SUDDILIVE || THIRTHAHALLI
ಹುಲಿಕಲ್ ಘಾಟಿಯಲ್ಲಿ ಖಾಸಗಿ ಬಸ್ ಗೆ ಬೆಂಕಿ- Private bus catches fire at Hulikal Ghati
ಕುಂದಾಪುರದಿಂದ ಶಿವಮೊಗ್ಗ ಹೋಗುತ್ತಿದ್ದ ಖಾಸಗಿ ಬಸ್ ಗೆ ಏಕಾಏಕಿ ಬೆಂಕಿ ಹತ್ತಿಕೊಂಡ ಘಟನೆ ಹುಲಿಕಲ್ ಘಾಟಿಯಲ್ಲಿ ನಡೆದಿದೆ. ಬೆಂಕಿ ಸಂಪೂರ್ಣ ಬಸ್ ಗೆ ಹತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟು ಕರಕಲು ಆಗಿದೆ.
ಮಧ್ಯಾಹ್ನ ಕುಂದಾಪುರದಿಂದ ಶಿವಮೊಗ್ಗ ಹೋಗುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಸಂಪೂರ್ಣ ಬಸ್ ಗೆ ಬೆಂಕಿ ಆವರಿಸಿದೆ. ಬಸ್ ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ 30 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರಂಭದಲ್ಲಿ ಇಂಜಿನ್ ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡು ನಂತರ ಬಸ್ ಗೆ ಸಂಪೂರ್ಣ ಬೆಂಕಿ ಹತ್ತಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಬಸ್ ಸಂಪೂರ್ಣ ಸುಟ್ಟು ಕರಕಲು ಆಗಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
Private bus catches fire at Hulikal Ghati

