ಮನೆ ಮುಂದೆ ನಿಲ್ಸಿದ್ದ ಮೂರು ಬೈಕ್ ಗಳಿಗೆ ಬೆಂಕಿ- Three bikes parked in front of a house caught fire

 SUDDILIVE || BHADRAVATHI

ಮನೆ ಮುಂದೆ ನಿಲ್ಸಿದ್ದ ಮೂರು ಬೈಕ್ ಗಳಿಗೆ ಬೆಂಕಿ-  Three bikes parked in front of a house caught fire   

Bikes, burnt

ಮನೆ ಮುಂದೆ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಫೆಬ್ರವರಿ 16ರ ತಡರಾತ್ರಿ ನೆಹರೂ ನಗರದಲ್ಲಿ ಈ ಕೃತ್ಯ ನಡೆದಿದೆ. ಸುಮಾರು ₹1.85 ಲಕ್ಷ ಮೌಲ್ಯದ ಬೈಕ್‌ಗಳು ಸುಟ್ಟು ಕರಕಲಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನೆಹರೂ ನಗರದ ನಿವಾಸಿ ಆದಿಲ್ ಎಂಬುವವರು ಫೆಬ್ರವರಿ 16ರ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ತಮಗೆ ಹಾಗೂ ತಮ್ಮ ಅಣ್ಣಂದಿರಿಗೆ ಸೇರಿದ ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೈಕ್‌ಗಳನ್ನು ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿ ಮಲಗಿದ್ದರು. ಫೆಬ್ರವರಿ 17ರ ಬೆಳಗಿನ ಜಾವ 2 ಗಂಟೆ ಹೊತ್ತಿಗೆ ಯಾವುದೋ ಸ್ಫೋಟದ ಶಬ್ದ ಕೇಳಿ ಮನೆಯವರು ಹೊರಬಂದು ನೋಡಿದಾಗ ಬೈಕ್‌ಗಳು ಬೆಂಕಿಗೆ ಆಹುತಿಯಾಗುತ್ತಿರುವುದು ಬೆಳಕಿಗೆ ಬಂದಿದೆ

ಕೂಡಲೇ ಎಚ್ಚೆತ್ತ ಮನೆಯವರು ಹಾಗೂ ನೆರೆಹೊರೆಯವರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ ಮೂರೂ ಬೈಕ್‌ಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು ಎಂದು ಆರೋಪಿಸಲಾಗಿದೆ. ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Three bikes parked in front of a house caught fire 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close