SUDDILIVE || SHIVAMOGGA
ರಸ್ತೆ ಡಿವೈಡರ್ ಗಳಲ್ಲಿ ಅಳತೆ ಮೀರಿದ ಫ್ಲೆಕ್ ಗಳಿಗೆ ಬ್ರೇಕ್ ಹಾಕಲು ಪಾಲಿಕೆಯಿಂದ ಪ್ರಕಟಣೆ- Announcement from the corporation to put a stop to oversized flexes on road dividers
ಬೃಹದಾಕಾರ ಹಾಗೂ ಅತಿ ಎತ್ತರದ ಟವರ್, ಫ್ಲೆಕ್ಸ್ ಟವರ್, ಕಟ್ ಔಟ್ ಗಳನ್ನ ರಸ್ತೆಗಳ ಡಿವಿಡರ್ ಗಳ ಮೇಲೆ ಅಳತೆ ಮೀರಿ ಫ್ಲೆಕ್ಸ್ ಅಳವಡಿಸುತ್ತಿರುವುದಕ್ಕೆ ಬ್ರೇಕ್ ಹಾಕಲು ಶಿವಮೊಗ್ಗದ ಮಹಾನಗರ ಪಾಲಿಕೆ ಮುಂದಾಗಿದೆ.
ಕಟೌಟ್, ಫ್ಲೆಕ್ಸ್ ಗಳಿಂದ ಸಾರ್ವಜನಿಕರ ಸಂಚಾರಕ್ಕೆ ಅಪಘಾತ, ಗಾಯ, ಪ್ರಾಣ ಹಾನಿಯಂತಹ ಘಟನೆಗಳು ಸಂಭವಿಸುತ್ತಿದ್ದು ಬ್ಯಾನರ್ ಬಂಟಿಂಗ್ ಪೋಸ್ಟರ್ ಗಳನ್ನು ಅಳವಡಿಸಲು ಜಾರಿಯಲ್ಲಿರುವ ನಿಯಮಗಳೊಂದಿಗೆ ಮಹಾನಗರ ಪಾಲಿಕೆ ಆಯುಕ್ತರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಯಾವುದೇ ರೀತಿಯ ಫ್ಲೆಕ್ಸ್ ಬ್ಯಾನರ್ ಬಂಟಿಂಗ್ ಗಳನ್ನು ಅಳವಡಿಸುವ ಮುನ್ನ ಪಾಲಿಕೆಯ ಪೂರ್ವಾನುಮತಿಯನ್ನು ಪಡೆಯುವುದು ಮೂರು ದಿನಗಳ ಅವಧಿಗೆ ಮಾತ್ರ ಫ್ಲೆಕ್ಸ್ ಬ್ಯಾನರ್ ಬಂಟಿಂಗಳ ಅಳವಡಿಕೆಗೆ ಅನುಮತಿ ನೀಡಲಾಗುತ್ತಿದ್ದು ನಿಗದಿತ ದಿನಾಗಳ ನಂತರ ಇವುಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ತೆರವುಗೊಳಿಸಲಾಗುವುದು.
ಈಗಾಗಲೇ ಪಾಲಿಕೆಯು ಫ್ಲೆಕ್ಸ್ ಗಳನ್ನು ರಸ್ತೆ ಸರ್ಕಲ್ ಗಳಲ್ಲಿ ಪ್ರಕಟಿಸುವುದನ್ನು ನಿರ್ಬಂಧಿಸಿದ್ದು ನಿರ್ಬಂಧಿತ ಸರ್ಕಲ್ ಗಳನ್ನು ಹೊರತುಪಡಿಸಿ ಜಾಹೀರಾತು ಫಲಕ ಫ್ಲಾಕ್ಸ್ ಬ್ಯಾನರ್ ಬಂಟಿಂಗ್ ಗಳನ್ನು ಅಳವಡಿಸಲು ಪಾಲಿಕೆ ವತಿಯಿಂದ ಅನುಮತಿಯನ್ನು ಪಡೆಯುವುದು ಅತಿ ಎತ್ತರ ಫ್ಲೆಕ್ಸ್ ಗಳು ಬ್ಯಾನರ್ ಗಳಿಗೆ ಅನುಮತಿ ನೀಡಲಾಗುವುದಿಲ್ಲ ಯಾವುದೇ ಮುನ್ಸೂಚನೆಯನ್ನು ನೀಡದೆ ಪಾಲಕಿಯು ಅಳತೆ ಮೀರಿ ಅಳವಡಿಸಿರುವ ಫ್ಲಕ್ಸ್ ಗಳನ್ನು ವಶಕ್ಕೆ ಪಡೆಯಲಿದೆ.
ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯಾಗದ ಹಾಗೆ ಜಾಗ ಫ್ಲೆಕ್ಸ್ ಗಳನ್ನು ಅಳವಡಿಸಬಹುದಾಗಿದೆ ಪಾಲಿಕೆ ವತಿಯಿಂದ ಗುರುತಿಸಿ ಅನುಮೋದಿಸಲಾದ ಸ್ಥಳಗಳಲ್ಲಿ ಮಾತ್ರ ಯಾರತು ಫಲಕ ಫ್ಲೆಕ್ಸ್ ಬ್ಯಾನರ್ ಬಂಟಿಂಗ್ ಗಳನ್ನು ಅಳವಡಿಸಲು ಕಡ್ಡಾಯವಾಗಿ ಸೂಚಿಸಲಾಗಿದೆ ಸಿಗ್ನಲ್ ಲೈಟ್ ವಿದ್ಯುತ್ ಕಮಗಳಿಗೆ ಯಾರದು ಫಲಕ ಫ್ಲೆಕ್ಸ್ ಬ್ಯಾನರ್ ಬಂಟಿಂಗ್ ಗಳನ್ನು ಅಳವಡಿಸುವಂತಿಲ್ಲ.
ಕೆಲವು ತುರ್ತು ಸಂದರ್ಭಗಳಲ್ಲಿ ಜಾಹೀರಾತು ಫ್ಲೆಕ್ಸ್ ಬ್ಯಾನರ್ ಬಂಟಿಂಗ್ ಗಳ ಆಕ್ಷೇಪವಾಗಿದ್ದರೆ ಪ್ರಚೋದನಕಾರಿ ಹೇಳಿಕೆಗಳನ್ನು ಚಿತ್ರಗಳನ್ನು ಪ್ರಕಟಿಸಿದ್ದಲ್ಲಿ ಯಾವುದೇ ಸಮುದಾಯಕ್ಕೆ ವ್ಯಕ್ತಿಗೆ ಸಂವಿಧಾನಿಕ ಸಂಸ್ಥೆಗೆ ಅವಮಾನ ಮಾಡುವಂತಹ ವಿಷಯದಿಂದ ಕೂಡಿದ್ದರೆ ಯಾವ ಸಮಯದಲ್ಲಾದರೂ ಪಾಲಿಕೆ ನೀಡಿರುವ ಅನುಮತಿಯನ್ನು ರದ್ದುಗೊಳಿಸಿ ಬ್ಯಾನರ್ ಗಳನ್ನು ತೆರವುಗೊಳಿಸಲಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Announcement from the corporation to put a stop to oversized flexes on road dividers
