SUDDILIVE || SHIVAMOGGA
ಇನ್ನು ಏಳು ತಿಂಗಳಲ್ಲಿ ಶಿವಮೊಗ್ಗ ಏರ್ ಪೋರ್ಟ್ ಗೆ ನೈಟ್ ಲ್ಯಾಂಡಿಂಗ್ ವ್ಯವಸ್ಥೆ- Night landing facility at Shivamogga Airport in seven months
ಅಧಿಕಾರ ವಹಿಸಿಕೊಂಡು ಈ ಹಿಂದೆ ಮೂರು ತಿಂಗಳ ಹಿಂದೆ ಶಿವಮೊಗ್ಗಕ್ಕೆ ಬಂದಾಗ ವಿಮಾನ ನಿಲ್ದಾಣದ ಪರವಾನಗಿಯ ನವೀಕರಣ ಆಗಿರಲಿಲ್ಲ. ಈಗ 22 ಲಕ್ಷ ರೂ. ದಂಡ ಪಾವತಿಸಿ ಮೂರು ವರ್ಷದ ವರೆಗೆ ನವೀಕರಣಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕ ಮತ್ತು ಮೂಲಸೌಕರ್ಯ ksidc (ವಿಮಾನ ನಿಲ್ದಾಣ) ಅಧ್ಯಕ್ಷ ನಂಜನಯ್ಯನ ಮಠ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮೂರು ತಿಂಗಳ ಹಿಂದೆ ಬಂದಾಗ ರೈತರು 300 ಜನ ರೈತರು ನಿವೇಶನಕ್ಕಾಗಿ ಪ್ರತಿಭಟಿಸಿದ್ದರು. ಅವರ ಬೇಡಿಕೆಯನ್ನ ಕೆಹೆಚ್ ಬಿ ಕೊಡಬೇಕು. ಸಿಎಂ ಗೆ ಈ ಬಗ್ಗೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಶಿವಮೊಗ್ಗದ ನೈಟ್ ಲ್ಯಾಂಡಿಂಗ್ ನಿರ್ಮಾಣಕ್ಕೆ ಡಿಸಿಸಿಐ ವಿಧಿಸಿದ ದಂಡ ಅಡ್ಡವಿತ್ತು. ಅದನ್ನ ವಿವಾರಿಸಿ ಈಗ ಏಳು ತಿಂಗಳ ಒಳಗಾಗಿ ರಾತ್ರಿ ವಿಮಾನ ಸಂಚಾರ ಆರಂಭಿಸಲಾಗುತ್ತಿದೆ. ಡಿವಿಒಆರ್ ಯಾಂತ್ರಿಕ ವ್ಯವಸ್ಥೆಯ ಟೆಂಡರ್ ಮುಗಿಸಲಾಗಿದೆ. ಮಣ್ಣಿನ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ. ವಾರದಲ್ಲಿ ವರದಿ ಬರುವ ನಿರೀಕ್ಷೆಯಲ್ಲಿದ್ದೇವೆ. ಇದರ ಸ್ಥಾಪನೆಗೂ ಮುಂಚೆ ಕೇಂದ್ರ ಕಚೇರಿಯಿಂದ ಚೆಕ್ ಲೀಸ್ಟ್ ಪ್ರಕಾರ ತಪಾಸಣ ವರದಿ ಬರಲಿದೆ. ಅದು ಬರುತ್ತಿದ್ದಂತೆ ಕಾಮಗಾರಿ ಆರಂಭವಾಗಲಿದೆ. ನೈಟ್ ಲ್ಯಾಂಡಿಂಗ್ ಇಲ್ಲದೆ ಹವಮಾನ ವೈಪರೀತ್ಯದಿಂದ ವಿಮಾನಗಳು ವಾಪಾಸ್ ಹೋಗದಂತೆ ನೋಡಿಕೊಳ್ಳಲು ಈ ನೈಟ್ ಲ್ಯಾಂಡಿಂಗ್ ಸಹಾಯವಾಗಲಿದೆ. ಜೊತೆಗೆ ರಾತ್ರಿಯ ವೇಳೆಯಲ್ಲಿ ವಿಮಾನ ಹಾರಾಟಕ್ಕೆ ಅನುಕೂವಾಗಲಿದೆ ಎಂದರು.
ವರದಿ ಬಂದು, ಕಾಮಗಾರಿ ಮುಕ್ತಾಗೊಳಿಸಲು 6 ತಿಂಗಳು ಹಿಡಿಯಲಿದೆ. ವಿದ್ಯುತ್ ಸಂಪರ್ಕದ ವ್ಯವಸ್ಥೆ ಆಗಬೇಕಿದೆ. ಪರೀಕ್ಷ ವರದಿಗೆ ಸಂಬಂಧಿಸಿದ ಇಲಾಖೆ ನೀಡಿದೆ. ನೈಟ್ ಲ್ಯಾಂಡಿಂಗ್ ಸ್ಥಾಪನೆ 6 ತಿಂಗಳವರೆಗೆ ಹಿಡಿಯುವುದರಿಂದ ಇನ್ನು ಏಳು ತಿಂಗಳ ಒಳಗೆ ನೈಟ್ ಲ್ಯಾಂಡಿಂಗ್ ನ್ನ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿಯನ್ನ ಫೆಬ್ರವರಿಯ ಕೊನೆಯ ಭಾಗದಲ್ಲಿ ಆರಂಭವಾಗಲಿದೆ ಎಂದರು.
ದಂಡ ಕಟ್ಟಿದ್ದು ಆಡಳಿತದ ವೈಫಲ್ಯತೆಯಾಗಿದೆ ಎಂದ ಅವರು, ಕಲ್ಬುರ್ಗಿಯಲ್ಲಿ ವಿಮಾನನಿಲ್ದಾಣ ಬಂದ್ ಆಗಿರುವ ಹಾಗೆ ಶಿವಮೊಗ್ಗದಲ್ಲಿ ಬಂದ್ ಆಗಲಿದೆಯಾ ಎಂಬ ಪ್ರಶ್ನೆ ಉತ್ತರಿಸಿದ ಅವರು ಶಿವಮೊಗ್ಗದಿಂದ ಗೋವಾ, ಚೆನ್ನೈ, ಬೆಂಗಳೂರು ಮೊದಲಾದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉಡಾನ್ ಯೋಜನೆ ಮುಕ್ತಾಯಗೊಳ್ಳಲಿದ್ದು, ಉಡಾನ್ ಯೋಜಬೆ ಮುಕ್ತಾಯಗೊಂಡರೆ ವಿಮಾನ ಪ್ರಯಾಣದ ದರದ ಬಿಸಿ ಪ್ರಯಾಣಿಕರಿಗೆ ತಗುಲಿದೆಯಾ ಎಂಬ ಪ್ರಶ್ನೆಗೆ ಈ ವಿಷಯ ಗೊತ್ತಿರಲಿಲ್ಲ. ಸಂಸದರನ್ನವಿಶ್ವಾಸಕ್ಲೆ ಪಡೆದು ಉಡಾನ್ ಯೋಜನೆ ಮುಂದುವರೆಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನ ಮುಂದುವರೆಸಲಿದ್ದೇನೆ ಎಂದು ಭರವಸೆ ನೀಡಿದರಿ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವ್ಯವಸ್ಥೆಯನ್ನ ಪಿಪಿಟಿ ಅಡಿಯಲ್ಲಿ ನಿರ್ಮಿಸಲಾಗುವುದು. 30 ವರ್ಷದ ಕಾಲ ಜಾಗಪಡೆದ ಮಾಲೀಕರಿಗೆ ಭೂಮಿ ಬಿಟ್ಟುಕೊಡುವ ಬಗ್ಗೆ ಬೋರ್ಡ್ ಸಭೆಯಲ್ಲಿ ಚರ್ಚೆಯಾಗುತ್ತಿದೆ. ವಿಮಾನ ತರಬೇತಿ ಕೇಂದ್ರ ಆರಂಭಿಸಲು ಅರ್ಜಿ ಕರೆಯಲಾಗುತ್ತಿದೆ. ಹಾಸನದ ವಿಮಾನನಿಲ್ದಾಣ ಸಮಸ್ಯೆಯಿದೆ. ಮೂರು ನಾಲ್ಕು ಹಳ್ಳಿಗಳಿಗೆ ಹೋಗುವ ರೈತರು ನಿಲ್ದಾಣದಲ್ಲಿ ನಡೆಯುತ್ತಿರುವ ರನ್ ವೇ ಮೂಲಕವೇ ಸಂಚರಿಸುತ್ತಿದ್ದಾರೆ. ಭೂಸ್ವಾಧೀನ, ವಿದ್ಯುತ್ ಸಂಪರ್ಕದ ಬಗ್ಗೆ ಡಿಸಿ ಜೊತೆ ಸಭೆ ನಡೆಸಲಾಗಿದೆ. ವಿದ್ಯುತ್ ಸಂಪರ್ಕಕ್ಕೆ 17.5 ಕೋಟಿ ಹಣವನ್ನ ಕಟ್ಟಬೇಕಿತ್ತು ಕಟ್ಟಲಾಗಿದೆ. ಉಳಿದ 21 ಕೋಟಿ ಹಣ ಕಟ್ಟಬೇಕಿದೆ. ರೈತರು ತಮ್ಮಊರಿಗೆ ಹೋಗಲು ಒಂದು ರಸ್ತೆ ಸಂಪರ್ಕ ಕಲ್ಪಿಸಲಾಗುವುದು. ಇದಕ್ಕಾಗಿ ಭೂಮಿ ಒತ್ತುವರಿ ನಡೆಯಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ ಸಿ ಯೋಗೀಶ್, ಏರ್ ಪೋರ್ಟ್ ನ ಶಮಂತ್, ವಿದ್ಯಾಧರ್ ಸಾಲಿಮಠ ಉಪಾಸ್ಥಿತರಿದ್ದರು.
Night landing facility at Shivamogga Airport in seven months
