SUDDILIVE || SHIVAMOGGA
ಸೀಗೆಹಟ್ಟಿಯ ಸ್ನೇಹ ಹೇರ್ ಡ್ರೆಸಸ್ ಮಾಲೀಕ ಮಿಸ್ಸಿಂಗ್-Owner of Sneha Hairdresses in Seegehatti missing
ಸೀಗೆಹಟ್ಟಿ ಗಣಪತಿ ದೇವಸ್ಥಾನದ ಎದುರು ಸ್ನೇಹ ಹೇರ್ ಡ್ರೆಸಸ್ ಶಾಪ್ ಮಾಲೀಕ ಪ್ರಕಾಶ್ ಜಿ.ಬಿ. ಎಂಬ 53 ವರ್ಷದ ವ್ಯಕ್ತಿ ಫೆ.11 ರಂದು ಮನೆ ಬಿಟ್ಟು ಹೋದವರು ನಾಪತ್ತೆಯಾಗಿದ್ದಾರೆ.
ಅಂಗಡಿಯಿಂದ ಸಾಲದ ಸುಳಿಯಲ್ಲಿ ಸಿಲುಕಿ ಬೇಸರಗೊಂಡು ಮನೆಬಿಟ್ಟು ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಇವರ ಚಹರೆ 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿಬಣ್ಣ, ದುಂಡುಮುಖ ಹೊಂದಿದ್ದು, ಮನೆಯಿಂದ ಹೋಗುವಾಗ ಲೈಟ್ ಪಿಂಕ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈತನ ಬಗ್ಗೆ ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9480803345/ 9663919643 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Owner of Sneha Hairdresses in Seegehatti missing
