SUDDILIVE || SHIVAMOGGA
ATNCC ಕಾಲೇಜನ್ನ ಖಾಗೀಕರಣಗೊಳಿಸುವುದನ್ನ ಕೈಬಿಡುವಂತೆ NSUI ಆಗ್ರಹ- NSUI demands withdrawal of privatization of ATNCC College
ರಾಷ್ಟ್ರೀಯ ಶಿಕ್ಷಣ ಸಮಿತಿಯು ತನ್ನ ಸ್ವಾಧೀನದಲ್ಲಿರುವ ಕೆಲವು ಕಾಲೇಜುಗಳನ್ನು ಖಾಸಗಿಕರಣ ಗೊಳಿಸುವ ಪ್ರಯತ್ನವನ್ನು ಕೈಬಿಡಬೇಕೆಂದು ಆಗ್ರಹಿಸಿ ಎನ್ ಎಸ್ ಯು ಐ ಶಿವಮೊಗ್ಗ ಘಟಕ ಎಟಿಎಂಸಿಸಿ ಕಾಲೇಜಿನ ಮುಂಭಾಗದ ಗೇಟ್ ಅನ್ನು ಬಂದು ಮಾಡಿ ಬೃಹತ್ ಪ್ರತಿಭಟನೆಯನ್ನು ನಡೆಸಿದೆ.
ಆಚಾರ್ಯ ತುಳಸಿ ವಾಣಿಜ್ಯ ಕಾಲೇಜು ಅನುದಾನಿತ ಕಾಲೇಜ್ ಆಗಿದ್ದು ಇದನ್ನು ಖಾಸಗಿಕರಣ ಮಾಡುವುದರಿಂದ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಆಗಲಿದ್ದು, ರಾಷ್ಟ್ರೀಯ ಶಿಕ್ಷಣ ಸಂಸ್ಥೆಯು ಸರ್ಕಾರದಿಂದಲೇ ಉಚಿತ ನಿವೇಶನ ಕಟ್ಟಡ ನಿರ್ಮಾಣಕ್ಕೆ ಅನುದಾನ ಪಡೆದು ಅನುದಾನದಲ್ಲಿಯೇ ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ವೇತನ ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಿದ್ದು ಈಗ ಖಾಸಗಿಕರಣಗೊಳ್ಳುವುದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ.
ಈಗ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯು ಎಟಿಎಂಸಿಸಿ ಕಾಲೇಜು ಮತ್ತು ಇನ್ನಿತರ ಕಾಲೇಜುಗಳನ್ನು ಅನುದಾನ ರಹಿತ ಖಾಸಗಿ ಕಾಲೇಜು ಎಂದು ಮಾರ್ಪಡಿಸಬೇಕೆಂದು ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಸಲ್ಲಿಸಿದ್ದು ಕಾಲೇಜಿನಲ್ಲಿ ಸರ್ಕಾರದ ವೇತನ ಪಡೆದು ಕಾರ್ಯನಿರ್ವಹಿಸುತ್ತಿದ್ದ ಪೂರ್ಣಾವಧಿ ಬೋಧಕ ಬೋಧಕ್ಕೆ ತರ ಸಿಬ್ಬಂದಿಗಳನ್ನು ಬೇರೆ ಬೇರೆ ಕಾಲೇಜುಗಳಿಗೆ ನಿಯೋಜಿಸುತ್ತಿದೆ ಮುಂದಿನ ದಿನಗಳಲ್ಲಿ ಬೇರೆ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ ಎಂದು ಪ್ರತಿಭಟನ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ದಿವಂಗತ ಎಸ್ ಆರ್ ನಾಗಪ್ಪ ಶ್ರೇಷ್ಠ ಹಾಗೂ ಗಿರಿ ಮಾಜಿ ರಾಜಗೋಪಾಲರಂತಹ ಹಿರಿಯರ ಸ್ಥಾಪನೆಯಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಲಿ ಎಂಬ ಮಹಾ ಉದ್ದೇಶದಿಂದ ಎನ್ಇಎಸ್ ಸಂಸ್ಥೆಯನ್ನು ಸ್ಥಾಪಿಸಿ ಈ ಮೂಲಕ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ನಾಂದಿ ಹಾಡಿದ್ದರು.
ಆದರೆ ಈಗ ಎನ್ಇಎಸ್ ಸಂಸ್ಥೆ ಶಿಕ್ಷಣ ವ್ಯಾಪಾರಿಕರಣಕ್ಕೆ ಇಳಿದಿರುವುದು ದುರ್ದೈವವಾಗಿದೆ. ಸುಮಾರು ಅರ್ಧ ಶತಮಾನಗಳಷ್ಟು ಹಳೆಯದಾದ ಕಾಲೇಜುಗಳು ಎಷ್ಟು ವರ್ಷ ಸರ್ಕಾರದಿಂದ ಅನುದಾನ ಪಡೆದು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವಿದ್ಯಾಭ್ಯಾಸ ನೀಡುತ್ತಿದ್ದು ಇದೀಗ ದುಡ್ಡು ಮಾಡುವ ದುರುದ್ದೇಶದಿಂದ ಕಾಲೇಜುಗಳನ್ನು ಖಾಸಗಿಕರಣ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಂಸ್ಥೆಯು ಈ ಪ್ರಯತ್ನವನ್ನು ಕೈ ಬಿಟ್ಟು ಇಂದಿನಂತೆ ಅನುದಾನಿತ ಕಾಲೇಜಾಗಿ ಮುಂದುವರಿಸಬೇಕೆಂದು ಎನ್ ಎಸ್ ಯು ಐ ಜಿಲ್ಲಾ ಘಟಕ ಆಗ್ರಹಿಸಿದೆ. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಚಂದು ಜಿ ವರುಣ್ ವಿ ಪಂಡಿತ್ ಸುಭಾನ್ ಆಕಾಶ್ ತರುಣ್ ಪ್ರಜ್ವಲ್ ಸುಮಂತ್, ಮತ್ತಿತರು ಭಾಗಿ ಆಗಿದ್ದರು.
NSUI demands withdrawal of privatization of ATNCC College
