SUDDILIVE || SHIKARIPURA
ಮೇ ತಿಂಗಳಲ್ಲಿ ಯಡಿಯೂರಪ್ಪನವರಿಗೆ ಸನ್ಮಾನ ಕಾರ್ಯಕ್ರಮ-ಕಾರಜೋಳ- Yediyurappa to be felicitated in May - Karajola
ಮಾಜಿ ಸಿಎಂಯಡಿಯೂರಪ್ಪನವರ 84 ವರ್ಷದ ಹುಟ್ಟುಹಬ್ಬವನ್ನ ಶಿಕಾರಿಪುರದ ಕುಮದ್ವತಿ ಕಾಲೇಜಿನಲ್ಲಿ ಆಚರಿಸಲಾಗುತ್ತಿದೆ. ಈ ವೇಳೆ ಭಾಗಿಯಾಗಲು ಬಂದ ಸಂಸದ ಗೋವಿಂದ ಕಾರಜೋಳ ಮಾಧ್ಯಮದೊಂದಿಗೆ ಮಾತನಾಡಿ ಬಿಜೆಪಿ ಪಕ್ಷವನ್ನ 50 ವರ್ಷ ಹೆಗಲು ಮೇಲೆ ಹಾಕಿಕೊಂಡು ಬಂದು ಅಧಿಕಾರಕ್ಕೆ ತಂದಿದ್ದಾರೆ ಎಂದರು.
ಅವರು 100 ವರ್ಷಗಳ ಕಾಲ ಜನರ ಕಲ್ಯಾಣಕ್ಕಾಗಿ ಬಾಳಿ ಬದುಕಲಿ ಎಂದು ದೇವರಲ್ಲಿ ಕೇಳಿಕೊಂಡರು. ಮೇ ತಿಂಗಳಲ್ಲಿ ರಾಜಕೀಯ ಜೀವನ್ನ ಪ್ರವೇಶಿಸಿದ ಹಿನ್ನಲೆಯಲ್ಲಿ ದೊಡ್ಡ ಕಾರ್ಯಕ್ರಮ ನಡೆಸಲಾಗುತ್ತಿದೆ. ಚಿತ್ರದುರ್ಗದಲ್ಲಿ ಬಿಎಸ್ ವೈ ರಾಜಕಾರಣಕ್ಕೆ ಬಂದು 50 ವರ್ಷದ ಹಿನ್ನಲೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದು ಪೂರ್ವಭಾವಿ ಕಾರ್ಯಕ್ರಮವಾಗಿದೆ ಎಂದರು.
30 ಜಿಲ್ಲೆಗಳಿಗೆ ಚಿತ್ರದುರ್ಗ ಮುಖ್ಯ ದ್ವಾರವಾಗಿದೆ ಆಗಿರುವುದರಿಂದ ಅಲ್ಲಿ ನಡೆಸಲಾಗುವುದು. ಕಾರ್ಯಕ್ರಮದ ದಿನಾಂಕ ನುಗದಿಯಾಗಿಲ್ಲ. ಮಠಾಧೀಶರು ಆಪ್ತರನ್ನ ಭೇಟಿ ಮಾಡಿ ನಂತರ ಒಂದು ವಾರದಲ್ಲಿ ಮತ್ತೊಂದು ಸಭೆ ನಡೆಸಲಾಗುವುದು ಎಂದರು.
ದಲಿತ ಸಿಎಂ ಬಗ್ಗೆ ರಾಜ್ಯದಲ್ಲಿ ಮತ್ತೆ ಕೇಳಿ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾರಜೋಳ, ದಲಿತರಿಗೆ ಮುಖ್ಯ ಮಂತ್ರಿ ಸ್ಥಾನ ಅರ್ಹತೆ, ಸಾಮಾಜಿಕ ನ್ಯಾಯದ ಮೇಲೆ ಬರಬೇಕಿದೆ. ಭಿಕ್ಷೆ ಬೇಡುವುದಲ್ಲ. ಖರ್ಗೆಯವರ ಕಾಲದಿಂದ ಈ ಕೂಗು ಕೇಳಿ ಬರುತ್ತಿದೆ. ದಲಿತರಿಗಾಗಿ ಕೊಡುವಂತೆ ಭಿಕ್ಷೆ ಬೇಡಬಾರದು. ಮೂರು ವರ್ಷದಲ್ಲಿ ಕಾಂಗ್ರೆಸ್ ಮೂರು ಗುಂಪಾಗಿದೆ. ಡಿಸಿಎಂ ಡಿಕೆಶಿ ಸಿಎಂ ಆಗಬೇಕೆಂದರೆ ಮಹಾದೇವಪ್ಪ, ಪರಮೇಶ್ವರ ಕೊಡಿ ಎನ್ನುತ್ತಾರೆ. ಲಿಂಗಾಯಿತರು ನಮಗೆ ಕೊಡಿ ಎನ್ನತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯಿಲ್ಲ. ರೈತರ ಆತ್ಮಹತ್ಯೆ ನಡೆಯುತ್ತಿದೆ ಕುರ್ಚಿಗಾಗಿ ನಾಯಕರು ಕಿತ್ತಾಡುತ್ತಿದ್ದಾರೆ.
ಕುರ್ಚಿ ಕಾದಾಟ ಬಿಡಿ ವಿಶ್ವಾಸ ಮೂಡುವ ಆಡಳಿತ ಕೊಡಿ, ಒಳಮೀಸಲಾತಿ ಕೊಡುವುದಾಗಿ ಗಿಮಿಕ್ ಮಾಡಿ ಕೈಬಿಟ್ಟಿದ್ದಾರೆ. ಇದು ವಿಶ್ವಾಸದ್ರೋಹ ಮಾಡಿದ್ದಾರೆ. ಕೆಟ್ಟ ಆಡಳಿತ ಇರಬಾರದು ಹೋಗಲಿ ಎಂದು ಜನ ಕಾಯುತ್ತಿದ್ದಾರೆ. 39 ಸಾವಿರ ಕೋಟಿ ರೂ. ಹಣವನ್ನಬಜೆಟ್ ನಲ್ಲಿ ಘೋಷಣೆ ಮಾಡಿ ಬೇರೆದಕ್ಕೆ ಬಳಸಲಾಗಿದೆ. ಈ ಬಾರಿಯ ಬಜೆಟ್ ನಲ್ಲಾದರೂ 39 ಸಾವಿರ ಕೋಟಿ ಘೋಷಣೆ ಮಾಡಬೇಕು ಎಂದರು.
ಸಿದ್ದರಾಮಯ್ಯರಿಗೆ ನೈತಿಕತೆಯಿದ್ದರೆ ಅಭಿವೃದ್ಧಿ, ನೀರಾವರಿ ಯೋಜನೆಯನ್ನ ಮುಗಿಸಲಿ, ಗುತ್ತಿಗೆದಾರರಿಗೆ ಬಿಲ್ ಕೊಡಲಿ, ಅವರ ಆತ್ಮಹತ್ಯೆ ತಡೆಗಟ್ಟಲಿ ಗ್ಯಾರೆಂಟಿ ಕೊಡಲು ನಿಮಗೆ ಯಾರು ಹೇಳಿದ್ದು ಎಂದು ಕೇಳಿದರು. ಮೀಸಲಾತಿ 56% ಆಗಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಲಾಗಿದೆ ಸ್ಟೇ ಆಗಿದೆ. ಅಧಿಕಾರಿಗಳು ನ್ಯಾಯಾಲಯಕ್ಕೆ ದಾಖಲಾತಿ ನೀಡಲಿಲ್ಲ. ಹಾಗಾಗಿ ನ್ಯಾಯಾಲಯ ಸ್ಟೇ ನೀಡಿದೆ. ಇದರಿಂದ ನೇಮಕಾತಿಗೆ ಹಿನ್ನಡೆಯಾಗಿದೆ. ಹೀಗಾಗಿ ಪದವೀಧರರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸಂವಿಧಾನ ವಿರೋಧಿ ಆಡಳಿತವಾಗಿದೆ. ಮೀಸಲಾತಿಗೆ ಸರ್ಕಾರವೇ ಬೇರೆಯವರ ಮೂಲಕ ಅರ್ಜಿ ಸಲ್ಲಿಸಿ ಸ್ಟೇ ತರಿಸಿಕೊಂಡಿದೆ ಎಂದು ದೂರಿದರು.
ಶ್ರೀ ರಾಮುಲು ಮಾತು
ಮಾಜಿ ಡಿಸಿಎಂ ಶ್ರೀರಾಮುಲು ಮಾತನಾಡಿ, ಅಧ್ಯಕ್ಷರು ಪ್ರಭಾಕರ್ ಕೋರೆ, ಕಾರ್ಯದರ್ಶಿಯಾಗಿ ಕಾರಜೋಳರಾಗಿರುತ್ತಾರೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರು ಈ ಕಾರ್ಯಕ್ರಮಕ್ಕೆ ಆಗಮಸಲಿದ್ದಾರೆ. ಬಿಎಸ್ ವೈ ಈ ಕಾರ್ಯಕ್ರಮ ಮಾಡಬೇಕೆಂದು ಇಲ್ಲ. ಆದರೆ ಎಲ್ಲರ ಒಪ್ಪಿಗೆ ಪಡೆದು ನಡೆಸಿ ಎಂದು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
6½ ಕೋಟಿ ಜನ ಮೆಚ್ಚುವ ಸಿಎಂ ರಾಜ್ಯಕ್ಕೆ ಬರಲಿ, ಮೀಸಲಾತಿ ಹೆಚ್ಚಾಗಬೇಕು ಎಂದು ಬಿಜೆಪಿ ಪ.ಜಾ.ಗೆ 15 ರಿಂದ 17% ಮತ್ತು ಪ.ವರ್ಗಕ್ಕೆ 3% ನಿಂದ 7% ಆಗಬೇಕು ಎಂದು ಬಿಜೆಪಿ ನಿರ್ದರಿಸಿತ್ತು. 2022 ರಿಂದ 2024 ರವರೆಗೆ 24% ನೀಡಲಾಗಿದೆ. ಸರ್ಕಾರವೇ ರಿಟ್ ಪಿಟಿಷನ್ ಮಾಡಿ ನ್ಯಾಯಾಲಯದ ಮೂಲಕ ತಡೆಯಿಡಿಯವ ಪ್ರಯತ್ನ ನಡೆದಿದೆ ಎಂದು ದೂರಿದರು.

Yediyurappa to be felicitated in May - Karajola