1.08 ಕೊಟಿ ರೂ. ನಲ್ಲಿ ಪಾರ್ಕ್ ಅಭಿವೃದ್ಧಿ, ಪಾಲಿಕೆಯಿಂದಲೇ ನಿರ್ವಾಹಣೆ-Park development at Rs. 1.08 crore, management by the corporation itself

 SUDDILIVE || SHIVAMOGGA

1.08 ಕೊಟಿ ರೂ. ನಲ್ಲಿ ಪಾರ್ಕ್ ಅಭಿವೃದ್ಧಿ, ಪಾಲಿಕೆಯಿಂದಲೇ ನಿರ್ವಾಹಣೆ-Park development at Rs. 1.08 crore, management by the corporation itself     





ಶಿವಮೊಗ್ಗದ ಗಾಂಧಿಪಾರ್ಕ್ ಬಹಳ ಹಳೆಯದ್ದಾಗಿದ್ದು. 70-80 ದಶಕದಲ್ಲಿ ಪ್ರತಿಭಾನುವಾರ ಚಲನಚಿತ್ರ ಗೀತೆಗಳು ಮತ್ತು ಸಿನಿಮಾಗಳನ್ನ ತೋರಿಸಲಾಗುತ್ತಿತ್ತು. ವಾಸವಿ ಯುವಕರ ಸಂಘ ನಿರ್ವಹಿಸುತ್ತಿತ್ತು.2008 ರ ನಂತರ ಮಾಜಿ ಸಿಎಂ  ಬಿಎಸ್ ವೈ ಆಸಕ್ತಿ ವಹಿಸಿದ ಮೇಲೆ ಅಭಿವೃದ್ಧಿಯಾಯಿತು ಎಂದು ಶಾಸಕ ಚೆನ್ನಬಸಪ್ಪ ಆಗ್ರಹಿಸಿದ್ದಾರೆ. 

ಸುದ್ದಿಗೋಷ್ಠಿ ನಡೆಸಿದ ಅವರು , ಅಭುವೃದ್ಧಿ ಪಡಿಸಿದಾಗ ಶಿವಮೊಗ್ಗ ಇನ್ನೂ ನಗರಸಭೆಯಾಗಿತ್ತು. ಪಾರ್ಕ ಕಷ್ಟವಾಗುತ್ತಿತ್ತು. ಪಾಲಿಕೆ ಆದಮೇಲೆ ನಿರ್ವಹಣೆ ಮಾಡಲು ತೀರ್ಮಾನಿಸಿ ನಂತರ ಹಣ ಬಿಡುಗಡೆ ಮಾಡಲಾಗಿತ್ತು. ನಿರ್ವಹಣೆಗೆ ಟೆಂಡರ್ ಕರೆಯಲಾಗುತ್ತಿತ್ತು. ಆಗಲೂ ಸಮಸ್ತೆಯಾಗುತ್ತಿತ್ತು. ಈಗ ಪಾಲಿಕೆಯೇ ನಿರ್ವಹಿಸುತ್ತಿದೆ. ರೈಲು, ಮಕ್ಕಳ ಆಟಿಕೆ ಒಪನ್ ಜಿಮ್, ಐದು ನೀರಿನ ಕೊಳಾಯಿಯಲ್ಲಿ ಸದಾ ನೀರು ಇರಲಿದೆ.  ಆರಂಭಿಸಲಾಗುತ್ತಿದೆ‌. ಸ್ಪ್ರಿಂಕ್ಲರ್ ಮೂಲಕ ಮರಗಳಿಗೆ ನೀಡಲಾಗುತ್ತಿದೆ. 

ಸ್ಪ್ರಿಂಕ್ಲರ್ ಆರಂಭವಾಗುತ್ತಿದೆ. ನಾಲ್ಕೈದು ಕಾಮಗಾರಿ ನಡೆಯಬೇಕಿದೆ. STP ಸರಿಪಡಿಸಬೇಕಿದೆ. ಡ್ರೈನೇಜ್ ನೀರು ಹರಿಯುವುದರಿಂದ ವಾಸನೆ ಬಾರದಂತೆ ಪೂರಕ ಸಿದ್ಧತೆ ನಡೆಯುತ್ತಿದೆ. ವನ್ಯಜೀವಿ ವ್ಯಾಖ್ಯಾನ ಕೇಂದ್ರ ಸ್ಮಾರ್ಟ್ ಸಿಟಿ ಅಡಿ ನಿರ್ಮಾಣವಾಗುತ್ತಿದೆ. ಇವತ್ತಿನಿಂದ ವೀಕ್ಷಣೆಗೆ ಸಿಗಲಿದೆ. ಗಾಂಧಿಪಾರ್ಕ್ ಇಚ್ಛಶಕ್ತಿ ಕಡಿಮೆಯಾಗಿತ್ತು. ಕಳೆದುಕೊಳ್ಳುವ ಭಯವಿತ್ತು. ಈಗ ನಾಗರೀಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಒಂದು ತಿಂಗಳಲ್ಲಿ ಸಮಗ್ರ ಕಾಮಗಾರಿ ಮುಗಿಸಲಾಗುವುದು. 

ಅಧಿಕಾರಿಗಳ ಕಮಿಟಿ ಪಾರ್ಕ್ ನಿರ್ವಾಹಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಉಪಾಯುಕ್ತರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಕಮಿಟಿಯಲ್ಲಿ ಒಳಗೊಂಡಿದ್ದಾರೆ. ತಂಡದಿಂದ ಅಭಿವೃದ್ಧಿ ನಡೆಸಿ ಪಾರ್ಕ್  ನಿರ್ವಹಿಸಲಾಗುತ್ತಿದೆ. ಪ್ರವೇಶ ಶುಲ್ಕ 10 ಮತ್ತು 20 ರೂ. ನಿಗದಿಪಡಿಸಲಾಗಿದೆ. ವನ್ಯಜೀವಿ ವ್ಯಾಖ್ಯನ ಕೇಂದ್ರ ಆರಂಭವವಾಗಿದೆ. ಮಕ್ಕಳಿಗೆ ಐದು ರೂ ಮತ್ತು ದೊಡ್ಡವರಿಗೆ 10 ರೂ ನಿಗದಿಪಡಿಸಲಾಗಿದೆ. ಕ್ಯಾಂಟೀನ್ ನಿರ್ಮಿಸಲಾಗುತ್ತಿದೆ. ಇದು ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. 

13 ಲಕ್ಷ ಬೋರ್, 6.30 ಶೌಚಾಲಯದ ನಿರ್ಮಾಣ, ಉಪಕರಣ 42.48 ಲಕ್ಷ, ಆಟಿಕೆ ಮತ್ತು ರೈಲು ಪುನರ್ ನಿರ್ಮಾಣಕ್ಕೆ9.70 ಲಕ್ಷ ಕುಟೀರ 13.10 ಟೈಲ್ಸ ಮತ್ತಿತರೆ ಕಾಮಗಾರಿಗೆ 2 ಲಕ್ಷ, ಸ್ಪ್ರಿಂಕ್ಲಿಂಗ್ ಗೆ 30 ಲಕ್ಷ ಸೇರಿ ಒಟ್ಟು 1 ಕೋಟಿ 8 ಲಕ್ಷ ರೂ. ಹಣದಲ್ಲಿ  ಪುನರ್ ನಿರ್ಮಿಸಲಾಗಿದೆ. ರೈಲಿಗೆ ದೊಡ್ಡವರಿಗೆ 20 ರೂ. ಸಣ್ಣವರಿಗೆ 10 ರೂ. ನಿಗದಿಪಡಿಸಲಾಗಿದೆ. 14 ಜನ ಹೋಮ್ ಗಾರ್ಡ್ ನಿಯೋಜಿಸಲಾಗಿದೆ. ಸ್ವಚ್ಛಗೊಳಿಸಲು ತಂಡರಚಿಸಲಾಗಿದೆ. ಸಿಸಿ ಟಿವಿ ಅಳವಡಿಸಲಾಗಿದೆ. 32 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿ ವಾರದ ಅಂತ್ಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಾಕಿಂಗ್ ಗೆ ಬರುವವರಿಗೆ ಉಚಿತ ನೀಡಲಾಗುವುದು ಎಂದರು. 

Park development at Rs. 1.08 crore, management by the corporation itself

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close