SUDDILIVE || SHIVAMOGGA
ಅಳುತ್ತ ನಿಂತ ಮಹಿಳೆಗೆ ಆಸರೆಯಾಗಿದ್ದು ಅಕ್ಕಪಡೆ- A woman who was crying was supported by Akka force
ನಗರದಲ್ಲಿ ಅಕ್ಕಪಡೆ ನಿಧಾನವಾಗಿ ಮಹಿಳೆಯರ ಸಮಸ್ಯೆಗೆ ಸ್ಪಂದಿಸುತ್ತಿದೆ. ಮೊನ್ನೆ ಶಿವರಾತ್ರಿಯ ದಿನದಂದು ಹರಕೆರೆಯ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದವರನ್ನ ರಕ್ಷಿಸಿ ಸಾಂತ್ವಾನ ಕೇಂದ್ರಕ್ಕೆ ದಾಖಲಿಸಿದ ಅಕ್ಕಪಡೆ. ಅಂದೇ ಮತ್ತೊಂದು ಕಾರ್ಯಕ್ಕೆ ಸಹ ಸಾಕ್ಷಿಯಾಗಿದೆ.
ಫೆ.15 ರಂದು ಸಂಜೆ 7:30 ಸಮಯದಲ್ಲಿ ಶಿವಾಲಯ ದೇವಸ್ಥಾನ ವಿನೋಬನಗರ ಅಕ್ಕಪಡೆ ಕರ್ತವ್ಯದಲ್ಲಿ ಗಸ್ತು ನಿರ್ವಹಿಸುತ್ತಿದ್ದ ವೇಳೆ ಶಿವಾಲಯ ದೇವಸ್ಥಾನದ ಎದುರು ಒಬ್ಬ ಮಹಿಳೆ ಒಂಟಿಯಾಗಿ ಅಳುತ್ತಾ ನಿಂತಿದ್ದರು.
ವಿಚಾರಿಸಿದ ಅಕ್ಕಪಡೆಯ ಸಿಬ್ಬಂದಿಗೆ ಮಾಹಿತಿ ದೊರೆತಿದೆ. ಅನ್ನಪೂರ್ಣೇಶ್ವರಿ ಪಿಜಿ ಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಪಿಜಿಯವರು ಜಗಳ ಮಾಡಿಕೊಂಡ ವಿಷಯ ಬೆಳಕಿಗೆ ಬಂದಿದೆ. ಈ ವಿಷಯವನ್ನ ಮಹಿಳೆ ಅಕ್ಕಪಡೆಗೆ ಅಳುತ್ತ ಹೇಳಿದ್ದಾರೆ.
ತಕ್ಷಣವೇ ಪಿಜಿ ಅವರನ್ನು ಸಹ ಕರೆಯಿಸಿ ವಿಚಾರಿಸಲಾಗಿದೆ. ಆದರೆ ಮಹಿಳೆಗೆ ಪಿಜಿ ಅವರೊಂದಿಗೆ ಹೋಗಲು ಇಷ್ಟವಿಲ್ಲದ ಕಾರಣ ನನಗೆ ಯಾರು ಇಲ್ಲ ಆಶ್ರಯ ಬೇಕಾಗಿದೆ ಎಂದು ಕೇಳಿದ್ದಾರೆ. ಅವರನ್ನ ಶಕ್ತಿ ಸದನಕ್ಕೆ ತಂದು ಅಕ್ಕ ಪಡೆ ದಾಖಲಿಸಿದೆ.
A woman who was crying was supported by Akka force
