SUDDILIVE || SHIRALKOPPA
ಬಿಳಕಿಯಲ್ಲಿ ಮಹಿಳೆಯ ಅನುಮಾನಸ್ಪದ ಸಾವು ಪ್ರಕರಣ ಓರ್ವನ ಬಂಧನ- One arrested in suspicious death of woman in Bilaki
ಶಿರಾಳಕೊಪ್ಪದ ಬಿಳಕಿ ಗ್ರಾಮದಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಸಿಪಿಐ ಸಂತೋಷ್ ಪಾಟೀಲ್ ನೇತೃತ್ವದ ತಂಡ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.
ಶಿರಾಳಕೊಪ್ಪದ ಬಿಳಕಿ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿಯಾಗಿದ್ದ ಪ್ರೇಮ ಮಡಿವಾಳರ ಹತ್ಯಗೆ ಸಂಬಂಧಿಸಿದಂತೆ ಇವರ ದೂರದ ಸಂಬಂಧಿ ರಾಘವೇಂದ್ರ ಯಾನೆ ಕೋಡಿಹಳ್ಳಿ ರಾಘು(23) ಎಂಬಾತನನ್ನ ಬಂಧಿಸಲಾಗಿದೆ.
ಘಟನೆಯ ವಿವರ
ಫೆ.13 ರಂದು ಸಂಜೆ 4-30 ಕ್ಕೆ ಕೆಲಸದಿಂದ ಮನೆಗೆ ಬಂದ ಪ್ರೇಮ ಮಡಿವಾಳ(56) ಅಕ್ಕಪಕ್ಕದ ಮನೆಗೆ ಹೋಗಿ ಮಾತನಾಡಿ, ಟಿವಿ ನೋಡಿಕೊಂಡು ವಾಪಾಸ್ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಆದರೆ ಮುಸುಕುದಾರಿಯಾಗಿ ಬಂದ ಬೈಕ್ ಸವಾರನೊಬ್ಬ ಅವಸರ ಅವಸರದಿಂದ ಅವರ ಮನೆಯ ಹಿಂಭಾಗದಿಂದ ಹೊರಗೆ ಬಂದು ಬೈಕ್ ನಲ್ಲಿ ಹೋಗಿದ್ದನ್ನ ಪಕ್ಕದ ಪ್ರೇಮರ ಮನೆಯ ವಾಸಿಯೊಬ್ಬರು ರಾತ್ರಿ ಸುಮಾರು 11 ಗಂಟೆಗೆ ನೋಡಿದ್ದಾರೆ.
ಆ ಮುಸುಕುದಾರಿಯನ್ನ ಪತ್ತೆ ಮಾಡಲು ವೃತ್ತ ನಿರೀಕ್ಷಕ ಸಂತೋಷ ಪಾಟೀಲ್, ನೇತೃತ್ವದ ತಂಡ ಬೆನ್ನುಹತ್ತಿತ್ತು. ಮುಸುಕುದಾರಿಯಾಗಿ ಬಂದವರನ್ನ ಪ್ರೇಮಾರವರ ಸಂಬಂಧಿಯಿರಬಹುದು ಎಂದು ಪಕ್ಕದ ಮನೆಯವರು ಸುಮ್ಮನಾಗಿದ್ದರಿಂದ ಆತ ಎಸ್ಕೇಪ್ ಆಗಲು ಸಹಾಯವಾಗಿತ್ತು. ಆತನನ್ನ ಪೊಲೀಸರ ತನಿಖಾ ತಂಡ ಬಂಧಿಸಿದೆ.
ಯಾವಾಗ ಮರುದಿನ ಅಂಗನವಾಡಿಯ ಟೀಚರ್ ಮಾಡಿದ್ದ ಮೊಬೈಲ್ ಕರೆಯನ್ನ ಪ್ರೇಮಾ ಸ್ವೀಕರಿಸಲಿಲ್ಲವೋ ಆಗ ಪಕ್ಕದ ಮನೆಯವರಿಗೆ ಕರೆ ಮಾಡಿ ಬೇಗ ಡ್ಯೂಟಿಗೆ ರೆಡಿಯಾಗಲು ಹೇಳಿ ಎಂದು ತಿಳಿಸಿದ್ದರು. ಮನೆಯ ಗೇಟು, ಮನೆಯ ಮುಂಬಾಗಿಲು ಹಾಕಿದ್ದು ಹಾಕಿದಂತೆ ಇದ್ದ ಕಾರಣ ಪ್ರೇಮಾರನ್ನ ಎಬ್ಬಿಸಲು ಬಂದವರಿಗೆ ಗೊಂದಲ ಉಂಟಾಗಿತ್ತು. ಎಷ್ಟು ಹೊತ್ತಾದರೂ ಬಾಗಿಲು ತೆಗೆಯದಿದ್ದಾಗ ಹಿಂಬದಿಯ ಬಾಗಿಲಿನ ಮೂಲಕ ಹೋದಾಗ ಪ್ರೇಮರವರ ಹತ್ಯೆ ನಡೆದಿದ್ದು ಗೋಚರವಾಗಿದೆ.
ನಗ್ನಾವ್ಯಸ್ಥೆಯಲ್ಲಿ ಪ್ರೇಮ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳವೀಕ್ಷಣೆ ಮಾಡಿದಾಗ ಅವರ ಗುಪ್ತಾಂಗದ ಬಳಿ ರಕ್ತದ ಕಲೆ ಪತ್ತೆಯಾಗಿದೆ. ಹೀಗೆ ಪ್ರೇಮಾರವರ ಕೊಲೆ ಪ್ರಕರಣ ನಡೆದಿತ್ತು.
ಮುಸುಕುದಾರಿಯಾಗಿ ಬಂದವನಾರು? ವೇಗವಾಗಿ ಆತ ಎಸ್ಕೇಪ್ ಆಗಿದ್ದೇಕೆ? 52 ವರ್ಷದ ಪ್ರೇಮ ನಗ್ನಾವ್ಯವಸ್ಥೆಯಲ್ಲಿ ಪತ್ತೆಯಾಗಿದ್ದೇಕೆ? ನಗ್ನಾವ್ಯಸ್ಥೆಯಲ್ಲಿ ಪತ್ತೆಯಾದ ಪ್ರೇಮರಿಗೆ ಗುಪ್ತಾಂಗದ ಬಳಿ ಕಲೆ ಪತ್ತೆಯಾಗಿದ್ದು ಯಾಕೆ? ಎಂಬ ಪ್ರಶ್ನೆಗೆ ಪೊಲೀಸರ ತನಿಖೆಯಿಂದ ಉತ್ತರ ತಿಳಿದು ಬರಬಂದಿದೆ. ಕೋಡಿಹಳ್ಳಿ ರಾಘು, ಪ್ರೇಮಾರವರ ದೂರದ ಸಂಬಂಧಿಯಾಗಿದ್ದಾನೆ.
ಆದರೂ ಪೊಲೀಸರು ವೈದ್ಯರ ವರದಿಗಾಗಿ ಕಾಯಲಾಗುತ್ತಿದೆ. ವೈದ್ಯರ ವರದಿಯಿಂದ ರಾಘವೇಂದ್ರನ ಅಳಿವು ಉಳಿವು ತೀರ್ಮಾನವಾಗಲಿದೆ. ಸಧ್ಯಕ್ಕೆ ರಾಘವೇಂದ್ರ ನ್ಯಾಯಾಂಗ ಬಂಧನದಲ್ಲಿದ್ದಾನೆ. ರಾಘವೇಂದ್ರ ಕೋಡಿಹಳ್ಳಿಯ ನಿವಾಸಿ ಆಗಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದವನು ಉರಿಗೆ ಹಿಂದಿರುಗಿದ್ದ. ನಂತರ ಪ್ರೇಮರವರನ್ಙ ಪರಿಚಯ ಮಾಡಿಕೊಂಡಿದ್ದನು.
One arrested in suspicious death of woman in Bilaki

