SUDDILIVE || SHIKARIPURA
ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರುವುದೆ ನನ್ನ ಏಕೈಕ ಗುರಿ-ಬಿಎಸ್ ವೈ- My only goal is to bring BJP back to power in the state: BSY
ನನ್ನ ಏಕೈಕ ಗುರಿ ಏನೆಂದರೆ ಬಿಜೆಪಿಯನ್ನ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಜನ್ಮ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಪುನರುಚ್ಚರಿಸಿದ್ದಾರೆ.
ಅವರು ಶಿಕಾರಿಪುರದ ಕುಮಧ್ವತಿ ಕಾಲೇಜಿನ ಏಕಲವ್ಯ ಮೈದಾನದಲ್ಲಿ ತಮ್ಮ 84ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅಭಿನಂದನೆಯನ್ನ ಸ್ವೀಕರಿಸಿ ಮಾತನಾಡಿದರು.
ನಾನು ಕೊಟ್ಟ ಬಾಗ್ಯ ಲಕ್ಷ್ಮಿ, ರೈತರ ಬಜೆಟ್, ರೈತ ಗೌರವ ಸ್ವಾಭಿಮಾನದಿಂದ ಬದುಕಬೇಕಾದ ಯೋಜನೆಯಾಗಿವೆ. ಇಡಿ ರಾಜ್ಯದ ಸರ್ವಾಗಿಣ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನಮಾಡಿದ್ದೇನೆ. ನಾಡನ್ನ ಕಟ್ಟಲು ಮತ್ತೆ ಸಹಕಾರ ನೀಡಿದರೆ ರಾಜ್ಯದಲ್ಲಿ ಬಿಜೆಪಿಯ ಸರ್ಕಾರ ತಂದು ಭ್ರಷ್ಠ ಸರ್ಕಾರವನ್ನ ಕಿತ್ತು ಹಾಕಿ ಜನರು ಗೌರವದಿಂದ ಬದುಕುವ ವ್ಯವಸ್ಥೆ ಮಾಡುವೆ ಎಂದು ಕರೆ ನೀಡಿದರು.
ಕೆಲ ಊರುಗಳು, ಸ್ಥಳಗಳು ಕೆಲ ವ್ಯಕ್ತಿಗಳಿಂದ ಪ್ರಸಿದ್ದವಾಗಿವೆ. ರಾಜ್ಯದಲ್ಲಿ ಶಿಕಾರಿಪುರ ಯಡಿಯೂರಪ್ಪ ಸಿಎಂ ಆಗುವ ತನಕ ಕೆಲ ಭಾಗದಲ್ಲಿ ಗೊತ್ತಿರಲಿಲ್ಲ. ಯಡಿಯೂರಪ್ಪ ಅಧಿಕಾರ ಹಿಡಿದ ನಂತರ ಸ್ಥಳವೂ ಪ್ರಖ್ಯಾತ ಪಡೆಯಿತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು.
ಸಾವಿರ ಹುಣ್ಣಿಮೆ ಕಂಡವರು ಸಹಸ್ರ ಹುಣ್ಣಿಮೆ ಕಾರ್ಯಕ್ರಮ ನಡೆಸಿಕೊಳ್ಳುತ್ತಾರೆ. ಸ್ವಾಭಾವಿಕವಾಗಿ ಮುಪ್ಪಾಗಿದ್ದವರು ಸಾವಿರ ಹುಣ್ಣಿಮೆ ಕಂಡಿರುತ್ತಾರೆ. ಮುಪ್ಪಾದವನು ಆಕ್ಟಿವ್ ಆಗಿರಲು ಸಾಧ್ಯವಿಲ್ಲ. ಆಕ್ಟಿವ್ ಆಗಿ ಇದ್ದವರು ಮುಪ್ಪಾಗಲು ಸಾಧ್ಯವಿಲ್ಲ. ಯಡಿಯೂರಪ್ಪನವರು ಮುಪ್ಪಾಗಿದೆ ಎಂದು ಕೊಳ್ಳಲೇ ಇಲ್ಲ. ಹಾಗಾಗಿ ಅವರಿಗೆ 84 ವರ್ಷ ಆದರೂ ದಣಿವರಿಯದ ನಾಯಕರಾಗಿದ್ದಾರೆ ಎಂದರು.
ಯಡಿಯೂರಪ್ಪನವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆದರೂ ಛಲಬಿಡದ ನಾಯಕನಾಗಿ ಹೊರಹೊಮ್ಮಿದರು. ಹಗಲು ರಾತ್ರಿ ಧರಣಿ ಎಂಬ ಹೆಸರು ಬಂದಿದ್ದೆ ಯಡಿಯೂರಪ್ಪನವರಿಂದ. ತುರ್ತುಪರಿಸ್ಥಿಯಲ್ಲಿ ಜೈಲಿಗೆ ಹೋದರು. ಜನಸಂಘದಿಂದ ಬಿಜೆಪಿಗೆ ಬಂದರು ಸಣ್ಣದಾಗಿದ್ದ ಪಕ್ಷವನ್ನ ಸೈಕಲ್ ತುಳಿದು ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಗೆ ಪರ್ಯಾಯ ಪಕ್ಷವಾಗಿ ಬೆಳೆಸಿದರು ಎಂದು ಹಳೆಯ ಚಿತ್ರವನ್ನ ಬಿಚ್ಚಿಟ್ಟರು.
ಅಯೋದ್ಯ ರಾಮಜನ್ಮ ಭೂಮಿ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಬಿಎಸ್ ವೈ ಮತ್ತು ಅನಂತ ಕುಮಾರ್ ಧುಮಿಕಿದ ಕಾರಣ ಆ ಹೋರಾಟದ ಕಿಚ್ಚು ಸರ್ಕಾರದ ಕಣ್ಣು ತೆರೆಯಿಸಿತು. ಎಲ್ಲಿವರೆಗೂ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವುದಿಲ್ಲವೋ ಅಲ್ಲಿಯ ವರೆಗೆ ಹೋರಾಟ ನಿಲ್ಲಿಸದ ಯಡಿಯೂರಪ್ಪ ಕೋಷಿಷ್ಟರು ಹೌದು. ಆದರೆ ದ್ವೇಷಿಯಲ್ಲ. ಹೈದ್ರಬಾದ್ ಕರ್ನಾಟಕವನ್ನ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕವನ್ನ ಕಿತ್ತೂರು ಕರ್ನಾಟಕವನ್ನಾಗಿಸಿದವರು ಬಿಎಸ್ ವೈ ಎಂದರು.
ಅವರ ಕಳಕಳಿಯಿಂದ ಹೋರಾಟದಿಂದ ಬಿಜೆಪಿ ವಿಪಕ್ಷವಾಗಿ ಬೆಳೆದಿದೆ. ಆದರೆ ಮತ್ತೊಮ್ಮೆ ಬಿಎಸ್ ವೈ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಬಿಎಸ್ ವೈ 100 ವರ್ಷ ಬದುಕಿ ನಮಗೆ ಆಶೀರ್ವದಿಸಲಿ ಎಂದರು.
ಪುತ್ರ ಹಾಗೂ ಕ್ಷೇತ್ರದ ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ, ಯಡಿಯೂರಪ್ಪ ಐದು ದಶಕಗಳ ಸುಧೀರ್ಘ ಹೋರಾಟ ನಡೆಸಿ ಬಡವರು ರೈತರು, ಕೂಲಿ ಕಾರ್ಮಿಕರ ಧ್ವನಿಯಾಗಿ ಬೆಳೆದಿದ್ದಾರೆ. ಲಕ್ಷಾಂತರ ಜನರ ಆಶೀರ್ವಾದಿಂದ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ತಿಳಿಸಿದರು.
ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದವರು ಬಿಎಸ್ ವೈ ಮಾತ್ರ ಮತ್ತೆ ಯಾವ ಸಿಎಂ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಶಿಕಾರಿಪುರದಲ್ಲಿ 8 ಬಾರಿ ಶಾಸಕರನ್ನಾಗಿಸಿದ್ದೀರಿ. ರಾಜಕೀಯ ಜನ್ಮ ನೀಡಿದ ಈ ಕ್ಷೇತ್ರ ನನಗೂ ರಾಜಕೀಯ ಭವಿಷ್ಯ ನೀಡಿದೆ. ಹಾಗಾಗಿ ಬೆಂಗಳೂರನಲ್ಲಿ ಆಚರಿಸಬೇಕಿದ್ದ ಕಾರ್ಯಕ್ರಮವನ್ನ ಶಿಕಾರಿಪುರದಲ್ಲಿ ಆಚರಿಸಲಾಗಿದೆ ಎಂದರು.
