ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ದರಿದ್ರತನ ಬಂದಿದೆ-ವಿಜೇಂದ್ರ ವಾಗ್ದಾಳಿ- Poverty has increased in the state since Congress came to power - Vijendra slams

 SUDDILIVE || SHIVAMOGGA

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ದರಿದ್ರತನ ಬಂದಿದೆ-ವಿಜೇಂದ್ರ ವಾಗ್ದಾಳಿ- Poverty has increased in the state since Congress came to power - Vijendra slams    

Vijendra, slams

ಸೂಳೇ ಬೈಲಿನಲ್ಲಿ ಫೆಬ್ರುವರಿ 24ರಂದು ಹತ್ಯೆಗೊಳಗಾದ ಬಾಲಕ ಸಂಕೇತ್ ಮನೆಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ ನಂತರ ವೈಯಕ್ತಿಕ ಧನಸಹಾಯದ ಮೂಲಕ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ

ಮಾಧ್ಯಮಗಳಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿದ್ಯಾರ್ಥಿಗಳಲ್ಲಿ ಅತ್ಗೆ ಮಾಡುವ ಹಂತಕ್ಕೆ ಅವರ ಮನಸ್ಥಿತಿ ತಲುಪಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಈ ಮನಸ್ಥಿತಿ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕುಟುಂಬಕ್ಕೆ ನೀಡಿರುವ ಪರಿಹಾರ ಕಡಿಮೆ ಆಯ್ತಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿವೈ ವಿಜೇಂದ್ರ ಮಂಗಳೂರಿನಲ್ಲಿ ಬೇರೆಕೋಮಿನವರು  ಹತ್ಯೆಯಾದಾಗ 25 ರಿಂದ 50 ಲಕ್ಷದವರೆಗೆ ಸರಕಾರ ಪರಿಹಾರ ನೀಡಿದೆ. ಯಲ್ಲಾಪುರದಲ್ಲಿ ನಡೆದ ಘಟನೆಯಲ್ಲಿಯೂ ಸಹ ಎಸ್ಸಿ ಎಸ್‌ಟಿಗೆ ನೀಡುವ ಪರಿಹಾರವನ್ನೇ ನೀಡಿದ್ದಾರೆ ಹೆಚ್ಚಿನ ಪರಿಹಾರ ನೀಡಿಲ್ಲ. ಶಿವಮೊಗ್ಗದಲ್ಲೂ ಮೃತಪಟ್ಟ ಸಂಕೇತ್ ಕುಟುಂಬ ದಲಿತ ಹಾಗೂ ಬಡ ಕುಟುಂಬಕ್ಕೆ ಸೇರಿದ್ದರಿಂದ ಹೆಚ್ಚಿನ ಪರಿಹಾರದ ಅಗತ್ಯವಿದೆ. ಕುಟುಂಬ ಸರ್ಕಾರಿ ನೌಕರಿಯ ಬಗ್ಗೆ ಬೇಡಿಕೆ ಇಟ್ಟಿದ್ದಾರೆ. ಸರ್ಕಾರದಿಂದ ಸರಿಯಾದ ಪರಿಹಾರ ನೀಡಬೇಕೆಂಬ ಒತ್ತಾಯವಿದೆ ನಾನು ಸಿಎಂ ಜೊತೆ ಮಾತನಾಡುವುದಾಗಿ ತಿಳಿಸಿದರು.


ರಾಜ್ಯದಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಗೃಹಸಚಿವರು ಸಂಬಂಧವಿಲ್ಲವೆಂಬಂತಿದ್ದಾರೆ

ನೆನ್ನೆ ಕೊಡಗಿನಲ್ಲಿ ಅನ್ನಕೋಮಿನವರಿಂದ ಹಿಂದು ಯುವಕನ ಮೇಲೆ ಹಲ್ಲೆ ನಡೆದಿದ್ದು ಈ ಘಟನೆ ಕುರಿತಂತೆ ಹಾಗೂ ಬಾಗಲಕೋಟೆಯಲ್ಲೂ ಸಹ ನಿನ್ನೆ ನಡೆದ ಗಲಾಟೆಯ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ ಗೃಹ ಸಚಿವರಿಗೂ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಗಲಾಟೆ, ಹತ್ಯೆಯ ಬಗ್ಗೆ  ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಎಲ್ಲಿ ತನಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. 

ಉಸ್ತುವಾರಿ ಸಚಿವರು ಸಾಂತ್ವಾನ ಹೇಳಬೇಕಿತ್ತು

ಇಂತಹ ಘಟನೆಗಳು ನಡೆದಾಗ ರಾಜ್ಯ ಸರ್ಕಾರದ ಸಚಿವರಾಗಲಿ ಗೃಹ ಸಚಿವರಾಗಲಿ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ. ಮೃತ ಸಂಕೇತ್ ಮನೆಗೆ ಸಹ ಜಿಲ್ಲಾ ಉಸ್ತುವಾರಿ ಸಚಿವರು ಬಂದು  ಧೈರ್ಯ ಹೇಳುವ ಕೆಲಸ ನಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕುಟುಂಬಕ್ಕೆ ಬಂದು ಸಾಂತ್ವಾನ ಹೇಳುವ ಸ್ಥಿತಿಯಲ್ಲೂ ಇಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದಾರೆ. ಮನುಷ್ಯತ್ವ ಇರುವ ಯಾವುದೇ ಸರ್ಕಾರ ಹೀಗೆ ನಡೆದುಕೊಳ್ಳುವುದಿಲ್ಲ ಪರಿಹಾರ ನೀಡುವುದು ದೂರದ ಮಾತು ಕೊನೆ ಪಕ್ಷ ಸಾಂತ್ವನನಾದರೂ ಹೇಳಬೇಕಿತ್ತು ಎಂದು ಆಗ್ರಹಿಸಿದರು.

ಅಧಿಕಾರದ ಮದವೇರಿದೆ

ಅಧಿಕಾರದ ಮದದಿಂದ ಈ ರೀತಿ ನಡೆದುಕೊಳ್ಳುವ ಶಂಕೆ ಇದೆ ಗೃಹ ಸಚಿವರ ಬೇಜವಾಬ್ದಾರಿತನದ ಹೇಳಿಕೆ, ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಹಾಗೂ ಯಾರು ಏನೇ ಮಾಡಿದರು ನಡೆತ್ತದೆ ಎಂಬ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆ ಬಗ್ಗೆ ಜನರಲ್ಲಿ ಭಯ ಇಲ್ಲದಂತಾಗಿದೆ. ರಾಜ್ಯ ಸರ್ಕಾರದ ಹೊಣೆಗೇಡಿತನ ಬಹಿರಂಗಗೊಂಡಿದೆ ಎಂದರು

ಬೆಲೆ ಏರಿಕೆ 6 ನೇ ಗ್ಯಾರೆಂಟಿ

ರಾಜ್ಯದ ಜನ ಇನ್ನೂ ಏನೇನು ಅನುಭವಿಸಬೇಕು ಗೊತ್ತಿಲ್ಲ ಗ್ಯಾರಂಟಿಯಲ್ಲಿ ಸರ್ಕಾರ ಮುಳುಗಿಹೋಗಿದೆ, ಸರ್ಕಾರದ ಆರನೇ ಗ್ಯಾರಂಟಿಯಾಗಿ ಬೆಲೆ ಏರಿಕೆ ಜನರಿಗೆ ಕೊಡುಗೆಯಾಗಿ ನೀಡಲಾಗಿದೆ ಎರಡುವರೆ ವರ್ಷದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮುಖೇನ ಸಾಮಾನ್ಯ ಜನರಿಗೆ ಬಡವರಿಗೆ ಬರೆ ಎಳೆಯುವ ಕೆಲಸ ಕಾಂಗ್ರೆಸ್ ಸರ್ಕಾರ ಮೂರು ವರ್ಷದಿಂದ ನಡೆಸಿಕೊಂಡು ಬರುತ್ತಿದೆ ಗ್ಯಾರಂಟಿಗೆ ಹಣವನ್ನು ಕೂಡಿಕರಿಸಲು ಸಾಧ್ಯವಾಗದೆ ಸರ್ಕಾರ ಒರೆಯಾಗಿದೆ ಯಾವ ತಾಲೂಕಿಗೆ ಹೋದರು ಜನ ಸರ್ಕಾರದ ವಿರುದ್ಧ ಇಡೀ ಶಾಪ ಹಾಕುತ್ತಿದ್ದಾರೆ ಮತ್ತೊಂದು ಕಡೆ ಆಡಳಿತ ಪಕ್ಷದ ಶಾಸಕರು ವಾರದ ವಿರುದ್ಧ ದೇಶಕ್ಕೆ ಹೋಗಿದ್ದಾರೆ, ಗ್ಯಾರಂಟಿಗಳನ್ನು ನಂಬಿಕೊಂಡು ದಿನ ದೂಡುವ ಪರಿಸ್ಥಿತಿಗೆ ಸರ್ಕಾರ ಬಂದಿದೆ ಸರ್ಕಾರ ಬಂದಾಗಿನಿಂದ ರಾಜ್ಯಕ್ಕೆ ದರಿದ್ರ ಬಂದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಅಭಿವೃದ್ಧಿ ಬಗ್ಗೆ ಸಂಪೂರ್ಣವಾಗಿ ಮರೆತು ಮುಖ್ಯಮಂತ್ರಿಗಳ ಸ್ಥಾನಕ್ಕಾಗಿ ಕಳೆದ ಒಂದು ವರ್ಷದಿಂದ ಕಾಳಗ ನಡೆಯುತ್ತಿದೆ ಒಂದು ಕಡೆ ಶಾಸಕರ ವಿದೇಶ ಪ್ರವಾಸ  ಮತ್ತೊಂದು ಕಡೆಯಲ್ಲಿ ಶಾಸಕರ ಡೆಲ್ಲಿ ಪ್ರವಾಸ ಮುಂದುವರೆದಿದೆ. ಇವರ ಹಗ್ಗ ಜಗ್ಗಾಟದಲ್ಲಿ ಕೂಸು ಬಡವಾದ ರೀತಿಯಲ್ಲಿ ರಾಜ್ಯದ ಜನ ಪರಿ ತಪಿಸುತ್ಎಂತಿದ್ದುದಾರೆ ಎಂದು ಟೀಕಿಸಿದರು

Poverty has increased in the state since Congress came to power - Vijendra slams

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close