ಸೂಳೆಬೈಲಿನಲ್ಲಿ ಸ್ಥಳೀಯರ ಪ್ರತಿಭಟನೆ- Locals protest in Sulebailu

 SUDDILIVE || SHIVAMOGGA

ಸೂಳೆಬೈಲಿನಲ್ಲಿ ಸ್ಥಳೀಯರ ಪ್ರತಿಭಟನೆ- Locals protest in Sulebailu      

Locals, protest


ನಿನ್ನೆ ಊರುಗಡೂರಿನಲ್ಲಿ ಹತ್ಯೆಯಾದ ಬಾಲಕನ ಶವವನ್ನ ಇಟ್ಟುಕೊಂಡು ಸೂಕ್ತ ಪರಿಹಾರ ಮತ್ತು ಹಿಂದೂಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. 

ನಿನ್ನೆ ಸಂಕೇತ್ ಎಂಬ ಎಸ್ ಎಸ್ ಎಲ್ ಸಿ ಓದುತ್ತಿದ್ದ ಬಾಲಕನ ಮೇಲೆ ಆತನ ಸಹಪಾಠಿಗಳೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಘಟನೆ ಇಂದು ಸೂಳೆಬೈಲಿನ ಪ್ರವೇಶ ದ್ವಾರದಲ್ಲೇ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. 

ಪ್ರತಿಭಟನ ಸ್ಥಳಕ್ಕೆ ಮಾಜಿ ಡಿಸಿಎಂ‌ ಈಶ್ವರಪ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಸ್ಪಿ ನಿಖಿಲ್ ಸಹ ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ. ಈ ಕುರಿತು ಸಿಇಒ ಹೇಮಂತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮೃತ ಬಾಲಕ ಚೆನ್ನಾಗಿ ಓದುತ್ತಿದ್ದು ಆತನ‌ಹತ್ಯೆಗೆ ದುಖವ್ಯಕ್ತಪಡಿಸಿದ್ದಾರೆ. 


ವಿಶೇಷ ತರಬೇತಿಯಿಂದ ಆತ ಸಾವನ್ನಪ್ಪಿಲ್ಲ. SSLCಯ ಬೋರ್ಡ್ ಎಕ್ಸಾಂ ನಡೆಯುತ್ತಿದೆ. ಇಂದು ಗಣಿತ ವಿಷಯದಲ್ಲಿ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆಗೆ ವಿಶೇಷ ತರಬೇತಿ ನಡೆಯುತ್ತಿದೆ. ಪೋಷಕರ ಅನುಮತಿ ಪಡೆದು ತರಗತಿ ನಡೆಯುತ್ತಿದೆ. ಸಂಜೆ 5-30 ರಿಂದ 8 ಗಂಟೆಯ ವರೆಗೆ ತರಬೇತಿ ನಡೆದಿದೆ. ಈ ಘಟನೆ ಬಗ್ಗೆ ಎಫ್ಐಆರ್ ಆಗಿ ತನಿಖೆ ನಡೆಸಲಾಗುತ್ತಿದೆ ಎಂದರು. 

ಈ ಬಗ್ಗೆ ಪರಿಹಾರ ನೀಡಲಾಗುತ್ತದಾ ಮೃತ ಬಾಲಕನ ಕುಂಟಬಕ್ಕೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿ ಪ್ರಭುಲಿಂಗ ಕವಳಕಟ್ಟಿ ಪ್ರಕರಣ ತನಿಖೆ ಹಂತದಲ್ಲಿದೆ. ತನಿಖೆ ನಂತರ ನಿರ್ಧರಿಸಲಾಗುವುದು ಎಂದರು. 

Locals protest in Sulebailu

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close