SUDDILIVE | | SHIVAMOGGA
ಸಂತೆಕಡೂರಿನ ಬಳಿ ಬುಲೆಟ್ ಮತ್ತು ಬೈಕ್ ನಡುವೆ ಡಿಕ್ಕಿ ಬುಲೆಟ್ ಸವಾರ ಸಾವು-Bullet rider dies in collision between Bullet and bike near Santhekadur
ಸಂತೆಕಡೂರಿನ ಬಳಿ ಬುಲೆಟ್ ಮತ್ತು ಬೈಕ್ ಗಳ ನಡುವೆ ಡಿಕ್ಕಿ ಉಂಟಾಗಿ ಬುಲೆಟ್ ಸವಾರ ಸ್ಥಳದಲ್ಲಿಯೇ ಸಾವಾಗಿರುವ ಘಟನೆ ವರದಿಯಾಗಿದೆ. ಈ ಘಟಬೆ ಇಂದು ಮಧ್ಯಾಹ್ನ ಸಂಭವಿಸಿದೆ.
ಸಂತೆ ಕಡೂರಿನಲ್ಲಿ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಕೆಎ 14 X 6123 ಕ್ರಮ ಸಂಖ್ಯೆಯ ಸ್ಪ್ಕೆಂಡರ್ ಬೈಕ್ ನಲ್ಲಿ ಬರುತ್ತಿದ್ದ ಸವಾರ ದಿಡೀರ್ ಎಂದು ಬಲಕ್ಕೆ ತಿರುಗಿದ ಪರಿಣಾಮ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರ ಸ್ಪ್ಲೆಂಡರ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.
ಎನ್ ಫೀಲ್ಡ್ ಇಂಟರ್ ಸೆಪ್ಟರ್ ಬುಲೆಟ್ ನಲ್ಲಿ ಬರುತ್ತಿದ್ದ ಕೌಶಿಕ್ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಈ ಘಟನೆಯಲ್ಲಿ ಯೋಗೀಶ್ ಎಂಬುವರಿಗೆ ಕಾಲು ಮುರಿದಿದೆ. ಸ್ಪ್ಲೆಂಡರ್ ಸವಾರನಿಗೂ ಗಾಯಗಳಾಗಿವೆ. ಇಬ್ಬರನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Bullet rider dies in collision between Bullet and bike near Santhekadur
