SUDDILIVE || SHIKARIPURA
ಶಿಕಾರಿಪುರ-ಪೊಲೀಸರಿಗೆ ಬೈಕ್ ಡಿಕ್ಕಿ, ಗಾಯಾಳು ಶಿವಮೊಗ್ಗಕ್ಕೆ ಶಿಫ್ಟ್-Shikaripura-Policeman hit by bike, injured shifted to Shivamogga
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ವೊಂದು ಡಿಕ್ಕಿಹೊಡೆದಿದ್ದು, ಗಾಯಗೊಂಡ ಪೊಲೀಸರನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಇಂದು ಸಂಜೆ ನಡೆದಿದೆ.
ಶಿಕಾರಿಪುರದ ಅಕ್ಕಮಹಾದೇವಿ ವೃತ್ತದಲ್ಲಿ ಪಾರ್ಕಿಂಗ್ ಲಾಟ್ ನಲ್ಲಿ ವಾಹನಗಳನ್ನ ತೆಗೆಸುತ್ತಿದ್ದ ಶಂಕರ್ ಎಂಬ ಪೊಲೀಸರಿಗೆ ಬೈಕ್ ವೊಂದು ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿದ್ದ ಮೂವರು ಸವಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಕ್ಷಣವೇ ಸ್ಥಳೀಯರೆಲ್ಲ ಸೇರಿ ಸಾರ್ವಜನಿಕ ಆಸ್ಪತ್ರೆ ಶಿಕಾರಿಪುರಕ್ಕೆ ಶಂಕರ್ ನ್ನ ಸಾಗಿಸಿದ್ದರು. ತಲೆಗೆ ಗಾಯವಾಗಿದ್ದರಿಂದ ಅವರನ್ನ ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೂವರು ಬೈಕ್ ಸವಾರರನ್ನ ಕಪ್ಪನಹಳ್ಫಿ ಗ್ರಾಮದವರು ಎನ್ನಲಾಗಿದೆ.
