ಅಂಗನವಾಡಿ ಸಹಾಯಕಿ, ಮುಸುಕುದಾರಿ, ನಗ್ನಾವಸ್ಥೆ ಹಾಗೂ ಆ ರಕ್ತಕಲೆ...!Anganwadi helper, veiled woman, nakedness and that bloodstain...!

 SUDDILIVE || SHIKARIPURA

ಅಂಗನವಾಡಿ ಸಹಾಯಕಿ, ಮುಸುಕುದಾರಿ, ನಗ್ನಾವಸ್ಥೆ ಹಾಗೂ ಆ ರಕ್ತಕಲೆ...!Anganwadi helper, veiled woman, nakedness and that bloodstain...!    

Blood, stains

ಶಿರಾಳಕೊಪ್ಪದ ಅಂಗನವಾಡಿಯ ಅಡುಗೆ ಸಹಾಕಿಯ ನಿಗೂಢ ಸಾವು ಅಪರಿಚಿತನೋರ್ವನಿಂದ ಕೊಲೆಯಾಗಿರುವುದಾಗಿ ದೂರು ದಾಖಲಾಗಿದೆ. ಮನೆಯ ಗೇಟು ಮುಚ್ಚಿದ ಹಾಗೆ ಇದ್ದು, ಮನೆಯ ಮುಂಬಾಗಿಲು ಸಹ ಹಾಗೆ ಮುಚ್ಚಿದ್ದು ಹಿಂಬದಿಯ ಬಾಗಿಲು ತೆರದಿರುವುದು,  ನಗ್ನಾವ್ಯಸ್ಥೆಯಲ್ಲಿ ಅವರ ಮೃತ ದೇಹ ಪತ್ತೆಯಾಗಿರುವುದು ಹಾಗೂ ಗುಪ್ತಾಂಗದ ಬಳಿಯಲ್ಲಿ ಪತ್ತೆಯಾದ ರಕ್ತದ ಕಲೆ ಕೊಲೆಯ ಶಂಕೆಯನ್ನ ಹೆಚ್ಚಿಸಿದೆ. 

ಶಿಕಾರಿಪುರದ ಬಿಳಕಿ ಗ್ರಾಮದಲ್ಲಿ ವಾಸವಾಗಿದ್ದ ಪ್ರೇಮ ಮಡಿವಾಳ ಎಂಬ 53 ವರ್ಷದ ಅಂಗನವಾಡಿ ಅಡುಗೆ ಸಹಾಯಕಿಯು ಮನೆಯ ಒಳಗೆ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರೇಮರವರು  ಬಿಳಕಿಯಲ್ಲೇ ವಾಸವಾಗಿದ್ದರು. ಸುಮಾರು ವರ್ಷಗಳ ಹಿಂದೆ ಗಂಡ ತೀರಿಕೊಂಡಿದ್ದು, ಬಿಳಕಿ ಗ್ರಾಮದಲ್ಲಿಯೇ ಅಂಗನವಾಡಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. 

ಬಿಳಕಿಯಲ್ಲಿದ್ದ ಸ್ವಂತ ಮನೆ ಬೀಳುವ ಹಂತದಲ್ಲಿದ್ದ ಕಾರಣ ತೊಗರ್ಸಿಗೆ ಬಂದಿದ್ದ ಪ್ರೇಮಾ ಅಲ್ಲಿಂದಲೇ ಅಂಗನವಾಡಿ ಕೆಲಸಕ್ಕೆ ಓಡಾಡಿಕೊಂಡಿದ್ದರು. ಅವರಿಗೆ ಮೂರು ಹೆಣ್ಣು ಒಂದು ಗಂಡು ಮಕ್ಕಳಿದ್ದಾರೆ. ಗಂಡು ಮಗಾದ ಮನೋಜ್ ಸಾಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರೆ. ಮೂರು ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಜವಬ್ದಾರಿ ಕಳೆದುಕೊಂಡಿದ್ದರು. 

ಮಕ್ಕಳಿಗೆ ಮದುವೆಯಾದಾಗಿನಿಂದ ಅವರು ಒಬ್ಬಂಟಿಯಾಗಿ ಕೆಲಸ ಮಾಡಿಕೊಂಡಿದ್ದರು. ತೊಗರ್ಸಿಯಿಂದ ಮತ್ತೆ ಬಿಳಕಿಗೆ ಬಂದು ಬಾಡಿಗೆ ಮನೆಯನ್ನ ಹಿಡಿದಿದ್ದ ಪ್ರೇಮ, ಬಿಳಕಿಯಲ್ಲಿದ್ದ ಸಂಬಂಧಿಯಾಗಿದ್ದ  ಸತೀಶ್ ಮದ್ಲಿಂಗಪ್ಪ ಎಂಬುವರಿಗೆ ಸೇರಿದ್ದ ಮನೆಯಲ್ಲಿ ಬಾಡಿಗೆದಾರರಾಗಿ ವಾಸವಾಗಿದ್ದರು. 

ಫೆ.13 ರಂದು ಸಂಜೆ 4-30 ಕ್ಕೆ ಕೆಲಸದಿಂದ ಮನೆಗೆ ಬಂದ ಅವರು ಅಕ್ಕಪಕ್ಕದ ಮನೆಗೆ ಹೋಗಿ ಮಾತನಾಡಿ, ಟಿವಿ ನೋಡಿಕೊಂಡು ವಾಪಾಸ್ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಆದರೆ ಮುಸುಕುದಾರಿಯಾಗಿ ಬಂದ ಬೈಕ್  ಸವಾರನೊಬ್ಬ ಅವಸರ ಅವಸರದಿಂದ ಅವರ ಮನೆಯ ಹಿಂಭಾಗದಿಂದ ಹೊರಗೆ ಬಂದು ಬೈಕ್ ನಲ್ಲಿ ಹೋಗಿದ್ದನ್ನ ಪಕ್ಕದ ಮನೆಯ ವಾಸಿಯೊಬ್ಬರು ರಾತ್ರಿ ಸುಮಾರು 11 ಗಂಟೆಗೆ ನೋಡಿದ್ದಾರೆ. 

ಆ ಮುಸುಕುದಾರಿಯನ್ನ ಪತ್ತೆ ಮಾಡಲು ಶಿರಾಳಕೊಪ್ಪದ ಪಿಎಸ್ಐ ಪ್ರಶಾಂತ್ ನೇತೃತ್ಬದ ತಂಡ ಬೆನ್ನುಹತ್ತಿದೆ. ಮುಸುಕುದಾರಿಯಾಗಿ ಬಂದವರನ್ನ ಪ್ರೇಮಾರವರ ಸಂಬಂಧಿಯಿರಬಹುದು ಎಂದು ಪಕ್ಕದ ಮನೆಯವರು ಸುಮ್ಮನಾಗಿದ್ದರಿಂದ ಆತ ಎಸ್ಕೇಪ್ ಆಗಲು ಸಹಾಯವಾಗಿದೆ. ಆದರೆ ಆತನ ತಲಾಶಿಯಲ್ಲಿ ಪೊಲೀಸರ ತನಿಖಾ ತಂಡ ತೊಡಗಿದೆ.

ಯಾವಾಗ ಮರುದಿನ ಅಂಗನವಾಡಿಯ ಟೀಚರ್ ಮಾಡಿದ್ದ ಮೊಬೈಲ್ ಕರೆಯನ್ನ ಪ್ರೇಮಾ ಸ್ವೀಕರಿಸಲಿಲ್ಲವೋ ಆಗ ಪಕ್ಕದ ಮನೆಯವರಿಗೆ ಕರೆ ಮಾಡಿ ಬೇಗ ಡ್ಯೂಟಿಗೆ ರೆಡಿಯಾಗಲು ಹೇಳಿ ಎಂದು ತಿಳಿಸಿದ್ದರು. ಮನೆಯ ಗೇಟು, ಮನೆಯ ಮುಂಬಾಗಿಲು ಹಾಕಿದ್ದು ಹಾಕಿದಂತೆ ಇದ್ದ ಕಾರಣ ಪ್ರೇಮಾರನ್ನ ಎಬ್ವಿಸಲು ಬಂದವರಿಗೆ ಗೊಂದಲ ಉಂಟಾಗಿದೆ.  ಎಷ್ಟು ಹೊತ್ತಾದರೂ ಬಾಗಿಲು ತೆಗೆಯದಿದ್ದಾಗ ಹಿಂಬದಿಯ ಬಾಗಿಲಿನ ಬಳಿ ಹೋದವರಿಗೆ  ಶಾಕ್ ಆಗಿದೆ. 

ನಗ್ನಾವ್ಯಸ್ಥೆಯಲ್ಲಿ ಪ್ರೇಮ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳವೀಕ್ಷಣೆ ಮಾಡಿದಾಗ ಅವರ ಗುಪ್ತಾಂಗದ ಬಳಿ ರಕ್ತದ ಕಲೆ ಪತ್ತೆಯಾಗಿದೆ. ಹೀಗೆ ಪ್ರೇಮಾರವರ ಕೊಲೆ ಪ್ರಕರಣ ನಡೆದಿದೆ. 

ಮುಸುಕುದಾರಿಯಾಗಿ ಬಂದವನಾರು? ವೇಗವಾಗಿ ಆತ ಎಸ್ಕೇಪ್ ಆಗಿದ್ದೇಕೆ? 53 ವರ್ಷದ ಪ್ರೇಮ ನಗ್ನಾವ್ಯವಸ್ಥೆಯಲ್ಲಿ ಪತ್ತೆಯಾಗಿದ್ದೇಕೆ? ನಗ್ನಾವ್ಯಸ್ಥೆಯಲ್ಲಿ ಪತ್ತೆಯಾದ ಪ್ರೇಮರಿಗೆ ಗುಪ್ತಾಂಗದ ಬಳಿ ಕಲೆ ಪತ್ತೆಯಾಗಿದ್ದು ಯಾಕೆ? ಎಂಬ ಪ್ರಶ್ನೆಗೆ ಪೊಲೀಸರ ತನಿಖೆಯಿಂದ ಉತ್ತರ ತಿಳಿದು ಬರಬೇಕಿದೆ. ಮಗ ಮನೋಜ್ ಅನುಮಾನಸ್ಪಾದದಲ್ಲಿ ಕೊಲೆಯಾಗಿರುವ ತಾಯಿಯ ಹಂತಕನ ಪತ್ತೆಗೆ ಶಿರಾಳಕೋಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Anganwadi helper, veiled woman, nakedness and that bloodstain...!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close