯಂತ್ರಣಕ್ಕೆ ಎಸ್ಪಿ ನೇತೃತ್ವದಲ್ಲಿ ಮಹತ್ವದ ಸಭೆ- SP holds important meeting to control drugs
ಶಿವಮೊಗ್ಗ ಜಿಲ್ಲೆಯಲ್ಲಿ ಮಾದಕ ವಸ್ತು / ಗಾಂಜಾ ಹಾವಳಿಯನ್ನು ನಿರ್ಮೂಲನೆ ಕುರಿತು ಎಸ್ಪಿ ನಿಖಿಲ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನ ತೆಗೆದುಕೊಳ್ಳಲಾಗಿದೆ.
ಮಿಥುನ್ ಕುಮಾರ್ ಜಿಕೆ ಅವರು ಎಸ್ಪಿಯಾಗಿದ್ದಾಗ ಇದೇ ಮಾದಕ ವಸ್ತುಗಳ ಹಾವಳಿಯಿಂದ ಅಮಾಯಕರ ಮೇಲೆ ಹಲ್ಲೆ ನಡೆದು ಶಾಸಕ ಚೆನ್ನಿ ಪೊಲೀಸರ ವಿರುದ್ಧವೇ ಗೃಹಸಚಿವರಿಗೆ ದೂರು ಹೊತ್ತು ಹೋಗಿದ್ದರು. ಈ ದೂರಿನ ಆಧಾರದ ಮೇರೆಗೆ ಗಾಂಜಾ ಹಾವಳಿ ಕುರಿತು ಐಜಿಪಿ ರವಿಕಾಂತೇಗೌಡರು ಖುದ್ದು ಶಿವಮೊಗ್ಗಕ್ಕೆ ಬಂದಿದ್ದರು. ಶಾಸಕರು ಮತ್ತು ಎಸ್ಪಿ ಅವರ ಸಮ್ಮುಖದಲ್ಲಿ ಸಭೆ ನಡೆಸಿದ್ದರು.
ಇದಾದ ಬಳಿಕ ಮಿಥುನ್ ಅವರ ವರ್ಗವಾಗಿ ನೂತನ ಎಸ್ಪಿ ನಿಖಿಲ್ ಅವರು ಬಂದಿದ್ದಾರೆ. ಮೊನ್ನೆ ಮೃತನಾದ ಅಪ್ರಾಪ್ತ ಬಾಲಕನ ಸಾವಿಗೂ ಈ ಗಾಂಜಾ ಸೇವಿಸಿದ ಮಕ್ಕಳಿಂದ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಬಾಲಕನ ಹತ್ಯೆಯಾದ ಮೂರು ದಿನಗಳ ನಂತರ ಎಸ್ಪಿ ಅವರ ಈ ಸಭೆ ಮಹತ್ವ ಪಡೆದುಕೊಂಡಿದೆ.
ಈ ಸಭೆಯಲ್ಲಿ ಮೂರು ನಡುವೆ ರ್ಷಯಗಳನ್ನ ಮಾಡಲಾಗಿದೆ. ನಗರದಲ್ಲಿ ಮೊದಲು ಶಾಲೆಯಿಂದ ಡ್ರಾಪ್ ಔಟ್ ಆದ ಮಕ್ಕಳನ್ನ ಪುನಃ ಶಾಲೆಗೆ ತರುವುದು. ಇದಕ್ಕಾಗಿ ಸಧ್ಯಕ್ಕೆ 10 ಸ್ಥಳಗಳನ್ನ ಗುರುತಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಗೊತ್ತಾಗಿಲ್ಲ. ಆದರೆ ಗುರುತಿಸಲಾದ 10 ಬಡಾವಣೆಗಳಿಗೆ ಶಿಕ್ಷಣ ಸಂಸ್ಥೆಗಳ ಅಧಿಕಾರಿಗಳು ಹೋಗಿ ಮಕ್ಕಳನ್ನ ಶಾಲೆಗೆ ಕರೆತರುವುದರ ಬಗ್ಗೆ ಚರ್ಚೆ ನಡೆದಿದೆ.
ಇದಕ್ಕಾಗಿ ಮಹಾನಗರ ಪಾಲಿಕೆ, ಶಿಕ್ಷಣ ಸಂಸ್ಥೆ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಗಳ ನಡುವೆ ಮಾತುಕತೆ ನಡೆಸಿ ಡ್ರಾಪ್ ಔಟ್ ಆದ ಮಕ್ಕಳನ್ನ ಶಾಲೆಗೆ ಕರೆತರುವ ಪ್ರಯತ್ನ ನಡೆಯಲಿದೆ. ಇದಾದ ನಂತರ ಡ್ರಗ್ ಮತ್ತು ಸಿರಪ್ ಗಳ ಮೂಲಕ ನಶೆ ಪಡೆಯುವ ಬಗ್ಗೆಯೂ ಮಾತುಕೇಳಿ ಬರುತ್ತಿದ್ದು, ಡ್ರಗ್ ಕಂಟ್ರೋಲರ್ ಗಳಿಗೆ ಎಲ್ಲೆಲ್ಲಿ ನಿಗದಿತ ಔಷಧಗಳ ಮಾರಾಟದ ಬಗ್ಗೆ ಮಾಹಿತಿ ಸಂಗ್ರಹಿಸಲು ಸಭೆಯಲ್ಲಿ ಸೂಚಿಸಲಾಗಿದೆ.
ಇನ್ನೊಂದು ಕಡೆ ಸರ್ಕಾರಿ ಶಾಲೆಗಳಲ್ಲಿ ಪೋಷಕರು, ಶಿಕ್ಷಕರ ಸಭೆ ನಡೆಸುವ ಬಗ್ಗೆ ಚರ್ಚಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪೋಷಕರ ಮತ್ತು ಶಿಕ್ಷಕರ ಸಭೆ ನಡೆಯದೆ ಸುಮಾರು ವರ್ಷಗಳೆ ಕಳೆತುತ್ತಿದ್ದು ಇನ್ನುಮುಂದೆ ಈ ಸಭೆ ಕಡ್ಡಾಯಗೊಳಿಸಲಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಸಲಾಗುವ N-CORD ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ, ಮೇಘ ಅಘರ್ವಾಲ್, IPS (Pro) ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರುಗಳು ಸದರಿ ಸಭೆಯಲ್ಲಿ ಭಾಗವಹಿಸಿದ್ದರು.
SP holds important meeting to control drugs
