SUDDILIVE || BHADRAVATHI
ಬಾರಂದೂರಿನ ಬಳಿ ಚಾನೆಲ್ ಗೆ ಇಳಿದ ಇಟಿಯಸ್ ಕಾರು-Swift car falls into channel near Barandur
ಭದ್ರಾವತಿ ಹಾಗೂ ಬಾರಂದೂರಿನ ನಡುವೆ ಬರುವ ಚಾನೆಲ್ ವೊಂದಕ್ಕೆ ಇಟಿಯಸ್ ವಾಹನ ಉರುಳಿ ಬಿದ್ದಿದ್ದು, ಪ್ರಾಣಾಪಾಯದಿಂದ ಚಾಲಕ ಪಾರಾಗಿರುವ ಘಟನೆ ಇಂದು ಬೆಳಿಗ್ಗೆ ಸುಮಾರು 3 ಗಂಟೆಯ ವೇಳೆಗೆ ನಡೆದಿದೆ.
ಪರಿಚಯಸ್ಥರನ್ನ ಡ್ರಾಪ್ ಮಾಡಿ ತರೀಕೆರೆಯಿಂದ ಹೊರಟ ಕಾರು ಬಾರಂದೂರಿನ ಬಳಿ ಚಾನೆಲ್ ಗೆ ಇಳಿದಿದೆ. ಚಾಲಕ ಕರೀಮ್ ಒಬ್ಬರೆ ಕಾರು ಚಲಾಯಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಿಂದ ಅವರೆ ಎದ್ದು ಬಂದು ಭದ್ರಾವತಿ ಖಾಸಗಿ ಆಸ್ಪತ್ರೆಗೆ ತೋರಿಸಿಕೊಂಡಿದ್ದಾರೆ.
ಕರೀಮ್(39) ಭದ್ರಾವತಿಯ ಅನ್ವರ್ ಕಾಲೋನಿಯ ನಿವಾಸಿಯಾಗಿದ್ದಾರೆ. ಮತ್ತೊಬ್ಬರ ಬಳಿ ಚಾಲಕ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ನಿತ್ರಾಣದಿಂದಾಗಿ ಚಾಲನೆಯಲ್ಲಿ ತೊಂದರೆ ಉಂಟಾದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ.
Swift car falls into channel near Barandur
